“ಯಾದಗಿರಿ| ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಕೌಳೂರ ಅವಿರೋಧ ಆಯ್ಕೆ : ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಿಂದ ಸನ್ಮಾನ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ :
ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಲಬುರಗಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಯಾದಗಿರಿ ಕ್ಷೇತ್ರದಿಂದ ಕಣಕ್ಕೀಳಿದಿದ್ದ ಹಾಲಿ ನಿರ್ದೇಶಕರಾದ್ದ ಸಿದ್ರಾಮರಡ್ಡಿ ಮಾಲಿ ಪಾಟೀಲ್ ಕೌಳೂರ ಅವಿರೋಧವಾಗಿ ೨ನೇ ಭಾರಿಗೆ ಆಯ್ಕೆಯಾಗಿದ್ದಕ್ಕೆ ಯಾದಗಿರಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಯಾದಗಿರಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಹಣಮಂತ ಅಕ್ಕಿ ಸನ್ಮಾನ ನೇರವೆರಿಸಿ ಮಾತನಾಡಿದ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಾಗೂ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘಕ್ಕೆ ತಮ್ಮ ಕೆವೈಡಿಸಿಸಿ ಬ್ಯಾಂಕ್ ನಿಂದ ಸಾಲ ಮತ್ತು ಸರ್ಕಾರದ ಯೋಜನೆಗಳ ನೀಡುವುದರ ಮೂಲಕ ಸಂಘಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ರಾಮರೆಡ್ಡಿ ಕೌಳೂರ, ನಮ್ಮ ಕುಟುಂಬ ಕಳೆದ 3೦ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇವೆ, ಕೇಂದ್ರ ಬ್ಯಾಂಕ್ ನಿಂದ ಯಾದಗಿರಿ ಹಾಗೂ ಗುರುಮಿಠಕಲ್ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿಸುವ ಮೂಲಕ ಸಾವಿರಾರು ರೈತರಿಗೆ, ಸಣ್ಣ-ಪುಟ್ಟ ವ್ಯಾಪಾರಸ್ಥರಿಗೆ ಹಾಗೂ ಮಹಿಳಾ ಸ್ವ-ಸಹಾಯ ಸಂಘಗಳ ಗುಂಪುಗಳಿಗೆ ಪ್ರಾಮಾಣಿಕವಾಗಿ ಆರ್ಥಿಕ ನೆರವು ಒದಗಿಸಿದ್ದೇನೆ, ಜೊತೆಗೆ ಸಂಘಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ಉಪಾಧ್ಯಕ್ಷ ಬಸಣ್ಣಗೌಡ ಮಗ್ದಂಪುರ, ನಿರ್ದೇಶಕ ಸಿದ್ದಪ್ಪ ಎಸ್ ಹೊಟ್ಟಿ. ಬೋಜಣ್ಣ ಗೌಡ ಯಡ್ಡಳ್ಳಿ. ಶರಣಗೌಡ ಯಲ್ಹೇರಿ. ಮಾಹದೇವಪ್ಪ ಚಿಂತನಪಲ್ಲಿ ರವಿಂದ್ರರೆಡ್ಡಿ ಗುಂಜನೂರ. ಸ್ವಾಮಿದೇವ ದಾಸನಕೇರಿ. ಚಂದ್ರಕಲಾ ಮಾಲಿ ಪಾಟೀಲ. ಹಣಮಂತ ವರ್ಕನಳ್ಳಿ ಸಿಬ್ಬಂದಿಗಳಾದ ವ್ಯವಸ್ಥಾಪಕರಾದ ಪ್ರಶಾಂತ ಹಂಚಾಟೆ. ದೊಡ್ಡಯ್ಯ ಸ್ವಾಮಿ. ಮಲ್ಲಿಕಾರ್ಜುನ ಇದ್ದರು.