SOCIAL MEDIA VIRAL NEWS: ಬಾಗಲಕೋಟೆ| ಪತ್ನಿಯ ಜೊತೆ ಸಲುಗೆಯಿಂದ ಮಾತಾಡಿದ್ದ ಚಾಲಕ… ರೊಚ್ಚಿಗೆದ್ದ ಮಾಲೀಕ ಕಿಡ್ನ್ಯಾಪ್ ಮಾಡಿ ಮನುಷ್ಯತ್ವ ಮರೆತು ಕ್ರೂರ ಹಲ್ಲೆ! ಮುಂದೆ ಏನಾಯ್ತು? ಇಲ್ಲಿದೆ ನೋಡಿ— ಡೀಟೇಲ್ಸ್ ಸ್ಟೋರಿ!”

By admin

“ಬಾಗಲಕೋಟೆ| ಪತ್ನಿಯ ಜೊತೆ ಸಲುಗೆಯಿಂದ ಮಾತಾಡಿದ್ದ ಚಾಲಕ:  ರೊಚ್ಚಿಗೆದ್ದ ಮಾಲೀಕ ಕಿಡ್ನ್ಯಾಪ್ ಮಾಡಿ ಮನುಷ್ಯತ್ವ ಮರೆತು ಕ್ರೂರ ಹಲ್ಲೆ! ಮುಂದೆ ಏನಾಯ್ತು? ಇಲ್ಲಿದೆ ನೋಡಿ— ಡೀಟೇಲ್ಸ್ ಸ್ಟೋರಿ!”

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ಮಾಲೀಕನ ಪತ್ನಿಯ ಜೊತೆ ಗೂಡ್ಸ್ ಚಾಲಕ ಸಲುಗೆಯಿಂದ ಮಾತಾಡಿದ್ದೆ ದೊಡ್ಡ ತಪ್ಪಗೆ ಪತ್ನಿ ಹಾಗೂ ಚಾಲಕನ ಸಲುಗೆ ನೋಡಿ ಕೆಂಡಾಮಂಡಲನಾದ ಮಹಿಳೆ ಗಂಡ, ತನ್ನದೇ ಮನೆಯಲ್ಲಿ ಕೆಲಸಕ್ಕಿದ್ದ ಡ್ರೈವರ್​ನನ್ನೇ ಕಿಡ್ನ್ಯಾಪ್ ಮಾಡಿ ಅಮಾನವೀಯ ಕ್ರೂರವಾಗಿ ಮನಬಂದತೆ ಹಲ್ಲೆ ಮಾಡಿರುವ  ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ  ಭಾರಿ ವಿಡಿಯೋ ವೈರಲಾಗುವ ಮೂಲಕ ಸದ್ದು ಮಾಡಿ ಸುದ್ದಿ ಆಗಿದೆ.

• ಚಾಲಕನ‌ ಕೈಗಳನ್ನ ಕಟ್ಟಿ ಹಲ್ಲೆ

ಮಾಲೀಕನ ಪತ್ನಿಯ ಜೊತೆ ಗೂಡ್ಸ್ ಚಾಲಕ ಸಲುಗೆಯಿಂದ ಮಾತಾಡಿದ್ದೆ ದೊಡ್ಡ ತಪ್ಪಾಗಿದೆ. ಪತ್ನಿ ಹಾಗೂ ಚಾಲಕನ ಸಲುಗೆ ನೋಡಿ ಕೆಂಡಾಮಂಡಲನಾದ ಮಹಿಳೆ ಗಂಡ, ತನ್ನದೇ ಮನೆಯಲ್ಲಿ ಕೆಲಸಕ್ಕಿದ್ದ ಡ್ರೈವರ್​ನನ್ನೇ ಕಿಡ್ನ್ಯಾಪ್ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಚಾಲಕನ‌ ಕೈಗಳನ್ನ ಕಟ್ಟಿ ಹಲ್ಲೆ ಮಾಡಿ ಕೋಲಿನಿಂದ ಕಾಲು ಬೆನ್ನಿಗೆ ಬಾಸುಂಡೆ‌ ಬರುವಂತೆ ಹಲ್ಲೆ ಮಾಡಿದ್ದಾರೆ.

• ತುಳಸಿಗೇರಿ ಗುಡ್ಡಕ್ಕೆ ಕರೆದೊಯ್ದು ಚಾಲಕನ ಮೇಲೆ ಕ್ರೂರ ಹಲ್ಲೆ:

ಪ್ರಕಾಶ್ ಹೊಸಮನಿ (25) ಎಂಬ ಚಾಲಕನನ್ನು  ಮಾಲೀಕ ಯಂಕಪ್ಪ ಚೂರಿ ತುಳಸಿಗೇರಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅನೇಕರು ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಲು ಅ. 3 ರಂದು ಈ ಘಟನೆ ನಡೆದಿದ್ದು,  ಪ್ರಕರಣ ತಡವಾಗಿ ಬೆಳಕಿಗೆ ಬಂದ ಬಳಿಕ ನವನಗರ ಪೊಲೀಸ್ ಠಾಣೆಯಲ್ಲಿ 10 ಜನರ ಮೇಲೆ ಕೇಸು ದಾಖಲಾಗಿದೆ.ತನಿಖೆ ಮುಂದುವರೆದಿದೆ ಮೂಲಗಳಿಂದ ಎಂದು ತಿಳಿದು ಬಂದಿದೆ.