“ಯಾದಗಿರಿ| ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳ ನೇಮಕ : ಪದಗ್ರಹಣ ಕಾರ್ಯಕ್ರಮ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ:
ಕೊವಿಡ್ ಸಂದರ್ಭದಲ್ಲಿ ಲಾಕ್ ಡೌನ್ ಆದ ವೇಳೆ ಜನತೆ ಹೊರಬರಲು ಭಯ ಬೀಳುತ್ತಿದ್ದ ವೇಳೆ ಯಾದಗಿರಿಯಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದು ಜಯ ಕರ್ನಾಟಕ ಸಂಘಟನೆಯವರು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ಶ್ಲಾಘನೆ ವ್ಯಕ್ತಪಡಿಸಿದರು.
ಅವರು ಶಹಾಪೂರ ನಗರದ ಸುರಪುರ ರಸ್ತೆಯಲ್ಲಿರುವ ಜೆಬಿ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೋವಿಡ್ ವೇಳೆ ತಿಂಗಳುಗಟ್ಟಲೆ ಕೆಲಸ ಮಾಡಿದ್ದು, ವಿಶ್ವನಾಥ ನಾಯಕ ನೇತೃತ್ವದ ತಂಡ ಎಂದು ನುಡಿದ ಅವರು, ಇಂತಹ ಮಾದರಿ ಕೆಲಸಗಳು ಮಾಡುವ ಮೂಲಕ ತಾಲ್ಲೂಕಿನ ಘಟಕದವರೂ ಜನಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ನಿಸ್ವಾರ್ಥದಿಂದ ನೈಜವಾಗಿ ಕೆಲಸ ಮಾಡಿದ ಸಂಘಟನೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಆದರೆ ಇಂದು ಸರ್ಕಾರಗಳು ಲಾಬಿ ಮಾಡಿದವರಿಗೆ ಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಮಾತನಾಡಿ, ಕನ್ನಡ ನೆಲ ಜಲ ಭಾಷೆ ಸಂಸ್ಕೃತಿ ಏಳ್ಗೆಗೆ ನಮ್ಮ ಸಂಘಟನೆ ಕಂಕಣಬದ್ಧವಾಗಿದ್ದು, ಈ ತತ್ವ ಸಿದ್ದಾಂತಗಳನ್ನು ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.
ವೇದಿಕೆ ಮೇಲೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷಿö್ಮÃಕಾಂತ ಪಾಟೀಲ್ ಮದ್ದರಕಿ (ಕಾಂತು ಪಾಟೀಲ್), ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ರಾಜ್ಯ ಕಾರ್ಯದರ್ಶಿ ವಿಜಯ ಮೊಗದಂಪುರ, ಶಿವರಾಜ ಗುತ್ತೇದಾರ, ಮಾರುತಿ ಮುದ್ನಾಳ, ಹಣಮಂತ್ರಾಯ ವನದುರ್ಗ, ಅಶೋಕರಡ್ಡಿ ಯಲ್ಹೇರಿ, ನವಾಜ ಖಾದ್ರಿ, ಲಕ್ಷö್ಮಣ ನಾಯಕ ಬಂದಳ್ಳಿ, ರಾಜು ಸಾವೂರ, ಹಣಮಂತ ನಾಯಕ ಟಿ.ವಡಗೇರಿ ಇದ್ದರು.
ತಾಲ್ಲೂಕು ಪದಾಧಿಕಾರಿಗಳು:ವೆಂಕಟೇಶ ಬಿದರಾಣಿ (ಅಧ್ಯಕ್ಷ), ಹಣಮಂತ ವನದುರ್ಗ (ಕಾರ್ಯಾಧ್ಯಕ್ಷ), ಮಹೇಶ ನಾಯಕ ಇಬ್ರಾಹಿಂಪುರ (ಉಪಾಧ್ಯಕ್ಷ), ಮಲ್ಲಿಕ್ ಸಾಬು (ಕಾರ್ಯದರ್ಶಿ), ಗುರು ಸಾಹುಕಾರ (ಯುವ ಘಟಕದ ಅಧ್ಯಕ್ಷ), ಸತೀಶ ಗುಡ್ಲುಕೊಂಡ (ವಿದ್ಯಾರ್ಥಿ ಘಟಕ ಅಧ್ಯಕ್ಷ), ನಂದಪ್ಪ ಹಳಿಸಗರ (ಉಪಾಧ್ಯಕ್ಷ), ದೇವಿಂದ್ರಪ್ಪ ದೊರೆ ಸಾದ್ಯಾಪುರ (ಪ್ರ. ಕಾರ್ಯದರ್ಶಿ), ಮಹೇಶ ಯಳವಾರ (ನಗರಾಧ್ಯಕ್ಷ), ಬಂಗಾರು ಮಾಂತೇಶ (ಸಂ. ಕಾರ್ಯದರ್ಶಿ ಮುಡಬುಳ), ಪದಾಧಿಕಾರ ವಹಿಸಿಕೊಂಡರು.