“ಕೊಪ್ಪಳ| ಹನುಮಮಾಲಾ ವಿಸರ್ಜನೆ: ಡಿ.2 ಮತ್ತು 3ರಂದು ಅಂಜನಾದ್ರಿ ಪರ್ವತಕ್ಕೆ ಭಾರಿ ಜನಸಂದಣಿ ನಿರೀಕ್ಷೆ.!
ಸಿದ್ಧತೆ ಕಟ್ಟುನಿಟ್ಟಾಗಿ ಕಲ್ಪಿಸಿ – ಸಚಿವ ಶಿವರಾಜ್ ತಂಗಡಗಿ ಸೂಚನೆ”
ಸಿದ್ಧತೆ ಕಟ್ಟುನಿಟ್ಟಾಗಿ ಕಲ್ಪಿಸಿ – ಸಚಿವ ಶಿವರಾಜ್ ತಂಗಡಗಿ ಸೂಚನೆ”
• ಗಂಗಾವತಿ ನಗರಸಭೆಯಲ್ಲಿ ನಡೆದ ಪೂರ್ವಭಾವಿ ಸಭೆ.!

Contents
“ಕೊಪ್ಪಳ| ಹನುಮಮಾಲಾ ವಿಸರ್ಜನೆ: ಡಿ.2 ಮತ್ತು 3ರಂದು ಅಂಜನಾದ್ರಿ ಪರ್ವತಕ್ಕೆ ಭಾರಿ ಜನಸಂದಣಿ ನಿರೀಕ್ಷೆ.!
ಸಿದ್ಧತೆ ಕಟ್ಟುನಿಟ್ಟಾಗಿ ಕಲ್ಪಿಸಿ – ಸಚಿವ ಶಿವರಾಜ್ ತಂಗಡಗಿ ಸೂಚನೆ”• ಗಂಗಾವತಿ ನಗರಸಭೆಯಲ್ಲಿ ನಡೆದ ಪೂರ್ವಭಾವಿ ಸಭೆ.!• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ: ಡಿಸೆಂಬರ್ 2 ಮತ್ತು 3 ರಂದು ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ನಡೆಯಲಿರುವ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಅಸೌಕರ್ಯ ಉಂಟಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವುದು ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್. ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು. ಗಂಗಾವತಿ ನಗರಸಭೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮಿತಿಯ ಅಧಿಕಾರಿಗಳು ಕಾರ್ಯಕ್ರಮದ ಅವಧಿಯಲ್ಲಿ ಸ್ಥಳದಲ್ಲೇ ಹಾಜರಿದ್ದು ತಮ್ಮ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.ಭಕ್ತರ ಸುರಕ್ಷತೆಗಾಗಿ ಪ್ರಸಾದ ವಿತರಣೆ ಪೂರ್ವ ಪರೀಕ್ಷೆ, ಪ್ರಸಾದ ನಿಲಯ ಹಾಗೂ ಪ್ರಮುಖ ಮಾರ್ಗಗಳಲ್ಲಿ ಸಿಸಿಟಿವಿ ಅಳವಡಿಕೆ, ಜನಸಂದಣಿ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹಾಗೂ ವಿಡಿಯೋಗ್ರಾಫಿ ಕಡ್ಡಾಯ ಎಂದು ನಿರ್ದೇಶಿಸಿದರು. ವಿದ್ಯುತ್ ಪೂರೈಕೆಯಲ್ಲಿ ಲೋಪವಾಗದಂತೆ ಜೆಸ್ಕಾಂ ಹಾಗೂ ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿಶಾಮಕ ದಳಕ್ಕೆ ವಿಶೇಷ ಎಚ್ಚರಿಕೆ ನೀಡಿದರು. ಅಲ್ಲದೆ ಭಕ್ತರ ಆರೋಗ್ಯದ ದೃಷ್ಟಿಯಿಂದ ನೀರು, ಗ್ಲುಕೋಸ್, ಮದ್ಯ ವಿತರಣೆ 24 ಗಂಟೆಗಳಗೂ ಲಭ್ಯವಾಗುವಂತೆ ಮಾಡುವಂತೆ ಹೇಳಿದ್ದಾರೆ.ಪಾದಯಾತ್ರೆಯಿಂದ ಆಗಮಿಸುವ ಹನುಮಮಾಲಾಧಾರಿಗಳಿಗಾಗಿ ಮಾರ್ಗಮಧ್ಯೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಮತ್ತು ಸ್ನಾನ–ಉಡುಪು ಬದಲಾವಣೆ ಸೌಲಭ್ಯ ಕಲ್ಪಿಸಬೇಕೆಂದು ಲೋಕಸಭಾ ಸದಸ್ಯ ಕೆ.ರಾಜಶೇಖರ ಬಸವರಾಜ ಹಿಟ್ನಾಳ್ ಸಲಹೆ ನೀಡಿದರು. ಅಂಜನಾದ್ರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುವಂತೆ ಬೆಳಕು ಅಲಂಕಾರ, ತೋರಣ ಹಾಗೂ ಟೆಂಟ್ ವ್ಯವಸ್ಥೆ ಕಲ್ಪಿಸುವುದಕ್ಕೂ ಸೂಚನೆ ನೀಡಲಾಯಿತು. ಪ್ಲಾಸ್ಟಿಕ್ ವಸ್ತುಗಳು, ಗುಟ್ಕಾ ಮತ್ತು ಧೂಮಪಾನಕ್ಕೆ ಕಟ್ಟುನಿಟ್ಟಿನ ನಿಷೇಧ ಜಾರಿಯಲ್ಲಿರಲಿದೆ.ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಅವರು ಮೂಲಭೂತ ಸೌಕರ್ಯ, ಆಹಾರ, ಆರೋಗ್ಯ, ಸ್ವಚ್ಛತೆ, ಸಾರಿಗೆ, ವಿದ್ಯುತ್, ಭದ್ರತೆ, ಪ್ರಸಾದ, ಶಿಷ್ಟಾಚಾರ ಸೇರಿದಂತೆ ಅನೇಕ ಸಮಿತಿಗಳನ್ನು ರಚಿಸಲಾಗಿದ್ದು, ಕಾರ್ಯಭಾರಿ ಹಂಚಿಕೆ ಪೂರ್ಣಗೊಂಡಿದೆ ಎಂದು ತಿಳಿಸಿದರು. ಸಭೆಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ನಗರಸಭೆ ಅಧ್ಯಕ್ಷೆ ಹಿರಾಬಾಯಿ, CEO ವರ್ಣಿತ್ ನೇಗಿ, ಎಸ್‌ಪಿ ಡಾ. ರಾಮ್ ಎಲ್. ಅರಸಿದ್ದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

