LOCAL NEWS: “ಕೊಪ್ಪಳ| ಕಟ್ಟಡ ಕಾರ್ಮಿಕರ ಆನ್‌ಲೈನ್ ಅರ್ಜಿ ತಾಂತ್ರಿಕ ತೊಂದರೆ: ಸೌಲಭ್ಯ ಜಾರಿಯಲ್ಲಿ ವಿಳಂಬಕ್ಕೆ ಎಐಯುಟಿಯುಸಿ ಆಕ್ರೋಶ”

By admin

“ಕೊಪ್ಪಳ| ಕಟ್ಟಡ ಕಾರ್ಮಿಕರ ಆನ್‌ಲೈನ್ ಅರ್ಜಿ ತಾಂತ್ರಿಕ ತೊಂದರೆ: ಸೌಲಭ್ಯ ಜಾರಿಯಲ್ಲಿ ವಿಳಂಬಕ್ಕೆ ಎಐಯುಟಿಯುಸಿ ಆಕ್ರೋಶ”

Contents
“ಕೊಪ್ಪಳ| ಕಟ್ಟಡ ಕಾರ್ಮಿಕರ ಆನ್‌ಲೈನ್ ಅರ್ಜಿ ತಾಂತ್ರಿಕ ತೊಂದರೆ: ಸೌಲಭ್ಯ ಜಾರಿಯಲ್ಲಿ ವಿಳಂಬಕ್ಕೆ ಎಐಯುಟಿಯುಸಿ ಆಕ್ರೋಶ”• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಕೊಪ್ಪಳ:ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆನ್‌ಲೈನ್ ಅರ್ಜಿ ಪ್ರಕ್ರಿಯೆಯಲ್ಲಿ ಉಂಟಾದ ತಾಂತ್ರಿಕ ತೊಂದರೆಗಳು ಹಾಗೂ ಸೌಲಭ್ಯ ಜಾರಿಯಲ್ಲಿ ಕಾಣಿಸಿಕೊಂಡಿರುವ ವಿಳಂಬವನ್ನು ಖಂಡಿಸಿ, ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾ ಕಾರ್ಮಿಕಾಧಿಕಾರಿಗಳ ಪರವಾಗಿ ಹೇಮಂತ್ ಸಿಂಗ್  ಅವರಿಗೆ ಮನವಿ ಪತ್ರ ನೀಡಿದರು. .ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ  ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ, “ಮಂಡಳಿ ಘೋಷಿಸಿರುವ ಸಹಾಯಧನಗಳಿಗೆ ಕಾರ್ಮಿಕರು ಅರ್ಜಿ ಹಾಕಿದಾಗ ತಾಂತ್ರಿಕ ದೋಷ, ಅಪೂರ್ಣ ಮಾಹಿತಿ, ಸರ್ವರ್ ಸಮಸ್ಯೆ ಮುಂತಾದ ನೆಪಗಳಲ್ಲಿ ಅರ್ಜಿಗಳನ್ನು ತಿರಸ್ಕರಿಸುವುದು ಸಾಮಾನ್ಯವಾಗಿದೆ. ಅನಾವಶ್ಯಕ ವಿಳಂಬದಿಂದ ಸಾವಿರಾರು ಕಾರ್ಮಿಕರು ತಮ್ಮ ಹಕ್ಕಿನ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.ಇತ್ತೀಚೆಗೆ ಮಂಡಳಿಯು ಹೊಸ ಸಾಫ್ಟ್‌ವೇರ್ ಅನ್ನು ಪರಿಚಯಿಸಿದ್ದರೂ, ಅರ್ಜಿ ಸಲ್ಲಿಕೆ, ರಿನಿವಲ್, ನೋಂದಣಿ ಎಲ್ಲದರಲ್ಲೂ ಗಂಭೀರ ತಾಂತ್ರಿಕ ತೊಡಕುಗಳು ಎದುರಾಗುತ್ತಿದ್ದು, ಕಾರ್ಮಿಕರು ದಿನಗಟ್ಟಲೆ ಕಛೇರಿ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.“ಸಾಫ್ಟ್‌ವೇರ್ ದೋಷದ ನೆಪದಲ್ಲಿ ಅರ್ಹ ಕಾರ್ಮಿಕರಿಗೆ ಶೈಕ್ಷಣಿಕ, ಮದುವೆ, ಆರೋಗ್ಯ, ಡೆಲಿವರಿ ಸೇರಿದಂತೆ ಎಲ್ಲಾ ಸಹಾಯಧನಗಳನ್ನು ನಿಲ್ಲಿಸಿದಂತಾಗಿದೆ. ತಾಂತ್ರಿಕ ವ್ಯವಸ್ಥೆ ಸುಧಾರಿಸುವವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು” ಎಂದು ಅವರು ಒತ್ತಾಯಿಸಿದರು.ಸರ್ಕಾರ ವಿತರಿಸುವ ಸುರಕ್ಷತಾ ಕಿಟ್‌ಗಳು ಕಳಪೆ ಗುಣಮಟ್ಟದಾಗಿದ್ದು, ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಅನುಮಾನಗಳಿವೆ . “ನಿಧಿಗಳು ಕಾರ್ಮಿಕರ ಹೆಸರಿನಲ್ಲಿ ಸಂಗ್ರಹವಾಗುತ್ತವೆ; ಆದರೆ ಅವರಿಗಾಗಿಯೇ ನಿಗದಿಸಿದ ವಸ್ತುಗಳು ಗುಣಮಟ್ಟ ಕಳೆದುಕೊಂಡಿವೆ. ಇದು ಗಂಭೀರ ವಿಷಯ. ತಕ್ಷಣ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.ಮಂಡಳಿಯ ನಿರ್ವಹಣೆಯಲ್ಲಿ ಪಾರದರ್ಶಕತೆ ಕೊರತೆಯಿದ್ದು, ಕಾರ್ಮಿಕರ ಕಲ್ಯಾಣ ನಿಧಿ ಬೇರೆಡೆ ಬಳಸುವ ಪ್ರಯತ್ನಗಳು ಗೋಚರಿಸುತ್ತಿವೆ ಎಂದು ನಾಯಕರು ಆರೋಪಿಸಿದರು. “ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವುದನ್ನು ಕೂಡಲೇ ಜಾರಿಗೊಳಿಸಬೇಕು. ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು  ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ನಾಗರಾಜ್ ಹುಲಿಗಿ, ರಾಮಲಿಂಗ ಶಾಸ್ತ್ರಿ, ಶರಣಪ್ಪ, ಶಬ್ಬೀರ್ ಕುಲಿಮಿ, ರಾಜೇಶ್, ಸಿದ್ದಪ್ಪ, ಎಲ್ಲಪ್ಪ ಬೋಚನಹಳ್ಳಿ, ಗಂಗಮ್ಮ, ಹುಸೇನ್ ಭಾಶಾ, ರಾಮಣ್ಣ, ಕಟ್ಟೆಪ್ಪ ಭಾಗ್ಯನಗರ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.

• ಸೆಕ್ಯುಲರ್‌ ವಾಯ್ಸ್‌  ನ್ಯೂಸ್‌ ಕೊಪ್ಪಳ:

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆನ್‌ಲೈನ್ ಅರ್ಜಿ ಪ್ರಕ್ರಿಯೆಯಲ್ಲಿ ಉಂಟಾದ ತಾಂತ್ರಿಕ ತೊಂದರೆಗಳು ಹಾಗೂ ಸೌಲಭ್ಯ ಜಾರಿಯಲ್ಲಿ ಕಾಣಿಸಿಕೊಂಡಿರುವ ವಿಳಂಬವನ್ನು ಖಂಡಿಸಿ, ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾ ಕಾರ್ಮಿಕಾಧಿಕಾರಿಗಳ ಪರವಾಗಿ ಹೇಮಂತ್ ಸಿಂಗ್  ಅವರಿಗೆ ಮನವಿ ಪತ್ರ ನೀಡಿದರು. .

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ  ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ, “ಮಂಡಳಿ ಘೋಷಿಸಿರುವ ಸಹಾಯಧನಗಳಿಗೆ ಕಾರ್ಮಿಕರು ಅರ್ಜಿ ಹಾಕಿದಾಗ ತಾಂತ್ರಿಕ ದೋಷ, ಅಪೂರ್ಣ ಮಾಹಿತಿ, ಸರ್ವರ್ ಸಮಸ್ಯೆ ಮುಂತಾದ ನೆಪಗಳಲ್ಲಿ ಅರ್ಜಿಗಳನ್ನು ತಿರಸ್ಕರಿಸುವುದು ಸಾಮಾನ್ಯವಾಗಿದೆ. ಅನಾವಶ್ಯಕ ವಿಳಂಬದಿಂದ ಸಾವಿರಾರು ಕಾರ್ಮಿಕರು ತಮ್ಮ ಹಕ್ಕಿನ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಮಂಡಳಿಯು ಹೊಸ ಸಾಫ್ಟ್‌ವೇರ್ ಅನ್ನು ಪರಿಚಯಿಸಿದ್ದರೂ, ಅರ್ಜಿ ಸಲ್ಲಿಕೆ, ರಿನಿವಲ್, ನೋಂದಣಿ ಎಲ್ಲದರಲ್ಲೂ ಗಂಭೀರ ತಾಂತ್ರಿಕ ತೊಡಕುಗಳು ಎದುರಾಗುತ್ತಿದ್ದು, ಕಾರ್ಮಿಕರು ದಿನಗಟ್ಟಲೆ ಕಛೇರಿ ಸುತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಾಫ್ಟ್‌ವೇರ್ ದೋಷದ ನೆಪದಲ್ಲಿ ಅರ್ಹ ಕಾರ್ಮಿಕರಿಗೆ ಶೈಕ್ಷಣಿಕ, ಮದುವೆ, ಆರೋಗ್ಯ, ಡೆಲಿವರಿ ಸೇರಿದಂತೆ ಎಲ್ಲಾ ಸಹಾಯಧನಗಳನ್ನು ನಿಲ್ಲಿಸಿದಂತಾಗಿದೆ. ತಾಂತ್ರಿಕ ವ್ಯವಸ್ಥೆ ಸುಧಾರಿಸುವವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು” ಎಂದು ಅವರು ಒತ್ತಾಯಿಸಿದರು.

ಸರ್ಕಾರ ವಿತರಿಸುವ ಸುರಕ್ಷತಾ ಕಿಟ್‌ಗಳು ಕಳಪೆ ಗುಣಮಟ್ಟದಾಗಿದ್ದು, ವಿತರಣೆಯಲ್ಲಿ ಅವ್ಯವಹಾರ ನಡೆದಿರುವ ಅನುಮಾನಗಳಿವೆ . “ನಿಧಿಗಳು ಕಾರ್ಮಿಕರ ಹೆಸರಿನಲ್ಲಿ ಸಂಗ್ರಹವಾಗುತ್ತವೆ; ಆದರೆ ಅವರಿಗಾಗಿಯೇ ನಿಗದಿಸಿದ ವಸ್ತುಗಳು ಗುಣಮಟ್ಟ ಕಳೆದುಕೊಂಡಿವೆ. ಇದು ಗಂಭೀರ ವಿಷಯ. ತಕ್ಷಣ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.

ಮಂಡಳಿಯ ನಿರ್ವಹಣೆಯಲ್ಲಿ ಪಾರದರ್ಶಕತೆ ಕೊರತೆಯಿದ್ದು, ಕಾರ್ಮಿಕರ ಕಲ್ಯಾಣ ನಿಧಿ ಬೇರೆಡೆ ಬಳಸುವ ಪ್ರಯತ್ನಗಳು ಗೋಚರಿಸುತ್ತಿವೆ ಎಂದು ನಾಯಕರು ಆರೋಪಿಸಿದರು. “ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ನೀಡುವುದನ್ನು ಕೂಡಲೇ ಜಾರಿಗೊಳಿಸಬೇಕು. ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು” ಎಂದು  ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ನಾಗರಾಜ್ ಹುಲಿಗಿ, ರಾಮಲಿಂಗ ಶಾಸ್ತ್ರಿ, ಶರಣಪ್ಪ, ಶಬ್ಬೀರ್ ಕುಲಿಮಿ, ರಾಜೇಶ್, ಸಿದ್ದಪ್ಪ, ಎಲ್ಲಪ್ಪ ಬೋಚನಹಳ್ಳಿ, ಗಂಗಮ್ಮ, ಹುಸೇನ್ ಭಾಶಾ, ರಾಮಣ್ಣ, ಕಟ್ಟೆಪ್ಪ ಭಾಗ್ಯನಗರ ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದ್ದರು.