“ಕುಕನೂರ| ವ್ಯಸನ ತ್ಯಜಿಸಿ 64 ಜನ ಹೊಸ ಬದುಕಿಗೆ ಪಾದಾರ್ಪಣೆ: 2009ನೇ ಮದ್ಯ ಮರ್ಜನ ಶಿಬಿರ ಸಮಾರೋಪ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕುಕನೂರು:
ಪಟ್ಟಣದ ಅನ್ನದಾನೇಶ್ವರ ಮಠದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಹಾಗೂ ಸಂಶೋಧನಾ ಕೇಂದ್ರ, ಲಾಯಿಲ–ಬೆಳ್ತಂಗಡಿ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ನಡೆದ 2009ನೇ ಮಧ್ಯವರ್ಜನ ಶಿಬಿರ ಬುಧವಾರ ಸಮಾಪ್ತಿಗೊಂಡಿತು.
ಸಮಾರೋಪದಲ್ಲಿ ಮಾತನಾಡಿದ ಕುಕನೂರು ಅನ್ನದಾನೇಶ್ವರ ಶಾಖಾಮಠದ ಡಾ. ಮಹಾದೇವ ದೇವರು, “ತಪ್ಪು ಮಾಡುವದು ಮಾನವನ ಸ್ವಭಾವ. ಆದರೆ ಅದನ್ನು ಒಪ್ಪಿಕೊಂಡು ಗುರುಸನ್ನಿಧಿಯಲ್ಲಿ ಕ್ಷಮೆ ಯಾಚಿಸಿದಾಗ ಜೀವನ ಪಾವನವಾಗುತ್ತದೆ. ಮಧ್ಯತ್ಯಾಗ ಮಾಡಿ ಹೊಸ ಬದುಕಿಗೆ ಕಾಲಿಡುತ್ತಿರುವ ಶಿಬಿರಾರ್ಥಿಗಳು ಕುಟುಂಬದೊಂದಿಗೆ ಸಂತೋಷವಾಗಿ ಬದುಕಬೇಕು,” ಎಂದು ಆಶೀರ್ವಚನ ನೀಡಿದರು.
ಅವರು ಮುಂದುವರಿದು, “ಸರ್ಕಾರ ಮಧ್ಯದ ಗಡಿ ತೆರೆಯುತ್ತಿದ್ದರೆ, ಧರ್ಮಸ್ಥಳದ ವೀರೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ನಡೆದಿರುವ ಮಧ್ಯಮುಕ್ತ ಕ್ರಾಂತಿ ಲಕ್ಷಾಂತರ ಮನೆಗಳಿಗೆ ಬೆಳಕು ತಂದಿದೆ,” ಎಂದರು.
ಅವರು ಮುಂದುವರಿದು, “ಸರ್ಕಾರ ಮಧ್ಯದ ಗಡಿ ತೆರೆಯುತ್ತಿದ್ದರೆ, ಧರ್ಮಸ್ಥಳದ ವೀರೇಂದ್ರ ಹೆಗಡೆ ಅವರ ನೇತೃತ್ವದಲ್ಲಿ ನಡೆದಿರುವ ಮಧ್ಯಮುಕ್ತ ಕ್ರಾಂತಿ ಲಕ್ಷಾಂತರ ಮನೆಗಳಿಗೆ ಬೆಳಕು ತಂದಿದೆ,” ಎಂದರು.