LOCAL EXPRESS : “ಕುಷ್ಟಗಿ |ಆಧಾರ ನೋಂದಣಿ ಕೇಂದ್ರ  ಸ್ಥಗಿತ :  ಶೀಘ್ರವೇ ಪುನಾರಂಭಿಸಲು ನಜೀರಸಾಬ್‌ ಮೂಲಿಮನಿ ಒತ್ತಾಯ”

By admin

“ಕುಷ್ಟಗಿ |ಆಧಾರ ನೋಂದಣಿ ಕೇಂದ್ರ  ಸ್ಥಗಿತ :  ಶೀಘ್ರವೇ ಪುನಾರಂಭಿಸಲು ನಜೀರಸಾಬ್‌ ಮೂಲಿಮನಿ ಒತ್ತಾಯ”

• ಸೆಕ್ಯೂಲರ್‌ ವಾಯ್ಸ್‌ ನ್ಯೂಸ್‌ : 

ಕುಷ್ಟಗಿ : ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಆಧಾರ ನೊಂದಣಿ ಕೇಂದ್ರ ಮರು ಸ್ಥಾಪನೆ  ಹಾಗೂ ಸಮೀಕ್ಷೆಯಿಂದ ತೋಟದ ಮನೆಯಲ್ಲಿ ವಾಸಿಸುವ ರೈತ ಕುಟುಂಬಗಳು ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು  ಒತ್ತಾಯಿಸಿ  ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ ಅವರು  ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕೈಗೊಂಡಿದ್ದು, ಸಮೀಕ್ಷೆಗೆ ಕಡ್ಡಾಯವಾಗಿ ಆಧಾರ್‌ಕಾರ್ಡ್ ಮೂಲ ದಾಖಲೆಯಾಗಿದೆ. ಆಧಾರ್‌ಕಾರ್ಡ್‌ಲ್ಲಿ ಅನೇಕ ನ್ಯೂನ್ಯತೆಗಳಿದ್ದು ಬಹಳಷ್ಟು ನಾಗರಿಕರ ರೈತರ ಬಯೋಮೆಟ್ರಿಕ್ ಸಮಸ್ಯೆಗಳಿವೆ ಆಧಾರ್‌ಲಿಂಕ್ಸ್ ಮೊಬೈಲ್ ನಂಬರ್‌ಇರುವುದು ಕಡ್ಡಾಯವಾಗಿದ್ದು, ಅನೇಕರ ಆಧಾರ್‌ಕಾರ್ಡ್ ಗಳಲ್ಲಿ ಹಳೆಯ ನಂಬರ್‌ ಇದ್ದು ಹೊಸ ನಂಬರ್‌ಲಿಂಕ್ ಮಾಡಬೇಕಿದೆ ಬಹುತೇಕ ಆರು ವರ್ಷದ ಮಕ್ಕಳ ಆಧಾರ್‌ಕಾರ್ಡ್ ಗಳಲ್ಲಿ ಸಮಸ್ಯೆಗಳಿದ್ದು, ಬಯೋಮೆಟ್ರಿಕ್ ಅಷ್ಟೇಟ್ ಆಗಬೇಕಿದೆ ಹೊಸ ಆಧಾರ್‌ಕಾರ್ಡ್ ನೋಂದಣಿ ಮಾಡಿಕೊಳ್ಳಬೇಕಿದೆ ಎಂದರು.

 ಜಿಲ್ಲೆಯಾದ್ಯಂತ ಬ್ಯಾಂಕು, ನಾಡಕಚೇರಿ, ಪೋಸ್ಟ್ ಆಫೀಸ್ ಗಳಲ್ಲಿರುವ ಬಹುತೇಕ ಆಧಾರ್‌ಕಾರ್ಡ್ ನೋಂದಣಿ ಕೇಂದ್ರಗಳು ಸ್ಥಗಿತಗೊಂಡಿವೆ, ಶೀಘ್ರವೇ ಪುನಾರಾರಂಭಿಸಬೇಕು ಹಾಗೂ ಜೆಸ್ಕಾಂ ಅಧಿಕೃತ ಸಮೀಕ್ಷೆಯ ಪ್ರಕಾರ  ಅನೇಕರ ಆಧಾರ್‌ಕಾರ್ಡ್ ಗಳಲ್ಲಿ ಹಳೆಯ ನಂಬರ್‌ಇದ್ದು ಹೊಸ ನಂಬರ್‌ಲಿಂಕ್ ಮಾಡಬೇಕಿದೆ. ಬಹುತೇಕ ಆರು ವರ್ಷದ ಮಕ್ಕಳ ಆಧಾರ್‌ಕಾರ್ಡ್ ಗಳಲ್ಲಿ ಸಮಸ್ಯೆ  ಜಿಲ್ಲೆಯಲ್ಲಿ ಎಂಟುಸಾವಿರ ರೈತಕುಟುಂಬಗಳು ತೋಟದ ಮನೆಗಳಲ್ಲಿ ವಾಸಿಸುತ್ತಿದ್ದು ಅಲ್ಲಿ ಮೀಟರ್‌ಇರುವುದಿಲ್ಲ ಸಮೀಕ್ಷೆಯ ಸ್ಟೀಕರ್‌ ಅಂಟಿಸಿರುವುದಿಲ್ಲ ಈ ಸಮೀಕ್ಷೆಯಿಂದ ತೋಟದ ಮನೆಯಲ್ಲಿ ವಾಸಿಸುವ ರೈತ ಕುಟುಂಬಗಳು ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್‌ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಶೀಘ್ರದಲ್ಲಿ ಆಧಾರ್‌ಕಾರ್ಡ್ ನೋಂದಣಿಕ್ಯಾಂಪ್‌ ಪ್ರಾರಂಭಿಸಲಾಗುವುದು ಹಾಗೂ ತೋಟದ ಮನೆಗಳಲ್ಲಿ ವಾಸಿಸುವ ರೈತ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಕೈಗೊಳ್ಳಲಾಗುವುದು ಎಂದರು.