“ಕುಷ್ಟಗಿ | ವಿದ್ಯುತ್ ಶಾಟ್ ಸರ್ಕಿಟ್ : 15ಕ್ಕೂ ಹೆಚ್ಚು ಸುಟ್ಟು ಕರಕಲಾದ ದ್ವಿಚಕ್ರವಾಹನಗಳು”
• ಸೆಕ್ಯೂಲರ್ ವಾಯ್ಸ್ ನ್ಯೂಸ್ :
ಕುಷ್ಟಗಿ : ಆಕಸ್ಮಿಕ ವಿದ್ಯುತ್ ಅವಘಡ ಸಂಭವಿಸಿ 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಮುದೇನೂರು ಗ್ರಾಮದಲ್ಲಿ ಸಂಭವಿಸಿದೆ.
ಶುಕ್ರವಾರ ತಡ ರಾತ್ರಿ ಸುರಿದ ಭಾರಿ ಮಳೆಗೆ ತಾಲೂಕಿನ ಮುದೇನೂರು ಗ್ರಾಮದ ದ್ವಿಚಕ್ರವಾಹನ ರಿಪೇರಿಗಾರ ಸಲೀಂ ಎಂಬುವರು ತಮ್ಮ ಗ್ಯಾರೇಜಿಗೆ ಬಂದಿದ್ದ 15ಕ್ಕೂ ಹೆಚ್ಚು ಬೈಕ್ಗಳು ಬೆಂಕಿಗೆ ಆಹುತಿಯಾದ ಘಟನೆ ಜರುಗಿದೆ ಎಂದು ತಿಳಿಸಿರುತ್ತಾರೆ
ದ್ವಿಚಕ್ರ ವಾಹನ ರಿಪೇರಿ ಅಂಗಡಿ (ಗ್ಯಾರೇಜ್) ಯಲ್ಲಿ ರಿಪೇರಿ ಗೆಂದು ಬಂದಿದ್ದ ಬೈಕ್ ಗಳನ್ನು ಹಾಕಿ ಬೀಗ ಹಾಕಿಕೊಂಡು ಮನೆಗೆ ಬಂದಿರುತ್ತಾರೆ. ನಂತರ ವಿಪರೀತ ಮಳೆ ಸುರಿದ ಪರಿಣಾಮ ವಿದ್ಯುತ್ ಶಾಟ್ ಸರ್ಕಿಟ್ ನಿಂದ ಬೆಂಕಿ ಹೊತ್ತು ಕೊಂಡಿದ್ದು ಗ್ಯಾರೇಜ್ ನಲ್ಲಿ ನಿಲ್ಲಿಸಲಾಗಿದ್ದ 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣ ಸುಟ್ಟು ಹೋಗಿರುತ್ತವೆ.
ಗ್ಯಾರೇಜ್ ನಲ್ಲಿದ್ದ ಬೈಕ್ಗಳ ಟ್ಯಾಂಕ್ಗಳಲ್ಲಿ ಪೆಟ್ರೋಲ್ ಇದ್ದದರಿಂದ ಬೈಕ್ಗಳು ಸ್ಪೋಟಗೊಂಡು ಸಂಪೂರ್ಣ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿರುತ್ತಾರೆ.
ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದಾಗ ಅಗ್ನಿಶಾಮಕ ಇಲಾಖೆಯವರು ಘಟನೆ ಆಗಮಿಸಿ, ಬೆಂಕಿ ನಂದಿಸಿರುತ್ತಾರೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಈ ಘಟನೆ ಸಂಭವಿಸಿದ್ದು ನನ್ನನ್ನೇ ನಂಬಿ ರಿಪೇರಿ ಎಂದು ಬೈಕ್ ಗಳನ್ನು ಬಿಟ್ಟಎಂದು ಬೈಕ್ ಗಳನ್ನು ಬಿಟ್ಟ ಗ್ರಾಹಕರಿಗೆ ಏನು ಹೇಳಬೇಕು ಎಂದು ಗ್ಯಾರೇಜ್ ಮಾಲೀಕ ಸಲೀಂ ತನ್ನ ಸಂಕಟ ತೋಡಿಕೊಂಡಿರುತ್ತಾನೆ.