KOPPAL NEWS :”ಕೊಪ್ಪಳ | ಜಿಲ್ಲೆಯಾದ್ಯಂತ ಭಗತ್‌ ಸಿಂಗ್‌ ಅವರ 118ನೇ ಜನ್ಮದಿನಾಚರಣೆ  : ಎಐಡಿವೈಓ ಸಂಘಟನೆಯಿಂದ  ಬೈಕ್‌ ರ್ಯಾಲಿ ಸೇರಿ ವಿವಿಧ ಸಂಘಟನೆಗಳಿಂದ  ಕಾರ್ಯಕ್ರಮ” 

By admin

“ಕೊಪ್ಪಳ | ಜಿಲ್ಲೆಯಾದ್ಯಂತ ಭಗತ್‌ ಸಿಂಗ್‌ ಅವರ 118ನೇ ಜನ್ಮದಿನಾಚರಣೆ  : ಎಐಡಿವೈಓ ಸಂಘಟನೆಯಿಂದ  ಬೈಕ್‌ ರ್ಯಾಲಿ ಸೇರಿ ವಿವಿಧ ಸಂಘಟನೆಗಳಿಂದ  ಕಾರ್ಯಕ್ರಮ” 

“ಭಗತ್‌ ಸಿಂಗ್‌ ಅವರ ಸಮಾಜವಾದಿ ಭಾರತ ಕನಸು ಸಾಕಾರಗೊಳಿಸಲು ಯುವಜನತೆ ಸಜ್ಜಾಗಬೇಕು  : ಎಐಡಿವೈಓ ಮುಖಂಡ  ಶರಣು ಗಡ್ಡಿ ಕರೆ”

• ವರದಿ : ಭೀಮಾಶಂಕರ ಪಾಣೇಗಾಂವ

ಸೆಕ್ಯೂಲರ್‌ ವಾಯ್ಸ್‌  ನ್ಯೂಸ್‌ ಕೊಪ್ಪಳ :

ಕೊಪ್ಪಳ : ಯುವಕರಿಂದ  ಭಗತ್ ಸಿಂಗ್ ಜನ್ಮ ದಿನ ಪ್ರಯುಕ್ತ ಬೈಕ್‌ ರ್ಯಾಲಿ! 

ಕೊಪ್ಪಳ : ಧೀರ ಹುತಾತ್ಮ ಭಗತ್ ಸಿಂಗ್ ರವರ 118ನೇ ಜನ್ಮದಿನಾಚರಣೆಯನ್ನು ಬೈಕ್ ಜಾಥಾ ದ ಮೂಲಕ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗ್ನೇಸೇಷನ್(ಎಐಡಿವೈಓ) ಸಂಘಟನೆ ವತಿಯಿಂದ ಭಾನುವಾರ ಆಚರಿಸಲಾಯಿತು.

″ಭಗತ್‌ ಸಿಂಗ್‌ ನಮ್ಮ ಆದರ್ಶ.! ಇಂಕ್ವಿಲಾಬ್ ಜಿಂದಾಬಾದ್, ಭಗತ್ ಸಿಂಗ್ ಅಮರವಾಗಲಿ, ಭಗತ್ ಸಿಂಗ್ ಕನಸಿನ ಭಾರತ ನನಸಾಗಲಿ ಎಂಬ ಘೋಷಣೆಗಳೊಂದಿಗೆ  ವಿದ್ಯಾರ್ಥಿ ಯುವಕರು  ಘೋಷಣೆ ಕೂಗುತ್ತಾ  ಬೈಕ್ ರ್ಯಾಲಿಯ   ಲೇಬರ್ ಸರ್ಕಲ್ ನಲ್ಲಿ ಉದ್ಘಾಟನೆಗೊಂಡು, ಅಶೋಕ ವೃತ್ತ, ಭಗತ್ ಸಿಂಗ್ ವೃತ್ತ, ಗಡಿಯಾರ ಕಂಬ, ಜವಾಹರ ರೋಡ್ ಮೂಲಕ ಹಾದು ಹೋಗಿ ಕೊನೆಗೆ ಸಂಘಟನೆ ಕಚೇರಿ ವರೆಗೆ ನಡೆಯಿತು.

ಬಳಿಕ ಮಾತನಾಡಿದ ಎ ಐ ಡಿ ವೈ ಓ  ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶರಣು ಗಡ್ಡಿ ಮಾತನಾಡಿ, ಪ್ರಸಕ್ತ ಭಾರತದಲ್ಲಿ ಕೋಮುವಾದ, ಜಾತಿವಾದ, ನಿರುದ್ಯೋಗ ಸಮಸ್ಯೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ, ಹೋರಾಡಲು ಭಗತ್ ಸಿಂಗ್ ರವರ ವಿಚಾರಗಳು ಪ್ರೇರಣೆಯಾಗಬೇಕೆಂದು ಸವಿಸ್ತಾರವಾಗಿ ಹೇಳಿದರು, ಭಗತ್ ಸಿಂಗ್ ರವರ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡದೆ, ಶೋಷಣೆ ವಿರುದ್ಧ ಹೋರಾಟದ ಸಂಕಲ್ಪ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಜಿಲ್ಲಾ ಅಧ್ಯಕ್ಷ ಆರ್. ವಿ. ಕಾಮನೂರ್ ಸದಸ್ಯರಾದ ದೇವರಾಜ್ ಹೊಸ್ಮನಿ, ಸುಭಾನ ನೀರಲಗಿ, ಯುವಕರಾದ  ಕಾಸಿಂ ನಾಗೇಶಹಳ್ಳಿ, ಶಿವಮೂರ್ತಿ, ಶಿವರಾಜ್, ಮಾರುತಿ, ಶರಣಬಸವ, ಮಂಜುನಾಥ್, ನಬಿ ಕೊಪ್ಪಳ, ಹೊನ್ನೂರ್ ಬೋಚನಹಳ್ಳಿ ಮುಂತಾದವರು ಭಾಗವಹಿಸಿದ್ದರು.

*********************************

ಕಾರಟಗಿ  : ವಿದ್ಯಾರ್ಥಿಗಳಿಂದ ಭಗತಸಿಂಗ ಜನಮ ದಿನ ಆಚರಣೆ!

ಕಾರಟಗಿ :  ತಾಲ್ಲೂಕಿನ ಉಳೇನೂರು ಗ್ರಾಮದಲ್ಲಿ ಎಐಡಿಎಸ್‌ ಒ ಸ್ಥಳೀಯ ಸಮಿತಿ, ಭಗತ್ ಸಿಂಗ್ ಸೇನಾ ಸಮಿತಿ ನೇತೃತ್ವದಲ್ಲಿ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ ಜನ್ಮ ದಿನಾಚಾರಣೆಯನ್ನು ಊರಿನ ಹಿರಿಯರು, ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಆಚರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸಂಚಾಲಕ  ಗಂಗರಾಜ ಅಳ್ಳಳ್ಳಿ ಮಾತನಾಡಿ ,ಬಾಲ್ಯದಲ್ಲಿಯೇ ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಪರಿಣಾಮದಿಂದ ಪ್ರೇರಿತರಾಗಿ ಭಗತ್ ಸಿಂಗ್ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಕಲ್ಪ ತೊಟ್ಟರು ಎಂದು ನೆನಪಿಸಿದರು. ಸಾಹಿತ್ಯ, ಕಲೆ, ತತ್ವಶಾಸ್ತ್ರ, ವಿಜ್ಞಾನ ಮತ್ತು ಇತಿಹಾಸದಲ್ಲಿ ಆಳವಾದ ಜ್ಞಾನ ಹೊಂದಿದ್ದ ಭಗತ್ ಸಿಂಗ್ ಸಮಾಜವಾದಿ ಕ್ರಾಂತಿಯನ್ನು ಕನಸು ಕಂಡಿದ್ದರು ಎಂದರು.

ಈ ಸಂದರ್ಭದಲ್ಲಿ ಎ.ಐ.ಡಿ.ಎಸ್.ಓ ಸ್ಥಳೀಯ ಸಮಿತಿ ಮುಖಂಡರಾದ ದೊಡ್ಡಬಸವ, ರಮೇಶ್, ದೇವರಾಜ ಎಂ, ವೀರೇಶ್, ಯಮನೂರ, ರಾಮ್ ಸದಸ್ಯರಾದ ವಿಜಯಲಕ್ಷ್ಮಿ,ಸರಸ್ವತಿ, ದೇವರಾಜ್ ಎಚ್‌,  ರಾಮಣ್ಣ, ಲಕ್ಷ್ಮಣ ಊರಿನ ಹಿರಿಯರಾದ ಅಂಜಿನಪ್ಪ, ಬಸವರಾಜಪ್ಪ, ದೇವಪ್ಪ, ದೇವರಾಜ್ ಎಚ್‌, ,ಶರಣಪ್ಪ, ಬಸವರಾಜ್.ಎನ್ ಸೇರಿದಂತೆ ಶಾಲಾ ಮಕ್ಕಳು,ಯುವಕರು ಭಾಗವಹಿಸಿದ್ದರು.

***********************************

• ಎಐಎಂಎಸ್‌ ಎಸ್‌ ಮಹಿಳಾ ಸಂಘಟನೆ  :  ಎಸ್ಯುಸಿಐ (ಸಿ)ಕಚೇರಿಯಲ್ಲಿ ಭಗತ್‌ ಸಿಂಗ್‌ ಜನ್ಮ ದಿನಾಚರಣೆ!

ಕೊಪ್ಪಳ :  ನಗರದ ಲೇಬರ್‌ ಸರ್ಕಲ್‌ ಹತ್ತಿರವಿರುವ ಎಸ್ಯುಸಿಐ ಕಚೇರಿಯಲ್ಲಿ ಆಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಧೀರ ಹುತಾತ್ಮ ಭಗತ್ ಸಿಂಗ್ ರವರ 118ನೇ ಜನ್ಮದಿನಾಚರಣೆಯನ್ನುಆಚರಣೆ ಮಾಡಲಾಯಿತು.

ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕಿ ಮಂಜುಳಾ ಮಜ್ಜಗಿ ಮಾತನಾಡಿ, ಬ್ರಿಟಿಷರ ಎದೆ ನಡುಗಿಸಿದ ದೇಶಭಕ್ತ ಭಗತ್‌ ಸಿಂಗ್ ಅಪ್ರತಿಮ ಸ್ವಾತಂತ್ರ್ಹ ಹೋರಾಟಗಾರರಾಗಿದ್ದರು.ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತ ಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದರು.ಅವರು ದೇಶದ ಜನತೆಗೆ ಪ್ರೇರಣೆ. 23ನೇ ವಯಸ್ಸಲ್ಲೇ ದೇಶಕ್ಕಾಗಿ ಪ್ರಾಣ ಅರ್ಪಿಸಿದರು .ನಾವು ಅವರ ಸಮಾಜವಾದಿ ದೃಷ್ಟಿಕೋನದ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು

ಕ್ರಾರ್ಯಕ್ರಮದಲ್ಲಿ  ಸಂಘಟಕರಾದ ಶಾರದ ಗಡ್ಡಿ, ಹುಸೇನ್ ಬಿ ನೀರಲಗಿ, ಪವಿತ್ರ ಗದಗ್, ಸಹನಾ ಯಲಬುರ್ಗಾ ಸೇರಿದಂತೆ ಹಲವರು ಇದ್ದರು.

***************************

ಯಲಬುರ್ಗಾ : ಬೇವೂರನಲ್ಲಿ ಮಕ್ಕಳಿಂದ ಭಗತ್‌ ಸಿಂಗ್‌ ಜಯಂತಿ!

Contents
“ಕೊಪ್ಪಳ | ಜಿಲ್ಲೆಯಾದ್ಯಂತ ಭಗತ್‌ ಸಿಂಗ್‌ ಅವರ 118ನೇ ಜನ್ಮದಿನಾಚರಣೆ  : ಎಐಡಿವೈಓ ಸಂಘಟನೆಯಿಂದ  ಬೈಕ್‌ ರ್ಯಾಲಿ ಸೇರಿ ವಿವಿಧ ಸಂಘಟನೆಗಳಿಂದ  ಕಾರ್ಯಕ್ರಮ” “ಭಗತ್‌ ಸಿಂಗ್‌ ಅವರ ಸಮಾಜವಾದಿ ಭಾರತ ಕನಸು ಸಾಕಾರಗೊಳಿಸಲು ಯುವಜನತೆ ಸಜ್ಜಾಗಬೇಕು  : ಎಐಡಿವೈಓ ಮುಖಂಡ  ಶರಣು ಗಡ್ಡಿ ಕರೆ”• ವರದಿ : ಭೀಮಾಶಂಕರ ಪಾಣೇಗಾಂವ• ಸೆಕ್ಯೂಲರ್‌ ವಾಯ್ಸ್‌  ನ್ಯೂಸ್‌ ಕೊಪ್ಪಳ :ಕೊಪ್ಪಳ : ಯುವಕರಿಂದ  ಭಗತ್ ಸಿಂಗ್ ಜನ್ಮ ದಿನ ಪ್ರಯುಕ್ತ ಬೈಕ್‌ ರ್ಯಾಲಿ! ಕೊಪ್ಪಳ : ಧೀರ ಹುತಾತ್ಮ ಭಗತ್ ಸಿಂಗ್ ರವರ 118ನೇ ಜನ್ಮದಿನಾಚರಣೆಯನ್ನು ಬೈಕ್ ಜಾಥಾ ದ ಮೂಲಕ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗ್ನೇಸೇಷನ್(ಎಐಡಿವೈಓ) ಸಂಘಟನೆ ವತಿಯಿಂದ ಭಾನುವಾರ ಆಚರಿಸಲಾಯಿತು.″ಭಗತ್‌ ಸಿಂಗ್‌ ನಮ್ಮ ಆದರ್ಶ.! ಇಂಕ್ವಿಲಾಬ್ ಜಿಂದಾಬಾದ್, ಭಗತ್ ಸಿಂಗ್ ಅಮರವಾಗಲಿ, ಭಗತ್ ಸಿಂಗ್ ಕನಸಿನ ಭಾರತ ನನಸಾಗಲಿ ಎಂಬ ಘೋಷಣೆಗಳೊಂದಿಗೆ  ವಿದ್ಯಾರ್ಥಿ ಯುವಕರು  ಘೋಷಣೆ ಕೂಗುತ್ತಾ  ಬೈಕ್ ರ್ಯಾಲಿಯ   ಲೇಬರ್ ಸರ್ಕಲ್ ನಲ್ಲಿ ಉದ್ಘಾಟನೆಗೊಂಡು, ಅಶೋಕ ವೃತ್ತ, ಭಗತ್ ಸಿಂಗ್ ವೃತ್ತ, ಗಡಿಯಾರ ಕಂಬ, ಜವಾಹರ ರೋಡ್ ಮೂಲಕ ಹಾದು ಹೋಗಿ ಕೊನೆಗೆ ಸಂಘಟನೆ ಕಚೇರಿ ವರೆಗೆ ನಡೆಯಿತು.ಬಳಿಕ ಮಾತನಾಡಿದ ಎ ಐ ಡಿ ವೈ ಓ  ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶರಣು ಗಡ್ಡಿ ಮಾತನಾಡಿ, ಪ್ರಸಕ್ತ ಭಾರತದಲ್ಲಿ ಕೋಮುವಾದ, ಜಾತಿವಾದ, ನಿರುದ್ಯೋಗ ಸಮಸ್ಯೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ, ಹೋರಾಡಲು ಭಗತ್ ಸಿಂಗ್ ರವರ ವಿಚಾರಗಳು ಪ್ರೇರಣೆಯಾಗಬೇಕೆಂದು ಸವಿಸ್ತಾರವಾಗಿ ಹೇಳಿದರು, ಭಗತ್ ಸಿಂಗ್ ರವರ ಜನ್ಮದಿನವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡದೆ, ಶೋಷಣೆ ವಿರುದ್ಧ ಹೋರಾಟದ ಸಂಕಲ್ಪ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ  ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಜಿಲ್ಲಾ ಅಧ್ಯಕ್ಷ ಆರ್. ವಿ. ಕಾಮನೂರ್ ಸದಸ್ಯರಾದ ದೇವರಾಜ್ ಹೊಸ್ಮನಿ, ಸುಭಾನ ನೀರಲಗಿ, ಯುವಕರಾದ  ಕಾಸಿಂ ನಾಗೇಶಹಳ್ಳಿ, ಶಿವಮೂರ್ತಿ, ಶಿವರಾಜ್, ಮಾರುತಿ, ಶರಣಬಸವ, ಮಂಜುನಾಥ್, ನಬಿ ಕೊಪ್ಪಳ, ಹೊನ್ನೂರ್ ಬೋಚನಹಳ್ಳಿ ಮುಂತಾದವರು ಭಾಗವಹಿಸಿದ್ದರು.*********************************• ಕಾರಟಗಿ  : ವಿದ್ಯಾರ್ಥಿಗಳಿಂದ ಭಗತಸಿಂಗ ಜನಮ ದಿನ ಆಚರಣೆ!ಕಾರಟಗಿ :  ತಾಲ್ಲೂಕಿನ ಉಳೇನೂರು ಗ್ರಾಮದಲ್ಲಿ ಎಐಡಿಎಸ್‌ ಒ ಸ್ಥಳೀಯ ಸಮಿತಿ, ಭಗತ್ ಸಿಂಗ್ ಸೇನಾ ಸಮಿತಿ ನೇತೃತ್ವದಲ್ಲಿ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ರವರ ಜನ್ಮ ದಿನಾಚಾರಣೆಯನ್ನು ಊರಿನ ಹಿರಿಯರು, ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರು ಆಚರಿಸಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸಂಚಾಲಕ  ಗಂಗರಾಜ ಅಳ್ಳಳ್ಳಿ ಮಾತನಾಡಿ ,ಬಾಲ್ಯದಲ್ಲಿಯೇ ಜಲಿಯನ್‌ ವಾಲಾಬಾಗ್ ಹತ್ಯಾಕಾಂಡದ ಪರಿಣಾಮದಿಂದ ಪ್ರೇರಿತರಾಗಿ ಭಗತ್ ಸಿಂಗ್ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಕಲ್ಪ ತೊಟ್ಟರು ಎಂದು ನೆನಪಿಸಿದರು. ಸಾಹಿತ್ಯ, ಕಲೆ, ತತ್ವಶಾಸ್ತ್ರ, ವಿಜ್ಞಾನ ಮತ್ತು ಇತಿಹಾಸದಲ್ಲಿ ಆಳವಾದ ಜ್ಞಾನ ಹೊಂದಿದ್ದ ಭಗತ್ ಸಿಂಗ್ ಸಮಾಜವಾದಿ ಕ್ರಾಂತಿಯನ್ನು ಕನಸು ಕಂಡಿದ್ದರು ಎಂದರು.ಈ ಸಂದರ್ಭದಲ್ಲಿ ಎ.ಐ.ಡಿ.ಎಸ್.ಓ ಸ್ಥಳೀಯ ಸಮಿತಿ ಮುಖಂಡರಾದ ದೊಡ್ಡಬಸವ, ರಮೇಶ್, ದೇವರಾಜ ಎಂ, ವೀರೇಶ್, ಯಮನೂರ, ರಾಮ್ ಸದಸ್ಯರಾದ ವಿಜಯಲಕ್ಷ್ಮಿ,ಸರಸ್ವತಿ, ದೇವರಾಜ್ ಎಚ್‌,  ರಾಮಣ್ಣ, ಲಕ್ಷ್ಮಣ ಊರಿನ ಹಿರಿಯರಾದ ಅಂಜಿನಪ್ಪ, ಬಸವರಾಜಪ್ಪ, ದೇವಪ್ಪ, ದೇವರಾಜ್ ಎಚ್‌, ,ಶರಣಪ್ಪ, ಬಸವರಾಜ್.ಎನ್ ಸೇರಿದಂತೆ ಶಾಲಾ ಮಕ್ಕಳು,ಯುವಕರು ಭಾಗವಹಿಸಿದ್ದರು.***********************************• ಎಐಎಂಎಸ್‌ ಎಸ್‌ ಮಹಿಳಾ ಸಂಘಟನೆ  :  ಎಸ್ಯುಸಿಐ (ಸಿ)ಕಚೇರಿಯಲ್ಲಿ ಭಗತ್‌ ಸಿಂಗ್‌ ಜನ್ಮ ದಿನಾಚರಣೆ!ಕೊಪ್ಪಳ :  ನಗರದ ಲೇಬರ್‌ ಸರ್ಕಲ್‌ ಹತ್ತಿರವಿರುವ ಎಸ್ಯುಸಿಐ ಕಚೇರಿಯಲ್ಲಿ ಆಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಧೀರ ಹುತಾತ್ಮ ಭಗತ್ ಸಿಂಗ್ ರವರ 118ನೇ ಜನ್ಮದಿನಾಚರಣೆಯನ್ನುಆಚರಣೆ ಮಾಡಲಾಯಿತು.ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕಿ ಮಂಜುಳಾ ಮಜ್ಜಗಿ ಮಾತನಾಡಿ, ಬ್ರಿಟಿಷರ ಎದೆ ನಡುಗಿಸಿದ ದೇಶಭಕ್ತ ಭಗತ್‌ ಸಿಂಗ್ ಅಪ್ರತಿಮ ಸ್ವಾತಂತ್ರ್ಹ ಹೋರಾಟಗಾರರಾಗಿದ್ದರು.ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತ ಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದರು.ಅವರು ದೇಶದ ಜನತೆಗೆ ಪ್ರೇರಣೆ. 23ನೇ ವಯಸ್ಸಲ್ಲೇ ದೇಶಕ್ಕಾಗಿ ಪ್ರಾಣ ಅರ್ಪಿಸಿದರು .ನಾವು ಅವರ ಸಮಾಜವಾದಿ ದೃಷ್ಟಿಕೋನದ ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರುಕ್ರಾರ್ಯಕ್ರಮದಲ್ಲಿ  ಸಂಘಟಕರಾದ ಶಾರದ ಗಡ್ಡಿ, ಹುಸೇನ್ ಬಿ ನೀರಲಗಿ, ಪವಿತ್ರ ಗದಗ್, ಸಹನಾ ಯಲಬುರ್ಗಾ ಸೇರಿದಂತೆ ಹಲವರು ಇದ್ದರು.***************************• ಯಲಬುರ್ಗಾ : ಬೇವೂರನಲ್ಲಿ ಮಕ್ಕಳಿಂದ ಭಗತ್‌ ಸಿಂಗ್‌ ಜಯಂತಿ!ಯಲಬುರ್ಗಾ : ತಾಲ್ಲೂಕಿನ ಬೇವೂರ ಗ್ರಾಮದಲ್ಲಿ ಮುದ್ದು  ಮಕ್ಕಳಿಂದ ಮಹಾನ್‌ ಕ್ರಾಂತಿಕಾರಿ ಭಗತ್‌ ಸಿಂಗ್‌ ಜನಮ ದಿನ ಆಚರಿಸಿದರು.ಈ ವೇಳೆ ಗ್ರಾಮದ ಯುವ ಮುಖಂಡ ಕರಿಯಪ್ಪ ಮಣ್ಣಿಯವರ್‌ ಮಾತನಾಡಿ, ಭಾರತದಲ್ಲಿ ಈಗಲೂ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಭಾರತದ ಕ್ರಾಂತಿಕಾರಿ ನಾಯಕ ಯಾರು ಎಂದು ಕೇಳಿದರೆ, ಪ್ರತಿಯೊಬ್ಬರ ಬಾಯಲ್ಲಿ ಮೊದಲು ಬರು ಹೆಸರು ಭಗತ್ ಸಿಂಗ್. ತನ್ನ ಧೈರ್ಯದಿಂದಲೇ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 118ನೇ  ಜನ್ಮದಿನ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ ಎಂದರು.

 

ಯಲಬುರ್ಗಾ : ತಾಲ್ಲೂಕಿನ ಬೇವೂರ ಗ್ರಾಮದಲ್ಲಿ ಮುದ್ದು  ಮಕ್ಕಳಿಂದ ಮಹಾನ್‌ ಕ್ರಾಂತಿಕಾರಿ ಭಗತ್‌ ಸಿಂಗ್‌ ಜನಮ ದಿನ ಆಚರಿಸಿದರು.

ಈ ವೇಳೆ ಗ್ರಾಮದ ಯುವ ಮುಖಂಡ ಕರಿಯಪ್ಪ ಮಣ್ಣಿಯವರ್‌ ಮಾತನಾಡಿ, ಭಾರತದಲ್ಲಿ ಈಗಲೂ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಭಾರತದ ಕ್ರಾಂತಿಕಾರಿ ನಾಯಕ ಯಾರು ಎಂದು ಕೇಳಿದರೆ, ಪ್ರತಿಯೊಬ್ಬರ ಬಾಯಲ್ಲಿ ಮೊದಲು ಬರು ಹೆಸರು ಭಗತ್ ಸಿಂಗ್. ತನ್ನ ಧೈರ್ಯದಿಂದಲೇ ಬ್ರಿಟಿಷರ ಎದೆ ನಡುಗಿಸಿದ ಕ್ರಾಂತಿಕಾರಿ, ಮಹಾನ್ ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 118ನೇ  ಜನ್ಮದಿನ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ ಎಂದರು.