CRIME NEWS :”ಕೊಪ್ಪಳ| ಪ್ಲೈ ಓವರ್‌  ಕೆಳಗೆ ಅಪರಿಚಿತ ವ್ಯಕ್ತಿ ಮೃತ: ಪ್ರಕರಣ ದಾಖಲು”

By admin

 “ಕೊಪ್ಪಳ| ಪ್ಲೈ ಓವರ್‌  ಕೆಳಗೆ ಅಪರಿಚಿತ ವ್ಯಕ್ತಿ ಮೃತ: ಪ್ರಕರಣ ದಾಖಲು”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ,ಕೊಪ್ಪಳ:

ನಗರದ ರೈಲ್ವೆ ನಿಲ್ದಾಣದ ಮಾರ್ಗದಲ್ಲಿರುವ ಪ್ಲೇಒರ್ ಕೆಳಭಾಗದಲ್ಲಿ ಸುಮಾರು 35–40 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಯಾವುದೇ ಕಾಯಿಲೆಯಿಂದ ಸಾವನ್ನಪ್ಪಿರುವ ಸಂಶಯ ವ್ಯಕ್ತವಾಗಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. 24/2025, ಕಲಂ 194 ಬಿ.ಎನ್.ಎಸ್.ಎಸ್. ಅಡಿ ಪ್ರಕರಣ ದಾಖಲಾಗಿದೆ.

ಮೃತನ ಚಹರೆ: ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲು. ನೀಲಿ ಬಣ್ಣದ ಅಂಗಿ ಹಾಗೂ ಕಡು ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ.

ಈ ವಿವರಣೆಗಳಿಗೆ ಹೊಂದುವಂತೆ ಯಾರಾದರೂ ತಮ್ಮ ಸಂಬಂಧಿಕರು ಕಾಣೆಯಾಗಿರುವಲ್ಲಿ, ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು. ಮಾಹಿತಿ ನೀಡಲು ಕೆಳಗಿನ ಸಂಖ್ಯೆಗಳು ಲಭ್ಯ: ಕೊಪ್ಪಳ ನಗರ ಪೊಲೀಸ್ ಠಾಣೆ: 08539–220333, ನಗರ ಪೋಲಿಸ್ ಇನ್ಸ್‌ಪೆಕ್ಟರ್: 94808 03745, ಪಿ.ಎಸ್.ಐ (ಕಾ & ಸು): 96115 89433.

ಈ ಕುರಿತು ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯಲ್ಲಿ ನಿರತರಾಗಿದ್ದಾರೆ.