“ವಿಜಯನಗರ| ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸಿ: ಸಮಾಜಸೇವಕಿ ರಶ್ಮಿ ರಾಜಶೇಖರ ಕರೆ”
• ಮಹಿಳೆಯರ ವಾಲಿಬಾಲ್ ಸ್ಪರ್ಧೆಯಲ್ಲಿ ವಿಜಯನಗರ ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ”
• ಸೆಕ್ಯುಲರ್ ವಾಯ್ಸ್ ನ್ಯೂಸ್ ಹೊಸಪೇಟೆ :
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ–ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಆದ್ಯತೆ ನೀಡಬೇಕು ಎಂದು ಸಮಾಜಸೇವಕಿ ರಶ್ಮಿ ರಾಜಶೇಖರ ಅವರು ಸಲಹೆ ನೀಡಿದರು.
ವಿದ್ಯಾರಣ್ಯ–ಕಮಲಾಪುರದಲ್ಲಿನ ಶ್ರೀ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ಪದವಿ ಮಹಾವಿದ್ಯಾಲಯ ಹಾಗೂ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಆಶ್ರಯದಲ್ಲಿ 15ನೇ ಅಂತರ್‌ಕಾಲೇಜು ಪುರುಷ–ಮಹಿಳಾ ವಾಲಿಬಾಲ್ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯ ತಂಡದ ಆಯ್ಕೆ 2025 ಕಾರ್ಯಕ್ರಮ ನಡೆಯಿತು. ಕಳೆದ ದಶಕದಿಂದ ಈ ಮಹಾವಿದ್ಯಾಲಯವೇ ವಾಲಿಬಾಲ್ ಟೂರ್ನಮೆಂಟ್‌ಗೆ ಆತಿಥ್ಯ ನೀಡುತ್ತಿದೆ ಎಂದು ದೈಹಿಕ ನಿರ್ದೇಶಕ ಪ್ರವೀಣ್ ಸಿಂಗ್ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹೊಸಪೇಟೆ ಡಿವೈಎಸ್ಪಿ ಮಂಜುನಾಥ್ ಅವರು ಮಾತನಾಡಿ,“ವಾಲಿಬಾಲ್ ಆಟವನ್ನು ಕ್ರೀಡಾ ಮನೋಭಾವದಿಂದ ಆಡುವುದು ಮುಖ್ಯ. ರಾಜ್ಯ–ರಾಷ್ಟ್ರ ಮಟ್ಟ ತಲುಪುವ ಗುರಿ ಇಟ್ಟು ಆಟಗಾರರು ತಮದ ಸಾಮರ್ಥ್ಯ ತೋರಬೇಕು,” ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಬಸವರಾಜ್ ಮಾತನಾಡಿ , “ಕ್ರೀಡೆ ವಿದ್ಯಾರ್ಥಿಗಳ ಚೇತನದ ಬೆಳವಣಿಗೆಗೆ ನೆರವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು,” ಎಂದು ಹೇಳಿದರು.
ಟೂರ್ನಮೆಂಟ್‌ನಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪುರುಷರ 19 ತಂಡಗಳು, ಮಹಿಳೆಯರ 7 ತಂಡಗಳು ಪಾಲ್ಗೊಂಡಿದ್ದವು.
ಮಹಿಳೆಯರ ವಿಭಾಗದ ಫಲಿತಾಂಶ: ಪ್ರಥಮ ಸ್ಥಾನ: ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ, ದ್ವಿತೀಯ ಸ್ಥಾನ: ಮಾತಾ ಪದವಿ ಮಹಾವಿದ್ಯಾಲಯ ,ತೃತೀಯ ಸ್ಥಾನ: ವೀರೇಶ್ವ ಮಹಾವಿದ್ಯಾಲಯ, ಬಳ್ಳಾರಿ ಗೆ ಲಭಿಸಿತು.
ಮಹಿಳೆಯರ ವಿಭಾಗದ ಫಲಿತಾಂಶ: ಪ್ರಥಮ ಸ್ಥಾನ: ವಿಜಯನಗರ ಮಹಾವಿದ್ಯಾಲಯ, ಹೊಸಪೇಟೆ, ದ್ವಿತೀಯ ಸ್ಥಾನ: ಮಾತಾ ಪದವಿ ಮಹಾವಿದ್ಯಾಲಯ ,ತೃತೀಯ ಸ್ಥಾನ: ವೀರೇಶ್ವ ಮಹಾವಿದ್ಯಾಲಯ, ಬಳ್ಳಾರಿ ಗೆ ಲಭಿಸಿತು.

