“ಯಾದಗಿರಿ| ಪಿ.ಆರ್.ಇ ವಿಭಾಗದ E E ಅವರಿಂದ ಭ್ರಷ್ಟಾಚಾರ, ಹಣಲೂಟಿ ಆರೋಪ : ಕ್ರಮಕ್ಕೆ ಜಯ ಕರ್ನಾಟಕ ಆಗ್ರಹ”
• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಯಾದಗಿರಿ:ಇಲ್ಲಿನ ಪಿ.ಆರ್.ಇ. ವಿಭಾಗ ಮತ್ತು ಉಪವಿಭಾಗದಿಂದ ಪ್ರಕಾಶ ಕುಲ್ಕರ್ಣಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೆಕ್ಕ ಅಧೀಕ್ಷಕರು, ನಿರ್ವಹಣೆ ಅನುದಾನ ಸಂಖ್ಯೆ 2059 ಅಡಿಯಲ್ಲಿ ಕಾಮಗಾರಿಗಳನ್ನು ಯಾವುದೇ ಟೆಂಡರ್ ಕರೆಯದೇ, ಅಗ್ರಿಮೆಂಟ್ ಮಾಡದೆ, ತಮಗೆ ಬೇಕಾದ ಗುತ್ತಿಗೆದಾರರು, ಏಜೆನ್ಸಿಯಾದ ಶ್ರೀ ಜಿಕ್ರಿಯಾ ರಿಂದ ಮಾಡಿಸುತ್ತಿದ್ದು, ಇದರ ಬಗ್ಗೆ ದೂರು ನೀಡಿದ್ದು, ಮತ್ತು ಮಾಹಿತಿ ಹಕ್ಕಿನಡಿ ಅರ್ಜಿಗೆ ಉತ್ತರ ನೀಡದೇ ವಿಳಂಬ, ನಿಷ್ಕಾಳಜಿತನ ತೋರಿರುವ ಇ.ಇ. ಎ.ಇ.ಇ. ಅಕೌಟೆಂಟ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಮಾತನಾಡಿ, ಇಲಾಖೆಯ ನಿರ್ವಹಣೆ ಅನುದಾನದಡಿ ಪಿ.ಆರ್.ಇ. ವಿಭಾಗ ಮತ್ತು ಉಪವಿಭಾಗದಿಂದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೆಕ್ಕ ಅಧೀಕ್ಷಕರು, ಕಾಮಗಾರಿಗಳನ್ನು ಯಾವುದೇ ಟೆಂಡರ್ ಕರೆಯದೇ, ತಮಗೆ ಬೇಕಾದ ಗುತ್ತಿಗೆದಾರರಿಗೆಬವಹಿಸಿಕೊಟ್ಟಿದ್ದು, ಕಳೆದ ವರ್ಷ ಕೂಡಾ ಇದೇ ರೀತಿ ಇದೇ ಏಜೆನ್ಸಿಯಿಂದ ಮಾಡಿಸಿ ಹಣ ದುರ್ಬಳಕೆ ಮಾಡಿರುತ್ತಾರೆ. , ಸಂಪೂರ್ಣ ಕಳಪೆ ಸಾಮಾಗ್ರಿ ಬಳಸಿರುತ್ತಾರೆ ಎಂದು ಅವರು ಆರೋಪಿಸಿದ್ದರು.
ಈ ಕುರಿತು ಜಿ.ಪಂ. ಸಿ.ಇ.ಓ. ರವರಿಗೂ ದೂರು ನೀಡಿದರೂ ಕೂಡಾ ಕ್ರಮಕ್ಕೆ ಮುಂದಾಗಿಲ್ಲ. ಅವ್ಯವಹಾರಕ್ಕೆ ಸಾಕ್ಷಿಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದಕ್ಕೂ ಮುಂಚೆ ತಮಗೂ ಕೂಡಾ ದೂರು ನೀಡಿದರೂ ಕ್ರಮವಾಗಿರುವುದಿಲ್ಲ. ಈ ಬಗ್ಗೆ ನಮಗೆ ಕ್ರಮ ಜರುಗಿಸಿ ಉತ್ತರ ನೀಡಿರುವುದಿಲ್ಲ. ಸದರಿ ಉಪವಿಭಾಗಕ್ಕೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದು, ಅದಕ್ಕು ಮಾಹಿತಿ ನೀಡಿಲ್ಲ, ಮೇಲ್ಮನವಿ ಸಲ್ಲಿಸಿದರೂ ಕೂಡಾ ಮಾಹಿತಿ ನೀಡದೇ ಇರುವುದು ನೋಡಿದರೆ ಇಲ್ಲಿನ ಅವ್ಯವಹಾರ ಬಯಲಿಗೆ ಬರುತ್ತದೆ. ಪಾಲುದಾರಿಕೆ ಮೇಲೆ ಕಾಮಗಾರಿ ಮಾಡಿ ಅವರಿಗೆ ಬಿಲ್ ಪಾವತಿ ಮಾಡಿ, ಹಣ ಲೂಟಿಗೆ ಇಳಿದಿದ್ದು, ಕೆಲವೇ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದು, ಇವರ ಅವಧಿಯಲ್ಲಿನ ತನಿಖೆಗೆ ಆದೇಶಿಸಬೇಕೆಂದು ಮನವಿ ಮಾಡಿದರು.