LOCAL NEWS : “ಶಹಾಪೂರ | ಭವಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ”

By admin

“ಶಹಾಪೂರ | ಭವಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಶಿಕ್ಷಕರ ದಿನಾಚರಣೆ”

• ಸೆಕ್ಯೂಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ : 

ಶಹಾಪುರ : ನಗರದ ಭವಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ  ಅಶೋಕ ಘನಾತೆ ಮಾತನಾಡಿ,  ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.

ಶಿಕ್ಷಕರು ಮಕ್ಕಳ ಏಳಿಗೆಗಾಗಿ ಸದಾ ಶ್ರಮಿಸಬೇಕು ಸರ್ವಪಲ್ಲಿ ರಾಧಾಕೃಷ್ಣ ಅವರ ಜೀವನ ಆದರ್ಶವನ್ನು ಮಕ್ಕಳಿಗೆ ತಿಳಿಸಿ ಶಿಸ್ತು ಬದ್ಧ ಶಿಕ್ಷಣಕ್ಕೆ ಬುನಾದಿ ಹಾಕಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜ್ಯೋತಿ ಘನಾತೆ, ಶಿಕ್ಷಕಿ ಭವಾನಿ ಪೊಲೀಸ್ ಪಾಟೀಲ, ಕೋಮಲ ಬಾಸುತ್ಕರ,  ಐಶ್ವರ್ಯ ಬಾಸುತ್ಕರ್, ಸುಮೈಯಾ ಅಮೃತಾ ಬಾಳ0ಕರ್ ಇದ್ದರು.

ನಂತರ ಶಾಲೆಯಲ್ಲಿ ಮಕ್ಳಳಿಂದ  ಕ್ರೀಡೆಯನ್ನು ಏರ್ಪಡಿಸಲಾಯಿತು.  ಬಳಿಕ ಸಂಸ್ಕೃತಿಕ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮದ ನಿರೂಪಣೆಯನ್ನು ಕಾವ್ಯ ಮತ್ತು ವೀಣಾ ನಿರ್ವಹಿಸಿದರು ಸಹನಾ ಯಾಳಗಿ ಪ್ರಾರ್ಥಿಸಿದರು ಸ್ವಾತಿ ವಂದಿಸಿದರು.