LOCAL EXPRESS:”ಯಾದಗಿರಿ| ಮೂರು ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ: ನಿಗದಿತ ಅವಧಿಯೊಳಗೆ  ಮಾಡಿ : ಶಾಸಕ ತುನ್ನೂರು ಸೂಚನೆ “

By admin

“ಯಾದಗಿರಿ| ಮೂರು ಕೋಟಿ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ: ನಿಗದಿತ ಅವಧಿಯೊಳಗೆ  ಮಾಡಿ : ಶಾಸಕ ತುನ್ನೂರು ಸೂಚನೆ “

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ,ಯಾದಗಿರಿ:

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯ ಸರ್ಕಾರವು ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು,ಅದರ ಫಲವಾಗಿ ಅನೇಕ ಕೆಲಸಗಳು ಕೈಗೊಳ್ಳಲು ಸಾಧ್ಯವಾಗುತ್ತಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಡಿಗ್ರಿ ಕಾಲೇಜು ಬಳಿಯಿಂದ ಕನಕ ವೃತ್ತದಿಂದ ಕೆಕೆಆರ್ ಡಿಬಿ ಮೈಕ್ರೊ ಯೋಜನೆಯಡಿ ಮೂರು ಕೋಟಿ ವೆಚ್ಚದ ಅನುದಾನ ಕೈಗೊಳ್ಳಲಾಗುತ್ತಿರುವ ರಸ್ತೆ, ಪುಟಪಾತ್, ವಿದ್ಯುತ್ ಕಂಬಗಳ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಹಂತ,ಹಂತವಾಗಿಯೇ ನಗರದ ವಿವಿಧ ರಸ್ತೆಗಳು ಅಭಿವೃದ್ಧಿ ಪಡಿಸಲಾಗುವುದೆಂದರು. ಈ ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ಮತ್ತು ನಿಗದಿತ ಅವಧಿಯಲ್ಲಿ‌ ಮುಗಿಸುವ ಮೂಲಕ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದರು.

ಗ್ಯಾರಂಟಿ ಯೋಜನೆಗಳಿಂದ ಕೋಟ್ಯಾಂತರ ಜನರಿಗೆ ಅನುಕೂಲ ಮಾಡಿಕೊಟ್ಟಿರುವ ರಾಜ್ಯ ಸರ್ಕಾರ, ಕೆಕೆ ಭಾಗದ ಅಭಿವೃದ್ಧಿಗೆ ಪ್ರತಿ ವರ್ಷ ಐದು ಸಾವಿರ ರೂ. ಅನುದಾನ ನೀಡುವ ಮೂಲಕ ಜನಪರ ಕಾಳಜಿ ವಹಿಸಿದೆ ಎಂದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ,ನಗರಸಭೆ ಪೌರಯುಕ್ತ ಉಮೇಶ ಚೌವಣ,ಎ ಇ ಇ ವಿಶ್ವನಾಥ್,ಚಿದಾನದಪ್ಪ ಕಾಲಬೆಳಗುಂದಿ,ಮರೆಪ್ಪ ಬೀಳಹಾರ,ಸಾಯಿಬಣ್ಣ ಕೆಂಗುರಿ,ಸುರೇಶ ಮಡ್ಡಿ,ಮಲ್ಲಿಕಾರ್ಜುನ ಈಟೆ,ಮಸಪ್ಪ ನಾಯಕ,ಮಲ್ಲಯ್ಯ ಕಸಬಿ,ಅಮರೇಶ ಜಾಕ, ಇದ್ದರು.