BIG NEWS: “ಗಂಗಾವತಿ| 24 ವರ್ಷಗಳಿಂದ ಅಂಧ–ಬುದ್ಧಿಮಾಂಧ್ಯ ಮಕ್ಕಳಿಗೆ ಉಚಿತ  ಕ್ಷೌರ ಸೇವೆ : 25ನೇ ವರ್ಷದ ಆಚರಣೆ .! ಸರ್ಕಾರದಿಂದ ಸಹಾಯಧನ–ಪ್ರಶಸ್ತಿ ನೀಡುವಂತೆ ಎಡಿಸಿ ಸಿದ್ದರಾಮೇಶ್ವರ ಅವರಿಗೆ ಮನವಿ”

By admin

“ಗಂಗಾವತಿ| 24 ವರ್ಷಗಳಿಂದ ಅಂಧ–ಬುದ್ಧಿಮಾಂಧ್ಯ ಮಕ್ಕಳಿಗೆ ಉಚಿತ  ಕ್ಷೌರ ಸೇವೆ : 25ನೇ ವರ್ಷದ ಆಚರಣೆ .! ಸರ್ಕಾರದಿಂದ ಸಹಾಯಧನ–ಪ್ರಶಸ್ತಿ ನೀಡುವಂತೆ ಎಡಿಸಿ ಸಿದ್ದರಾಮೇಶ್ವರ ಅವರಿಗೆ ಮನವಿ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗಂಗಾವತಿ : 

 ನಗರದ  ನೇತ್ರಾವತಿ ಹೇರ್ ಸಲೂನ್‌ ಮತ್ತು ಮೆನ್ಸ್‌  ಪಾರ್ಲ್ ರ್‌  ಮಾಲೀಕ ಎಚ್‌ . ಗೋಪಾಲ ಅವರು ಕಳೆದ 24 ವರ್ಷಗಳಿಂದ ಅಂಧ, ಬುದ್ಧಿಮಾಂಧ್ಯ ಮತ್ತು ವಿಶೇಷ ಚೇತನ ಮಕ್ಕಳಿಗೆ ಉಚಿತ ಹೇರ್ ಕಟಿಂಗ್ ಹಾಗೂ ಊಟದ ವ್ಯವಸ್ಥೆ ನಡೆಸುತ್ತಿರುವ ಸಮಾಜಮುಖಿ ಸೇವೆಗೆ ಸರ್ಕಾರದಿಂದ ಸಹಾಯಧನ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಬೇಕೆಂದು ಕೊಪ್ಪಳ ಎಡಿಸಿ ಸಿದ್ದರಾಮೇಶ್ವರ ಅವರಿಗೆ  ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ಹೆಚ್ಚುತ್ತಿರುವ ಸ್ವಾರ್ಥದ ಕಾಲದಲ್ಲಿ “ನಿನ್ನ ಮಕ್ಕಳನ್ನು ನನ್ನ ಮಕ್ಕಳಂತೆ” ನೋಡಿಕೊಳ್ಳುವವರ ಅಪರೂಪ. ಇಂತದರಲ್ಲಿ ಗೋಪಾಲರು ನಿಸ್ವಾರ್ಥ ಸೇವೆ ಮೆಚ್ಚುವಂತಹುದು.

2003 ಇಸ್ವಿಯಲ್ಲಿ 10 ಅಂಧ ಮಕ್ಕಳಿಗೆ ಸೇವೆ ನೀಡುವ ಮೂಲಕ ಆರಂಭವಾದ ಈ ಚಟುವಟಿಕೆ, ಈಗ ಮೂರು ಕೇಂದ್ರಗಳ 150ಕ್ಕೂ ಹೆಚ್ಚು ಮಕ್ಕಳಿಗೆ ತಲುಪಿದೆ. ಪ್ರಸ್ತುತ ಸೇವೆಯನ್ನು ಗಂಗಾವತಿ ಲಯನ್ಸ್ ಬುದ್ಧಿಮಾಂಧ್ಯ ಶಾಲೆಯ 50 ಮಕ್ಕಳು, ದಾಸನಾಳ A.R.D ವಿಶೇಷ ಚೇತನ ಶಾಲೆಯ 60 ಮಕ್ಕಳು ಹಾಗೂ ನಗರ–ತಾಲೂಕಿನ 40ಕ್ಕೂ ಹೆಚ್ಚು ಅಂಧ–ವಿಶೇಷ ಚೇತನ ಮಕ್ಕಳು ಕ್ಷೌರಿಕ ಉಚಿತ ಸೇವೆಯನ್ನು  ಪಡೆಯುತ್ತಿದ್ದಾರೆ ಎಂದರು.

ಈ ಕಾರ್ಯಕ್ರಮವನ್ನು ಗೋಪಾಲರು ಯಾವುದೇ ದೇಣಿಗೆ ಅಥವಾ ಸಂಸ್ಥೆಗಳ ನೆರವಿಲ್ಲದೆ, ಸಂಪೂರ್ಣವಾಗಿ ತಮ್ಮ ಆದಾಯದಿಂದಲೇ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಹೇರ್ ಕಟಿಂಗ್ ಜೊತೆಗೆ ಉಪಹಾರ, ಜ್ಯೂಸ್, ಬಿಸ್ಕತ್ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಈ ಸೇವಾ ಕಾರ್ಯಕ್ರಮದ 10ನೇ ವರ್ಷದ ಸಂಭ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಂಸದ ಶಿವರಾಮಗೌಡ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ನಗರಸಭಾಧ್ಯಕ್ಷೆ ಪಾರ್ವತಮ್ಮ ಸೇರಿದಂತೆ ಗಣ್ಯರು ಹಾಜರಾಗಿದ್ದರು. ಅವರು ಗೋಪಾಲರ ಸೇವೆಯನ್ನು ಅತ್ಯಂತ ಗೌರಯುತವಾಗಿ ಶ್ಲಾಘಿಸಿದ್ದರು.

ಮುಂದೆ 2026ರ ಫೆಬ್ರವರಿಯಲ್ಲಿ 25ನೇ ವರ್ಷದ ಆಚರಣೆ ನಡೆಯಲಿದ್ದು, ಹೆಚ್ಚಿನ ಮಕ್ಕಳನ್ನು ಸೇರಿಸುವುದು, ಆರೋಗ್ಯ ತಪಾಸಣೆ ಶಿಬಿರ, ಹೊಸ ಬಟ್ಟೆ–ಕಿಟ್ ವಿತರಣೆ ಹಾಗೂ ಊಟದ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ ಗೋಪಾಲರದಲ್ಲಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವಾರ್ಷಿಕ ಸಹಾಯಧನ ಮತ್ತು ರಾಜ್ಯ ಪ್ರಶಸ್ತಿ ಶಿಫಾರಸು ಮಾಡುವಂತೆ ಅವರು ಮನವಿ ಮಾಡಿದ್ದಾರೆ.

• ಅನೇಕ ಸ್ಥಳೀಯರ  ಅಭಿಪ್ರಾಯ: 

“ನಮ್ಮ ಮಕ್ಕಳನ್ನು ಹಿಡಿಯಲು ಜನ ಹಿಂದೇಟು ಹಾಕುತ್ತಾರೆ. ಆದ್ರೆ ಇವರು ದೇವರಂತೆ ನೋಡ್ಕೊಳ್ಳ್ತಾರೆ. ಎಚ್.ಗೋಪಾಲರು ಮಾಡುತ್ತಿರುವ ಕಾರ್ಯ  ಸಮಾಜಕ್ಕೆ ಮಾದರಿ.ಅವರಿಗೆ ರಾಜ್ಯ ಪ್ರಶಸ್ತಿ ಮತ್ತು  ಸರ್ಕಾರ ಸಹಾಯ ಧನ ನೀಡಬೇಕು”.

 

Contents
“ಗಂಗಾವತಿ| 24 ವರ್ಷಗಳಿಂದ ಅಂಧ–ಬುದ್ಧಿಮಾಂಧ್ಯ ಮಕ್ಕಳಿಗೆ ಉಚಿತ  ಕ್ಷೌರ ಸೇವೆ : 25ನೇ ವರ್ಷದ ಆಚರಣೆ .! ಸರ್ಕಾರದಿಂದ ಸಹಾಯಧನ–ಪ್ರಶಸ್ತಿ ನೀಡುವಂತೆ ಎಡಿಸಿ ಸಿದ್ದರಾಮೇಶ್ವರ ಅವರಿಗೆ ಮನವಿ”• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗಂಗಾವತಿ :  ನಗರದ  ನೇತ್ರಾವತಿ ಹೇರ್ ಸಲೂನ್‌ ಮತ್ತು ಮೆನ್ಸ್‌  ಪಾರ್ಲ್ ರ್‌  ಮಾಲೀಕ ಎಚ್‌ . ಗೋಪಾಲ ಅವರು ಕಳೆದ 24 ವರ್ಷಗಳಿಂದ ಅಂಧ, ಬುದ್ಧಿಮಾಂಧ್ಯ ಮತ್ತು ವಿಶೇಷ ಚೇತನ ಮಕ್ಕಳಿಗೆ ಉಚಿತ ಹೇರ್ ಕಟಿಂಗ್ ಹಾಗೂ ಊಟದ ವ್ಯವಸ್ಥೆ ನಡೆಸುತ್ತಿರುವ ಸಮಾಜಮುಖಿ ಸೇವೆಗೆ ಸರ್ಕಾರದಿಂದ ಸಹಾಯಧನ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗೆ ಶಿಫಾರಸು ಮಾಡಬೇಕೆಂದು ಕೊಪ್ಪಳ ಎಡಿಸಿ ಸಿದ್ದರಾಮೇಶ್ವರ ಅವರಿಗೆ  ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.ಹೆಚ್ಚುತ್ತಿರುವ ಸ್ವಾರ್ಥದ ಕಾಲದಲ್ಲಿ “ನಿನ್ನ ಮಕ್ಕಳನ್ನು ನನ್ನ ಮಕ್ಕಳಂತೆ” ನೋಡಿಕೊಳ್ಳುವವರ ಅಪರೂಪ. ಇಂತದರಲ್ಲಿ ಗೋಪಾಲರು ನಿಸ್ವಾರ್ಥ ಸೇವೆ ಮೆಚ್ಚುವಂತಹುದು.2003 ಇಸ್ವಿಯಲ್ಲಿ 10 ಅಂಧ ಮಕ್ಕಳಿಗೆ ಸೇವೆ ನೀಡುವ ಮೂಲಕ ಆರಂಭವಾದ ಈ ಚಟುವಟಿಕೆ, ಈಗ ಮೂರು ಕೇಂದ್ರಗಳ 150ಕ್ಕೂ ಹೆಚ್ಚು ಮಕ್ಕಳಿಗೆ ತಲುಪಿದೆ. ಪ್ರಸ್ತುತ ಸೇವೆಯನ್ನು ಗಂಗಾವತಿ ಲಯನ್ಸ್ ಬುದ್ಧಿಮಾಂಧ್ಯ ಶಾಲೆಯ 50 ಮಕ್ಕಳು, ದಾಸನಾಳ A.R.D ವಿಶೇಷ ಚೇತನ ಶಾಲೆಯ 60 ಮಕ್ಕಳು ಹಾಗೂ ನಗರ–ತಾಲೂಕಿನ 40ಕ್ಕೂ ಹೆಚ್ಚು ಅಂಧ–ವಿಶೇಷ ಚೇತನ ಮಕ್ಕಳು ಕ್ಷೌರಿಕ ಉಚಿತ ಸೇವೆಯನ್ನು  ಪಡೆಯುತ್ತಿದ್ದಾರೆ ಎಂದರು.ಈ ಕಾರ್ಯಕ್ರಮವನ್ನು ಗೋಪಾಲರು ಯಾವುದೇ ದೇಣಿಗೆ ಅಥವಾ ಸಂಸ್ಥೆಗಳ ನೆರವಿಲ್ಲದೆ, ಸಂಪೂರ್ಣವಾಗಿ ತಮ್ಮ ಆದಾಯದಿಂದಲೇ ನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಹೇರ್ ಕಟಿಂಗ್ ಜೊತೆಗೆ ಉಪಹಾರ, ಜ್ಯೂಸ್, ಬಿಸ್ಕತ್ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.ಈ ಸೇವಾ ಕಾರ್ಯಕ್ರಮದ 10ನೇ ವರ್ಷದ ಸಂಭ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಂಸದ ಶಿವರಾಮಗೌಡ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹಾಗೂ ನಗರಸಭಾಧ್ಯಕ್ಷೆ ಪಾರ್ವತಮ್ಮ ಸೇರಿದಂತೆ ಗಣ್ಯರು ಹಾಜರಾಗಿದ್ದರು. ಅವರು ಗೋಪಾಲರ ಸೇವೆಯನ್ನು ಅತ್ಯಂತ ಗೌರಯುತವಾಗಿ ಶ್ಲಾಘಿಸಿದ್ದರು.ಮುಂದೆ 2026ರ ಫೆಬ್ರವರಿಯಲ್ಲಿ 25ನೇ ವರ್ಷದ ಆಚರಣೆ ನಡೆಯಲಿದ್ದು, ಹೆಚ್ಚಿನ ಮಕ್ಕಳನ್ನು ಸೇರಿಸುವುದು, ಆರೋಗ್ಯ ತಪಾಸಣೆ ಶಿಬಿರ, ಹೊಸ ಬಟ್ಟೆ–ಕಿಟ್ ವಿತರಣೆ ಹಾಗೂ ಊಟದ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆ ಗೋಪಾಲರದಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ವಾರ್ಷಿಕ ಸಹಾಯಧನ ಮತ್ತು ರಾಜ್ಯ ಪ್ರಶಸ್ತಿ ಶಿಫಾರಸು ಮಾಡುವಂತೆ ಅವರು ಮನವಿ ಮಾಡಿದ್ದಾರೆ.• ಅನೇಕ ಸ್ಥಳೀಯರ  ಅಭಿಪ್ರಾಯ: “ನಮ್ಮ ಮಕ್ಕಳನ್ನು ಹಿಡಿಯಲು ಜನ ಹಿಂದೇಟು ಹಾಕುತ್ತಾರೆ. ಆದ್ರೆ ಇವರು ದೇವರಂತೆ ನೋಡ್ಕೊಳ್ಳ್ತಾರೆ. ಎಚ್.ಗೋಪಾಲರು ಮಾಡುತ್ತಿರುವ ಕಾರ್ಯ  ಸಮಾಜಕ್ಕೆ ಮಾದರಿ.ಅವರಿಗೆ ರಾಜ್ಯ ಪ್ರಶಸ್ತಿ ಮತ್ತು  ಸರ್ಕಾರ ಸಹಾಯ ಧನ ನೀಡಬೇಕು”.