“ಮುಂಬೈ | ಚಿಕನ್ ಬೇಕು ಎಂದು ಹಠ ಹಿಡಿದ ಮಕ್ಕಳು : ಸಿಟ್ಟಿಗೆದ್ದು ಲಟ್ಟಣಿಗೆಯಿಂದ ಹೊಡೆದ ತಾಯಿ – ಮಗ ಸಾವು.!
Contents
“ಮುಂಬೈ | ಚಿಕನ್ ಬೇಕು ಎಂದು ಹಠ ಹಿಡಿದ ಮಕ್ಕಳು : ಸಿಟ್ಟಿಗೆದ್ದು ಲಟ್ಟಣಿಗೆಯಿಂದ ಹೊಡೆದ ತಾಯಿ – ಮಗ ಸಾವು.! • ಸೆಕ್ಯೂಲರ್ ವಾಯ್ಸ್ ಡೆಸ್ಕ್ ನ್ಯೂಸ್ : ಮುಂಬೈ : ಚಿಕನ್ ಬೇಕು ಎಂದು ಹಠ ಹಿಡಿದು ಒತ್ತಾಯಿಸಿದ ಮಗನನ್ನು ಸ್ವತಃ ತಾಯಿಯೇ ಲಟ್ಟಣಿಗೆಯಿಂದ ಹೊಡೆದು ಮಗನನ್ನು ಕೊಂದ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಬೆಳಕಿಗೆ ಬಂದಿದೆ.ಮೃತ ಬಾಲಕನನ್ನು ಚಿನ್ಮಯ ಧುಮ್ಡೆ (7) ಎಂದು ಗುರುತಿಸಲಾಗಿದೆ. ಬಾಲಕ ತನ್ನ ತಾಯಿ ಪಲ್ಲವಿ (40) ಧುಮ್ಡೆ ಬಳಿ ಚಿಕನ್ ಬೇಕು ಎಂದು ಕೇಳಿ ಹಠ ಮಾಡುತ್ತಿದ್ದನು. ಇದರಿಂದ ಕೋಪಗೊಂಡ ತಾಯಿ ಮಗನನ್ನು ಹೊಡೆದು ಹತ್ಯೆಗೈದಿದ್ದಾಳೆ.ಅಲ್ಲದೇ ತನ್ನ 10 ವರ್ಷದ ಮಗಳ ಮೇಲೂ ಹಲ್ಲೆ ನಡೆಸಿದ್ದಾಳೆ. ಮಗಳಿಗೂ ಸಹ ಗಂಭೀರ ಗಾಯ ಗಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆಮಕ್ಕಳ ಕಿರುಚಾಟ ಕೇಳಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪಾಲ್ಘರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ಬಂಧಿಸಿದ್ದಾರೆ.ಮಹಿಳೆಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103(1) (ಕೊಲೆ) ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ದೇಶ್ಮುಖ್ ತಿಳಿಸಿದ್ದಾರೆ.

