🚨VIRAL NEWS :”ಓಡಿಸಾ|ಬಸ್‌ನಲ್ಲಿ ಹೃದಯಾಘಾತದಿಂದ ಪತಿ ಸಾವು: ನಡುರಸ್ತೆಯಲ್ಲಿ ಶವ ಇಳಿಸಿ ಓಡಿದ ಬಸ್ ಸಿಬ್ಬಂದಿ — ಕಣ್ಣೀರಲ್ಲಿ ಕುಸಿದ ಪತ್ನಿ!”

By admin

🚨VIRAL NEWS :“ಓಡಿಸಾ|ಬಸ್‌ನಲ್ಲಿ ಹೃದಯಾಘಾತದಿಂದ ಪತಿ ಸಾವು: ನಡುರಸ್ತೆಯಲ್ಲಿ ಶವ ಇಳಿಸಿ ಓಡಿದ ಬಸ್ ಸಿಬ್ಬಂದಿ — ಕಣ್ಣೀರಲ್ಲಿ ಕುಸಿದ ಪತ್ನಿ!”

Contents
🚨VIRAL NEWS :“ಓಡಿಸಾ|ಬಸ್‌ನಲ್ಲಿ ಹೃದಯಾಘಾತದಿಂದ ಪತಿ ಸಾವು: ನಡುರಸ್ತೆಯಲ್ಲಿ ಶವ ಇಳಿಸಿ ಓಡಿದ ಬಸ್ ಸಿಬ್ಬಂದಿ — ಕಣ್ಣೀರಲ್ಲಿ ಕುಸಿದ ಪತ್ನಿ!”• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :ಕೇಂದ್ರಪಾರ (ಒಡಿಶಾ): ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆಯೇ, ಬಸ್ ಸಿಬ್ಬಂದಿ ಮೃತದೇಹ ಹಾಗೂ ಅವರ ಪತ್ನಿಯನ್ನು ರಸ್ತೆ ಮಧ್ಯೆಯೇ ಇಳಿಸಿ ಬಸ್ ಮುಂದುವರಿಸಿರುವ ಅಮಾನವೀಯ ಘಟನೆ ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ.ಗುರುವಾರ ಚಾಂಡಿಖೋಲ್–ಪರಾದ್ವೀಪ್ ರಾಷ್ಟ್ರೀಯ ಹೆದ್ದಾರಿ–53ರ ಬಳಿ ಈ ಘಟನೆ ಸಂಭವಿಸಿದೆ. ಬಾಘ್ರೈ ಮರ್ಧಿ ಎಂಬವರು ತಮ್ಮ ಪತ್ನಿ ದುಲಾರಿ ಮರ್ಧಿ ಜೊತೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಮಧ್ಯೆ ಬಾಘ್ರೈಗೆ ತೀವ್ರ ಹೃದಯಾಘಾತ ಉಂಟಾಗಿ ಸ್ಥಳದಲ್ಲೇ ಮೃತಪಟ್ಟರು.ಘಟನೆ ಬಳಿಕ ಯಾವುದೇ ಸಹಾಯ ಮಾಡದೇ, ಮೃತದೇಹ ಮತ್ತು ಮಹಿಳೆಯನ್ನು ನಡುರಸ್ತೆಯಲ್ಲೇ ಇಳಿಸಿ ಬಸ್ ಮುಂದುವರಿದಿದೆ. ಪತಿಯ ಮೃತದೇಹದ ಮುಂದೆ ಕುಳಿತಿದ್ದ ಮಹಿಳೆ ಅಳುತ್ತಾ ನೆರವಿಗಾಗಿ ಮನವಿ ಮಾಡುತ್ತಿದ್ದರೂ, ಯಾರೂ ನಿಲ್ಲದೇ ನಿರ್ಲಕ್ಷಿಸಿದ್ದಾರೆ.ಇದನ್ನು ಗಮನಿಸಿದ ಸನಾತನ್ ಮುದುಲಿ ಎಂಬ ವ್ಯಕ್ತಿ ಮುಂದೆ ಬಂದು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಐಐಸಿಗೆ ಮಾಹಿತಿ ನೀಡಿದರೂ ಸ್ಪಂದನೆ ಲಭ್ಯವಾಗದ ಕಾರಣ, ಖಾಸಗಿ ಆಂಬ್ಯುಲೆನ್ಸ್‌ ಮೂಲಕ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಈ ಘಟನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬಸ್ ಸಿಬ್ಬಂದಿಯ ಅಮಾನವೀಯ ವರ್ತನೆಗೆ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

• ಸೆಕ್ಯುಲರ್‌ ವಾಯ್ಸ್‌ ಡೆಸ್ಕ್‌ ನ್ಯೂಸ್‌ :

ಕೇಂದ್ರಪಾರ (ಒಡಿಶಾ): ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆಯೇ, ಬಸ್ ಸಿಬ್ಬಂದಿ ಮೃತದೇಹ ಹಾಗೂ ಅವರ ಪತ್ನಿಯನ್ನು ರಸ್ತೆ ಮಧ್ಯೆಯೇ ಇಳಿಸಿ ಬಸ್ ಮುಂದುವರಿಸಿರುವ ಅಮಾನವೀಯ ಘಟನೆ ಕೇಂದ್ರಪಾರ ಜಿಲ್ಲೆಯಲ್ಲಿ ನಡೆದಿದೆ.

ಗುರುವಾರ ಚಾಂಡಿಖೋಲ್–ಪರಾದ್ವೀಪ್ ರಾಷ್ಟ್ರೀಯ ಹೆದ್ದಾರಿ–53ರ ಬಳಿ ಈ ಘಟನೆ ಸಂಭವಿಸಿದೆ. ಬಾಘ್ರೈ ಮರ್ಧಿ ಎಂಬವರು ತಮ್ಮ ಪತ್ನಿ ದುಲಾರಿ ಮರ್ಧಿ ಜೊತೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ಮಧ್ಯೆ ಬಾಘ್ರೈಗೆ ತೀವ್ರ ಹೃದಯಾಘಾತ ಉಂಟಾಗಿ ಸ್ಥಳದಲ್ಲೇ ಮೃತಪಟ್ಟರು.

ಘಟನೆ ಬಳಿಕ ಯಾವುದೇ ಸಹಾಯ ಮಾಡದೇ, ಮೃತದೇಹ ಮತ್ತು ಮಹಿಳೆಯನ್ನು ನಡುರಸ್ತೆಯಲ್ಲೇ ಇಳಿಸಿ ಬಸ್ ಮುಂದುವರಿದಿದೆ. ಪತಿಯ ಮೃತದೇಹದ ಮುಂದೆ ಕುಳಿತಿದ್ದ ಮಹಿಳೆ ಅಳುತ್ತಾ ನೆರವಿಗಾಗಿ ಮನವಿ ಮಾಡುತ್ತಿದ್ದರೂ, ಯಾರೂ ನಿಲ್ಲದೇ ನಿರ್ಲಕ್ಷಿಸಿದ್ದಾರೆ.

ಇದನ್ನು ಗಮನಿಸಿದ ಸನಾತನ್ ಮುದುಲಿ ಎಂಬ ವ್ಯಕ್ತಿ ಮುಂದೆ ಬಂದು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಐಐಸಿಗೆ ಮಾಹಿತಿ ನೀಡಿದರೂ ಸ್ಪಂದನೆ ಲಭ್ಯವಾಗದ ಕಾರಣ, ಖಾಸಗಿ ಆಂಬ್ಯುಲೆನ್ಸ್‌ ಮೂಲಕ ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಘಟನೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬಸ್ ಸಿಬ್ಬಂದಿಯ ಅಮಾನವೀಯ ವರ್ತನೆಗೆ ವಿರುದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.