LOCAL NEWS :”ಕೊಪ್ಪಳ|ಉಪನ್ಯಾಸಕಿ ಬಸ್ಸಮ್ಮಗೆ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರದಾನ.!”

By admin

LOCAL NEWS :”ಕೊಪ್ಪಳ|ಉಪನ್ಯಾಸಕಿ ಬಸ್ಸಮ್ಮ ಅವರಿಗೆ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ಪ್ರದಾನ.!”

ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ಆಂಧ್ರ  ಪ್ರದೇಶದ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾನಿಲಯವು ಉಪನ್ಯಾಸಕಿ ಬಸ್ಸಮ್ಮ ಅವರಿಗೆ ಡಾಕ್ಟರೇಟ್ (ಪಿ.ಎಚ್.ಡಿ) ಪದವಿ ಪ್ರದಾನಿಸಿದೆ. ಬಸಮ್ಮ ಅವರು ಗಂಗಾವತಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಅಬ್ದುಲ್ ರೆಹಮಾನ್ ಅವರ ಮಾರ್ಗದರ್ಶನದಲ್ಲಿ “Economic Empowerment of Women through Micro-Finance: A Case Study with Reference to Koppal District” ಎಂಬ ಮಹಾ ಪ್ರಬಂಧವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದರು.

ಪ್ರಸ್ತುತ ಡಾ. ಬಸ್ಸಮ್ಮ ಅವರು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಅವರ ಈ ಸಾಧನೆಗಾಗಿ ಡಾ. ಬಸ್ಸಮ್ಮ ಅವರಿಗೆ ಕುಟುಂಬದವರು, ಸ್ನೇಹಿತರು, ಕಾಲೇಜಿನ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.