“ಯಾದಗಿರಿ| ಅನಾರೋಗ್ಯದಲ್ಲಿರೂ ಅನ್ನದಾತನ ಕಷ್ಟ ಕೇಳಿದ ಮಾಜಿ ಪ್ರಧಾನಿ ದೇವೆಗೌಡರು : ಶಾಸಕ ಕಂದಕೂರು ಹೇಳಿಕೆ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ :
ಸತತ ಮಳೆ ಮತ್ತು ಪ್ರವಾಹದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹಾಳಾದ ಬೆಳೆಗಳ ಮತ್ತು ವಿಶೇಷವಾಗಿ ಕೆಕೆ ಭಾಗದ ಯಾದಗಿರಿ ಇತರೇ ಜಿಲ್ಲೆಗಳಲ್ಲಿ ಬೆಳೆಗಳು ಭಾರಿ ಪ್ರಮಾಣದಲ್ಲಿ ನಷ್ಟವಾದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ತಮ್ಮಿಂದ ಮಾಹಿತಿ ಪಡೆದರೆಂದು ಶಾಸಕ ಶರಣಗೌಡ ಕಂದಕೂರು ಅವರು ತಿಳಿಸಿದ್ದಾರೆ.
ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೇವೇಗೌಡರನ್ನು ಭಾನುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರ ಜೊತೆ ಭೇಟಿ ಮಾಡಿದಾಗ ಅತಿವಷ್ಠಿ ಮತ್ತು ಹಾನಿ ಬಗ್ಗೆ ಸಮಗ್ರ ಮಾಹಿತಿ ಪಡೆದು ರೈತರು ಕಷ್ಟಕ್ಕೆ ಸಿಲುಕಿದ್ದ ರೈತರನ್ನು ಕಂಡು ಮರಗಿದರು ಎಂದರು.
ಆರೋಗ್ಯ ಸರಿಯಿದ್ದರೇ ನೆರೆ ಹಾವಳಿ ಪ್ರದೇಶಗಳಿಗೆ ಖುದ್ದಾಗಿ ತಾವೇ ಭೇಟಿ ನೀಡಿ ಪರಿಶೀಲನೆ ಮಾಡಲು ಬರುತ್ತಿದೆ. ಆದರೇ ಅನಾರೋಗ್ಯ ಕಾಡಿದ್ದರಿಂದ ಬರಲು ಆಗಿಲ್ಲ ಎಂದ ಗೌಡರು, ಅನ್ನದಾತನಿಗೆ ಕಷ್ಟಗಳು ಬರಬಾರದು. ಆತ ನಗುತ್ತ ಇದ್ದರೇ ನಮ್ಮ ಹೊಟ್ಟೆ ತುಂಬುತ್ತದೆ. ಆದರೇ ವಿಧಿಯಾಟ, ವಿಪರೀತ ಮಳೆ,ಪ್ರವಾಹ ಬಂದು ಅವರ ಬದುಕು ನರಕವಾಗಿದೆ ಎಂದು ಭಾರಿ ಕಳವಳ ವ್ಯಕ್ತಪಡಿಸಿದರು.
ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರವಾಗಿ ಚಿಂತನೆ ಮಾಡಿ ರೈತರ ನೆರವಿಗೇ ಕೂಡಲೇ ಧಾವಿಸಬೇಕೆಂದು ಹೇಳಿದ ಅವರು, ಸಚಿವ ಜೋಶಿ, ಸಂಸದ ಬೊಮ್ಮಾಯಿ ಅವರಿಗೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.
ಜೆಡಿಎಸ್ ಪರವಾಗಿ ರೈತರ ಕಷ್ಟಕ್ಕೆ ಧ್ವನಿ ಎತ್ತುವಂತೆಯೇ ತಮಗೆ ಗೌಡರು ಸಲಹೆ ನೀಡಿದರೆಂದು ಕಂದಕೂರು ಹೇಳಿದ್ದಾರೆ.