SHOCKING NEWS: “ಶಹಾಪುರ| ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹತ್ತಿ ಮಿಲ್ ಗೆ ಬೆಂಕಿ:  15 ಕೋಟಿಗೂ ಅಧಿಕ ನಷ್ಟ ಸಂಭವ”

By admin

“ಶಹಾಪುರ| ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹತ್ತಿ ಮಿಲ್ ಗೆ ಬೆಂಕಿ:  15 ಕೋಟಿಗೂ ಅಧಿಕ ನಷ್ಟ ಸಂಭವ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಶಹಾಪುರ:

ತಾಲೂಕಿನ ಹುಲಕಲ್ ಗ್ರಾಮದ ಬಳಿ ಇರುವ ಶ್ರೀ ಮಣಿಕಂಠ ಕಾಟನ್ ಜಿನ್ನಿಂಗ್ ಇಂಡಸ್ಟ್ರೀಸ್‌ಗೆ ಸೋಮವಾರ ಸಂಜೆ ಸುಮಾರು 5.30ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಹೊತ್ತಿ ಉರಿದ ದುರಂತ ಸಂಭವಿಸಿದೆ.

ಅಕಸ್ಮಾತ್ ಉಂಟಾದ ಅಗ್ನಿಜ್ವಾಲೆಗಳು ಕ್ಷಣಾರ್ಧದಲ್ಲಿ ಹರಡಿ, ಮಿಲ್‌ನ ಯಂತ್ರೋಪಕರಣಗಳ ಜೊತೆ ಸಾವಿರಾರು ಕ್ವಿಂಟಲ್ ಹತ್ತಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಒಟ್ಟು ನಷ್ಟ 15 ಕೋಟಿಗೂ ಅಧಿಕವಾಗಬಹುದು ಎಂದು ಮಿಲ್ ಮಾಲೀಕರಾದ ಬಿ.ಎ. ಗುರುಬಸವ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದ ಕೂಡಲೇ ಶಹಾಪುರ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ನಾಲ್ಕು ಜೆಸಿಬಿ ಸೇರಿ ಹಲವು ವಾಹನಗಳು, ಮಿಲ್ ನ ಸಿಬ್ಬಂದಿ ಹಾಗೂ ಸ್ಥಳೀಯ ಸಾರ್ವಜನಿಕರೂ ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿರುವುದು ಕಂಡುಬಂತು.

ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ  ಈ ಕುರಿತು ಪ್ರಕರಣ ದಾಖಲಾಗಿದೆ.