KOPPAL PROTEST NEWS :”ಕೊಪ್ಪಳ|ನಮಗೆ ಯುವನಿಧಿ ಬೇಡ,ಉದ್ಯೋಗ ಗ್ಯಾರಂಟಿ ಕೊಡಿ :ಕೇಂದ್ರ,ರಾಜ್ಯ ಸರ್ಕಾರಗಳ ವಿರುದ್ದ ರೊಚ್ಚಿಗೆದ್ದ ಉದ್ಯೋಗಾಕಾಂಕ್ಷಿಗಳು”

By admin

“ಕೊಪ್ಪಳ|ನಮಗೆ ಯುವನಿಧಿ ಬೇಡ,ಉದ್ಯೋಗ ಗ್ಯಾರಂಟಿ ಕೊಡಿ : ಕೇಂದ್ರ,ರಾಜ್ಯ ಸರ್ಕಾರಗಳ ವಿರುದ್ದ ರೊಚ್ಚಿಗೆದ್ದಉದ್ಯೋಗಾಕಾಂಕ್ಷಿಗಳು”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ: 

 ಕೇಂದ್ರ ,ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ   ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿಉದ್ಯೋಗಾಕಾಂಕ್ಷಿಗಳು ನಗರದ ಅಶೋಕ ವೃತ್ತದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿ,ಸರ್ಕಾರಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ತಿಭಟನೆಯನ್ನು ಉದ್ದೇಶಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಜೇಶನ್‌   (ಎ ಐ ಡಿ ವೈ ಓ) ಮುಖಂಡ ಶರಣು ಗಡ್ಡಿ ಮಾತನಾಡಿ, 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ.ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನುಹಾಗೆ ಉಳಿದಿದೆ, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು,ಸಂಸ್ಥೆಗಳನ್ನು ಖಾಸಗಿ ಅವರಿಗೆ  ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ಈಗಾಲಾದರೂ ಪ್ರಾಮಾಣಿಕವಾಗಿ ಉದ್ಯೋಗ ಭರ್ತಿ ಮಾಡಲು ಮನಸ್ಸು ಮಾಡಲಿ. ಇಲ್ಲದಿದ್ದರೆ ಯುವಜನರ ಮುಂದಿರುವ ಏಕೈಕ ದಾರಿ ಸಂಘಟಿತ ಹೋರಾಟ ಮಾತ್ರ. ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳಬೇಕು, ಇದಕ್ಕಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ನಾವು ಸಿದ್ದರಿದ್ದೇವು ಎಂದು ಎಚ್ಚರಿಸಿದರು.
 

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಮುಖಂಡ  ಶರಣು ಪಾಟೀಲ್ ಮಾತನಾಡಿ, ಎಲ್ಲಾ ಹುದ್ದೆಗಳ ನೇಮಕಾತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಬೇಕು. ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ, ಪಾರದರ್ಶಕತೆಯನ್ನು ಕಾಪಾಡಬೇಕು. ಪೊಲೀಸ್ ಕಾನ್ಸೆಬಲ್‌ ವಯೋಮಿತಿ (GM -30. SC,ST, OBC- 33) ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಕೆ.ಇ.ಎ. ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಕೇಂದು ಒತ್ತಾಯಿಸಿದರು.

ಈ  ಪ್ರತಿಭಟನೆ ಬೆಂಬಲಿಸಿ ಯುವ ಮುಖಂಡ ನಿಂಗಪ್ಪ ಬೆಣಕಲ್‌ ಅವರು ಮಾತನಾಡಿ, ಸರ್ಕಾರಗಳು ಯುವಕರಿಗೆ ಸುಳ್ಳು ಭರವಸೆಯನ್ನು ನೀಡಿ ಮೋಸ ಮಾಡಿವೆ.ಇನ್ನಾದರೂ ಉದ್ಯೋಗಗಳನ್ನು ಭರ್ತಿ ಮಾಡುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ  ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲಾ ಬಂದ್ ಮಾಡುವ ಪರಿಸ್ಥಿತಿ ಎದುರಾಗುತ್ತದೆಂದು ಎಚ್ಚರಿಸಿದರು.

ಉದ್ಯೋಗಾಕಾಂಕ್ಷಿಗಳಾದ  ಶರಣು ಲಿಂಗದಹಳ್ಳಿ  ಮತ್ತು  ಮಹಾದೇವ ಅವರು ಮಾತನಾಡಿ, ಸರ್ಕಾರ ನಮಗೆ ಕೊಡುವದು ಬೇಡ, ನೀಡಬೇಕಾಗಿರುವುದು ಉದ್ಯೋಗದ ಗ್ಯಾರಂಟಿ. ಹಾಗಾಗಿ ಕೂಡಲೆ ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ಯುವಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ  ಸೈಯದ್ ತೌಫಿಕ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ವೋಟು ಕೇಳುವಾಗ ಇರುವ ಕಾಳಜಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸುವಾಗ ಇರುವುದಿಲ್ಲ. ಯುವಕರನ್ನು ಬೀದಿಗಿಳಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನಾಚಿಕೆಯಾಗಬೇಕೆಂದರು.

ಉದ್ಯೋಗಾಕಾಂಕ್ಷೀಗಳ ಹೋರಾಟ ಸಮಿತಿ ಸದಸ್ಯ ಖಾಸೀಂ ಕೆ.ಎನ್. ನಾಗೇಶನಹಳ್ಳಿ ಮಾತನಾಡಿ, ಯುವಜನರ ಆಕ್ರೋಶ ಸಿಡಿದೇಳುವ ಮೊದಲೇ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಪರವಾಗಿ ನಗರ ಯೋಜನಾ ನಿರ್ದೇಶಕ ಮಂಜುನಾಥ್ ಗುಂಡೂರ್ ಅವರು  ಆಗಮಿಸಿ, ಮನವಿ ಪತ್ರ ಸ್ವೀಕರಿಸಿದರು. ನಂತರ ಮನವಿ ಪತ್ರಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಅವರಿಗೆ ಕಳಿಸಲಾಗುವುದೆಂದರು.

  ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯ ಸುಭಾನ್ ನೀರಲಗಿ, ಸಾಮಾಜಿಕ ಕಾರ್ಯಕರ್ತೆ ಶಶಿಕಲಾ ಹಿರೇ ಸಿಂದೋಗಿ,ಉದ್ಯೋಗಾಕಾಂಕ್ಷಿಗಳಾದ  ಶಿವಮೂರ್ತಿ ವದಗನಾಳ್, ಬಸವರಾಜ್ ತಾವರಗೇರಾ, ಶರಣು ಆಗೋಲಿ, ಶಿವಕುಮಾರ್ ಕಂಚಿ, ನಾಗರಾಜ್ ವಿಠಲಾಪುರ್, ಹೊನ್ನೂರ್ ಬೋಚನಹಳ್ಳಿ, ಪ್ರದೀಪ್ ಮಾದಿನೂರು, ಮಾರುತಿ ನಾಗೇಶನ ಹಳ್ಳಿ, ಮೌನೇಶ್ ಮಂಗಳೂರು,ಯಮನೂರ ಚಳ್ಳಾರಿ ಮತ್ತು ಪ್ರಾಣೇಶ ಹಾಲವರ್ತಿ ಸೇರಿದಂತೆ ಅನೇಕರು ಭಾಗವಹಿಸಿದರು.

 

Contents
“ಕೊಪ್ಪಳ|ನಮಗೆ ಯುವನಿಧಿ ಬೇಡ,ಉದ್ಯೋಗ ಗ್ಯಾರಂಟಿ ಕೊಡಿ : ಕೇಂದ್ರ,ರಾಜ್ಯ ಸರ್ಕಾರಗಳ ವಿರುದ್ದ ರೊಚ್ಚಿಗೆದ್ದಉದ್ಯೋಗಾಕಾಂಕ್ಷಿಗಳು”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:  ಕೇಂದ್ರ ,ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ   ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ನೇತೃತ್ವದಲ್ಲಿಉದ್ಯೋಗಾಕಾಂಕ್ಷಿಗಳು ನಗರದ ಅಶೋಕ ವೃತ್ತದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿ,ಸರ್ಕಾರಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಜೇಶನ್‌   (ಎ ಐ ಡಿ ವೈ ಓ) ಮುಖಂಡ ಶರಣು ಗಡ್ಡಿ ಮಾತನಾಡಿ, 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ.ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನುಹಾಗೆ ಉಳಿದಿದೆ, ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು,ಸಂಸ್ಥೆಗಳನ್ನು ಖಾಸಗಿ ಅವರಿಗೆ  ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ಈಗಾಲಾದರೂ ಪ್ರಾಮಾಣಿಕವಾಗಿ ಉದ್ಯೋಗ ಭರ್ತಿ ಮಾಡಲು ಮನಸ್ಸು ಮಾಡಲಿ. ಇಲ್ಲದಿದ್ದರೆ ಯುವಜನರ ಮುಂದಿರುವ ಏಕೈಕ ದಾರಿ ಸಂಘಟಿತ ಹೋರಾಟ ಮಾತ್ರ. ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ನಾವು ಪಡೆದುಕೊಳ್ಳಬೇಕು, ಇದಕ್ಕಾಗಿ ಎಲ್ಲಾ ರೀತಿಯ ತ್ಯಾಗಕ್ಕೂ ನಾವು ಸಿದ್ದರಿದ್ದೇವು ಎಂದು ಎಚ್ಚರಿಸಿದರು.  ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಮುಖಂಡ  ಶರಣು ಪಾಟೀಲ್ ಮಾತನಾಡಿ, ಎಲ್ಲಾ ಹುದ್ದೆಗಳ ನೇಮಕಾತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಬೇಕು. ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ, ಪಾರದರ್ಶಕತೆಯನ್ನು ಕಾಪಾಡಬೇಕು. ಪೊಲೀಸ್ ಕಾನ್ಸೆಬಲ್‌ ವಯೋಮಿತಿ (GM -30. SC,ST, OBC- 33) ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಕೆ.ಇ.ಎ. ಹೊರಡಿಸಿರುವ ನೋಟಿಫಿಕೇಶನ್‌ನಲ್ಲಿ ನಿಗದಿಪಡಿಸಿರುವ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಕೇಂದು ಒತ್ತಾಯಿಸಿದರು.ಈ  ಪ್ರತಿಭಟನೆ ಬೆಂಬಲಿಸಿ ಯುವ ಮುಖಂಡ ನಿಂಗಪ್ಪ ಬೆಣಕಲ್‌ ಅವರು ಮಾತನಾಡಿ, ಸರ್ಕಾರಗಳು ಯುವಕರಿಗೆ ಸುಳ್ಳು ಭರವಸೆಯನ್ನು ನೀಡಿ ಮೋಸ ಮಾಡಿವೆ.ಇನ್ನಾದರೂ ಉದ್ಯೋಗಗಳನ್ನು ಭರ್ತಿ ಮಾಡುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ  ಮುಂದಿನ ದಿನಗಳಲ್ಲಿ ಕೊಪ್ಪಳ ಜಿಲ್ಲಾ ಬಂದ್ ಮಾಡುವ ಪರಿಸ್ಥಿತಿ ಎದುರಾಗುತ್ತದೆಂದು ಎಚ್ಚರಿಸಿದರು.ಉದ್ಯೋಗಾಕಾಂಕ್ಷಿಗಳಾದ  ಶರಣು ಲಿಂಗದಹಳ್ಳಿ  ಮತ್ತು  ಮಹಾದೇವ ಅವರು ಮಾತನಾಡಿ, ಸರ್ಕಾರ ನಮಗೆ ಕೊಡುವದು ಬೇಡ, ನೀಡಬೇಕಾಗಿರುವುದು ಉದ್ಯೋಗದ ಗ್ಯಾರಂಟಿ. ಹಾಗಾಗಿ ಕೂಡಲೆ ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ಯುವಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ  ಸೈಯದ್ ತೌಫಿಕ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ವೋಟು ಕೇಳುವಾಗ ಇರುವ ಕಾಳಜಿ, ನಮ್ಮ ಸಮಸ್ಯೆಗಳನ್ನು ಬಗೆಹರಿಸುವಾಗ ಇರುವುದಿಲ್ಲ. ಯುವಕರನ್ನು ಬೀದಿಗಿಳಿಸಿದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ನಾಚಿಕೆಯಾಗಬೇಕೆಂದರು.ಉದ್ಯೋಗಾಕಾಂಕ್ಷೀಗಳ ಹೋರಾಟ ಸಮಿತಿ ಸದಸ್ಯ ಖಾಸೀಂ ಕೆ.ಎನ್. ನಾಗೇಶನಹಳ್ಳಿ ಮಾತನಾಡಿ, ಯುವಜನರ ಆಕ್ರೋಶ ಸಿಡಿದೇಳುವ ಮೊದಲೇ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.ಬಳಿಕ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಪರವಾಗಿ ನಗರ ಯೋಜನಾ ನಿರ್ದೇಶಕ ಮಂಜುನಾಥ್ ಗುಂಡೂರ್ ಅವರು  ಆಗಮಿಸಿ, ಮನವಿ ಪತ್ರ ಸ್ವೀಕರಿಸಿದರು. ನಂತರ ಮನವಿ ಪತ್ರಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಅವರಿಗೆ ಕಳಿಸಲಾಗುವುದೆಂದರು.  ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯ ಸುಭಾನ್ ನೀರಲಗಿ, ಸಾಮಾಜಿಕ ಕಾರ್ಯಕರ್ತೆ ಶಶಿಕಲಾ ಹಿರೇ ಸಿಂದೋಗಿ,ಉದ್ಯೋಗಾಕಾಂಕ್ಷಿಗಳಾದ  ಶಿವಮೂರ್ತಿ ವದಗನಾಳ್, ಬಸವರಾಜ್ ತಾವರಗೇರಾ, ಶರಣು ಆಗೋಲಿ, ಶಿವಕುಮಾರ್ ಕಂಚಿ, ನಾಗರಾಜ್ ವಿಠಲಾಪುರ್, ಹೊನ್ನೂರ್ ಬೋಚನಹಳ್ಳಿ, ಪ್ರದೀಪ್ ಮಾದಿನೂರು, ಮಾರುತಿ ನಾಗೇಶನ ಹಳ್ಳಿ, ಮೌನೇಶ್ ಮಂಗಳೂರು,ಯಮನೂರ ಚಳ್ಳಾರಿ ಮತ್ತು ಪ್ರಾಣೇಶ ಹಾಲವರ್ತಿ ಸೇರಿದಂತೆ ಅನೇಕರು ಭಾಗವಹಿಸಿದರು.