“ಯಾದಗಿರಿ| ಸೂರತ್ – ಚೆನ್ನೈ ಎನ್ ಎಚ್ 150 ಸಿ ಕಾಮರಿಯಲ್ಲಿ ರೈತರಿಗೆ ತೊಂದರೆ : ಕಾಂಗ್ರೇಸ್ ಮುಖಂಡ ಡಾ.ಭೀಮಣ್ಣ ಮೇಟಿ ಆರೋಪ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ :
ಭಾರತ ಮಾಲಾ ಯೋಜನೆಯಡಿ ನಡೆದಿರುವ ಸೂರತ್ – ಚೆನ್ನೈ ಎನ್ ಎಚ್ 150 ಸಿ ಕಾಮಗಾರಿ ಪೈಕಿ ಜಿಲ್ಲೆಯಲ್ಲಿ ಒಟ್ಟು 65 ಕಿಮೀ ಕೆಲಸ ನಡೆದಿದ್ದು, ಈ ಚೆನ್ನೈ ಆರ್ಥಿಕ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆಯೇ ಇಲ್ಲಿನ ರೈತರಿಗೆ ಹಲವಾರು ತೊಂದರೆಗಳು ಆಗುತ್ತಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಆರೋಪಿಸಿದ್ದಾರೆ.
ಬುಧವಾರ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಉಳ್ಳೆಸೂಗುರು ಸೇರಿದಂತೆಯೇ ವಿವಿಧ ಗ್ರಾಮಗಳ ಅನೇಕ ರೈತರ ಭೂಮಿ ಪಡೆದು ಭೂ ಪರಿಹಾರದ ಹಣ ನೀಡಿಲ್ಲವೆಂದು ಆರೋಪಿಸಿದರು.
ಕಾರಿಡಾರ್ ನ ಎರಡು ಬದಿ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು.
ಕಾರಿಡಾರ್ ನ ಎರಡು ಬದಿ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಿ ಬರಲು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಮಾಡಬೇಕೆಂದು ಒತ್ತಾಯಿಸಿದರು.