“ಕುಷ್ಟಗಿ| ಮೊಹಮ್ಮದ್ ಪೈಗಂಬರ್ ರವರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಲು ಅಭಿನವ ಸಿದ್ಧಾರೂಢ ಮಹಾಸ್ವಾಮಿಜೀ ಕರೆ”
• ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ತಾವರಗೇರಾ : ನ್ಯಾಯದ ಹರಿಕಾರ ಎಂದೇ ಬಿಂಬಿತರಾಗಿದ್ದ ಮೊಹಮ್ಮದ್ ಪೈಗಂಬರ್ ರವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಅವರ ತತ್ವಗಳನ್ನು ಪರಿಪಾಲನೆ ಮಾಡುವ ಮೂಲಕ ಸರ್ವ ಧರ್ಮದವರು ಕೂಡ ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಬಾಳಬೇಕಾಗಿದೆ ಎಂದು ಸಿದ್ಧಾರೂಢ ಮಠದ ಅಭಿನವ ಸಿದ್ಧಾರೂಢ ಮಹಾಸ್ವಾಮಿಜೀ ಅವರು ಅಭಿಪ್ರಾಯಪಟ್ಟರು.
ಅವರು ಕುಷ್ಟಗಿ ತಾಲ್ಲೂಕಿನ ತಾವರಗೆರೆ ಪಟ್ಟಣದ ಜಮಾತೆ ಇಸ್ಲಾಂ ಹಿಂದ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿಚಾರಗೋಷ್ಠಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಂಗಳವಾರ ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ನಡೆಯುತ್ತಿರುವ ಬೆಳವಣಿಗಳನ್ನು ಗುರುತಿಸಿದಾಗ ದೇವರನ್ನು ನಾವು ಜಾತಿ ರೂಪದಲ್ಲಿ ನೋಡುತ್ತಿದ್ದೇವೆ ಅದು ಹೋಗಬೇಕಾಗಿದೆ ಎಲ್ಲ ಜನರಿಗೂ ದೇವರೊಬ್ಬನೇ ನಾಮ ಹಲವು ಆದುದರಿಂದ ಸಮಾಜದಲ್ಲಿ ಒಗ್ಗಟ್ಟಿನಿಂದ ಜೀವನ ನಡೆಸಿದಾಗ ಮಾತ್ರ ಸಮಾಜದಲ್ಲಿ ಒಳ್ಳೆ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕ ಶಾಮಿದಲಿ ಹೀರೆಮನ್ನಾಪುರ್ ಮಾತನಾಡಿ, ಇಂದಿನ ಸಮಾಜದಲ್ಲಿ ನಾವೆಲ್ಲರೂ ಸಮಾನತೆಯಿಂದ ಬಾಳಬೇಕಾದರೆ ನಾರಾಯಣಗುರು, ಭಕ್ತ ಕನಕದಾಸರು, ಬಸವಣ್ಣನವರು, ಮಹಮ್ಮದ್ ಪೈಗಂಬರ, ಸ್ವಾಮಿ ವಿವೇಕಾನಂದರ ಆದರ್ಶಗಳು ಒಂದು ಜಾತಿಗೆ ಸಿಮೀತ ಮಾಡದೆ ನಮ್ಮ ಜೀವನದಲ್ಲಿ ಅಳವಡಿಸಿಕೊಡರೆ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದರು.
ಪ್ರತಿಯೊಂದು ಧರ್ಮದಲ್ಲೂ ಅವರದೇ ಆಚರಣೆಗಳು ಇರುತ್ತವೆ . ರಾಜರ ಕಾಲದಲ್ಲಿ ಹಲವಾರು ಯುದ್ದಗಳು ಆಗಿವೆ ಆ ಯುದ್ದಗಳಲ್ಲಿ ಭೂಮಿ, ವಜ್ರ, ಬೆಲೆ ಬಾಳುವ ಆಭರಣಗಳನ್ನು ಮಾತ್ರ ಗೆದ್ದುಕೊಂಡು ಹೊದರೇ ವಿನಃ ಅವರವರ ಜ್ಞಾನವನ್ನು ಯಾರು ಕಸಿದುಕೊಂಡು ಹೊಗಿಲ್ಲ. ಪರಸ್ಪರ ಸೌಹಾರ್ದತೆಯಿಂದ ಕೂಡಿ ಬಾಳಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಂತಿ ಪ್ರಕಾಶನದ ಮೊಹಮ್ಮದ್ ಪೈಗಂಬರ್(ಸ)ಅರಿಯಿರಿ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಜಮಾತ್ ಇಸ್ಲಾಂ ಹಿಂದ ಅಧ್ಯಕ್ಷಮೌಲಾನ ರಫಿ ಉಲ್ಲಾ ಮಸೀದಿಯ ಅಧ್ಯಕ್ಷ ಫಯಾಜ್ ಸಾಬ್ ಮುಲ್ಲಾ, ಜಿಲ್ಲಾ ಸಂಚಾಲಕ ದಿಲಾವರ ಅಂಬರ್ ಸಾಬ್ ,ಎಂ.ಡಿ .ರಫೀಕ್ ಅವರು ಸೇರಿದಂತೆ ಹಲವರು ಇದ್ದರು.