🛑ALERT NEWS :”ಚಿಕ್ಕಮಗಳೂರು| 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ: ವಾರದ ಹಿಂದೆಯೇ ಬಾಲಕಿ ಬಲಿ! ಭಯದ ವಾತಾವರಣದಲ್ಲಿ ಸಾರ್ವಜನಿಕರು.! ಅರಣ್ಯ ಇಲಾಖೆ ಕ್ರಮ ಯಾವಾಗ?

By admin

🛑 ALERT NEWS :“ಚಿಕ್ಕಮಗಳೂರು| 11 ವರ್ಷದ ಬಾಲಕನ ಮೇಲೆ ಚಿರತೆ ದಾಳಿ: ವಾರದ ಹಿಂದೆಯೇ ಬಾಲಕಿ ಬಲಿ! ಭಯದ ವಾತಾವರಣದಲ್ಲಿ ಸಾರ್ವಜನಿಕರು.! ಅರಣ್ಯ ಇಲಾಖೆ ಕ್ರಮ ಯಾವಾಗ?

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌:

ಜಿಲ್ಲೆಯಲ್ಲಿ ಮತ್ತೊಮ್ಮೆ ಚಿರತೆ ದಾಳಿ ಪ್ರಕರಣ ವರದಿಯಾಗಿದ್ದು, 11 ವರ್ಷದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಜಿಲ್ಲೆಯಲ್ಲೇ ವಾರದ ಹಿಂದಷ್ಟೇ 5 ವರ್ಷದ ಬಾಲಕಿಯೊಬ್ಬಳು ಚಿರತೆ ದಾಳಿಗೆ ಬಲಿಯಾಗಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ.

ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೃದಯ್ (11) ಎಂಬ ಬಾಲಕ ಮನೆಯ ಬಳಿ ನಿಂತಿರುವ ವೇಳೆ ಹೊಂಚು ಹಾಕಿ ಕುಳಿತಿದ್ದ ಚಿರತೆ ಏಕಾಏಕಿ ದಾಳಿ ನಡೆಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ತಕ್ಷಣವೇ ಬಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆ ಲಿಂಗದಹಳ್ಳಿ ಅರಣ್ಯ ವಿಭಾಗ ಹಾಗೂ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕಳೆದ ವಾರ ನಡೆದ ದಾಳಿಯ ನಂತರ ಇದೇ ರೀತಿ ಮತ್ತೆ ಬಾಲಕರನ್ನೇ ಗುರಿಯಾಗಿಸುವ ಘಟನೆಗಳು ಪೋಷಕರಲ್ಲಿ ಆತಂಕ ಹೆಚ್ಚಿಸಿವೆ. ಸಾರ್ವಜನಿಕರ ಅಪಾಯದ ಹಿನ್ನೆಲೆಯಲ್ಲಿ ಚಿರತೆಯನ್ನು ಪತ್ತೆಹಚ್ಚಿ ಸ್ಥಳಾಂತರಿಸುವ ಕುರಿತು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.