🟢 SPECIAL STORY :” ಮೈ ಕೊರವ ಚಳಿಗೆ ನಡುಗಿದ ಕಲ್ಯಾಣ ಕರ್ನಾಟಕ : ಬೀದರ್‌ನಲ್ಲಿ 7.4 ಡಿಗ್ರಿ ಸೆಲ್ಸಿಯಸ್! ಆರೆಂಜ್ ಅಲರ್ಟ್: ಬೈಕ್ ಸವಾರರು, ಕಾರ್ಮಿಕರು, ಮಕ್ಕಳು ಮತ್ತು ವಯೋವೃದ್ದರು ತತ್ತರ.! ಚಳಿಯ ರಕ್ಷಣೆಗೆ ವೈದ್ಯರ ಸಲಹೆಗಳೇನು? ಇಲ್ಲಿದೆ ನೋಡಿ ಡೀಟೆಲ್ಸ್..👇
(ಬೀದರನಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪು ಧರಿಸಿ ವಾಕಿಂಗ್ ಮಾಡುತ್ತಿರುವ ದೃಶ್ಯ ಕಂಡು ಬಂತು.)
• ಸೆಕ್ಯುಲರ್ ವಾಯ್ಸ್ ನ್ಯೂಸ್ -ವಿಶೇಷ ಸ್ಟೋರಿ:
▪️ಭೀಮಾಶಂಕರ ಪಾಣೇಗಾಂವ.
ಕಲ್ಯಾಣ ಕರ್ನಾಟಕದ ಹಲವೆಡೆ ತೀವ್ರ ಚಳಿ ವ್ಯಾಪಿಸಿದ್ದು, ಸಾರ್ವಜನಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹವಾಮಾನ ಇಲಾಖೆ ವರದಿ ಪ್ರಕಾರ, ಮುಂದಿನ 3–4 ದಿನಗಳಲ್ಲಿ ತಾಪಮಾನ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ. ಬೀದರ್ ಜಿಲ್ಲೆಯಲ್ಲಿ ಕನಿಷ್ಠ 7.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಲಬುರಗಿಯಲ್ಲಿ 10.5, ಯಾದಗಿರಿಯಲ್ಲಿ 11.2, ರಾಯಚೂರಿನಲ್ಲಿ 12, ಕೊಪ್ಪಳದಲ್ಲಿ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ವಿಜಯನಗರದಲ್ಲಿ 14.2 ಹಾಗೂ ಬಳ್ಳಾರಿಯಲ್ಲಿ 14.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ಋತುವಿನ ಅತ್ಯಂತ ಕಡಿಮೆ ತಾಪಮಾನ ಎಂದಾಗಿ ದಾಖಲಾಗಿದೆ.
(ಕೊಪ್ಪಳದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿಯ ಶಾಖಕ್ಕೆ ಮೈ ಕಾಯಿಸಿಕೊಳ್ಳುತ್ತಿರುವ ಮಹಿಳೆಯರು)
ಗ್ರಾಮೀಣ ಪ್ರದೇಶಗಳಲ್ಲಿ ಜನರು ಚಳಿಯಿಂದ ರಕ್ಷಣೆ ಪಡೆಯಲು ಉರಿ ಹಚ್ಚಿಕೊಂಡು ಮೈ ಕಾಯಿಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ತಿಪ್ಪರಸನಾಳ ಗ್ರಾಮದಲ್ಲಿ ಬುಧವಾರ ಈ ದೃಶ್ಯಗಳು ಗಮನ ಸೆಳೆದವು. ಬೆಳಗಿನ ಜಾವ ಜನರು ಅಗತ್ಯವಿದ್ದರೆ ಮಾತ್ರ ಹೊರಹೊಮ್ಮುತ್ತಿದ್ದಾರೆ. ಚಳಿಯ ತೀವ್ರತೆ ಮಕ್ಕಳ, ವಿದ್ಯಾರ್ಥಿಗಳ, ರೈತರ ಹಾಗೂ ಪ್ರತಿದಿನ ಬೈಕ್‌ನಲ್ಲಿ ಸಂಚರಿಸುವ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
(ಕಲಬುರಗಿಯ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಮಂಜು ಆವರಿಸಿರುವ ದೃಶ್ಯ ಕಂಡು ಬಂತು.)
ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಚಳಿಗಾಳಿ ಹೆಚ್ಚಾಗುವ ಸಾಧ್ಯತೆ ಇದ್ದು, ಬೆಳಗಿನ ಜಾವ ದಟ್ಟ ಮಂಜು ಕಾಣಬಹುದು ಎಂದು ಸೂಚಿಸಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಲಾಗಿದೆ. ಅಧಿಕಾರಿಗಳು ರಸ್ತೆಯಲ್ಲಿನ ವಾಹನ ಸವಾರರ ಎಚ್ಚರಿಕೆಯನ್ನು ಹೆಚ್ಚಿಸುವ ಸಲಹೆ ನೀಡುತ್ತಿದ್ದಾರೆ.
(ಚಳಿಗೆ ಹೆದರಿ ಶರೀರ ಕಾಪಾಡಿಕೊಳ್ಳಲು ಬೆಚ್ಚಗಿನ ಉಡುಪು ಖರೀದಿಗಾಗಿ ಮೋರೆ ಹೋದ ಜನ)
ಚಳಿಯ ತೀವ್ರತೆಯಿಂದ ಪ್ರದೇಶದ ಜನರು, ವಿಶೇಷವಾಗಿ ಗ್ರಾಮೀಣ ಭಾಗದವರು, ಹೊರಗೆ ಹೊರಬರುವುದು ಕಡಿಮೆ ಮಾಡುತ್ತಿದ್ದಾರೆ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಉದ್ಯೋಗಸ್ಥರು ಎಲ್ಲಾ ರೀತಿಯ ಬೆಚ್ಚಗಿನ ಉಡುಪು ಧರಿಸುತ್ತಿದ್ದಾರೆ. ಬೆಳಗಿನ ಜಾವ ದಟ್ಟ ಮಂಜಿನ ಪರಿಣಾಮದಿಂದ ರಸ್ತೆಯಲ್ಲಿ ದೃಶ್ಯತೆ ಕಡಿಮೆ, ಅಪಘಾತದ ಅಪಾಯ ಹೆಚ್ಚಾಗಿದೆ.
——————————————————-
🩺 ವೈದ್ಯರ ಸಲಹೆ :👇
“ಚಳಿಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರ ಸೇವನೆಯಿಂದ ವೈರಲ್ ಇನ್ಫೆಕ್ಷನ್, ಅಸ್ತಮಾ, ಶ್ವಾಸಕೋಶ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ಅದನ್ನು ತ್ಯಜಿಸಿದರೆ ಒಳ್ಳೆಯದ್ದು. ನಿರ್ಲಕ್ಷಿಸಿದರೆ ,ಹೃದಯ ಸಂಬಂಧಿ ತೊಂದರೆಗಳೂ ಸಂಭವಿಸಬಹುದು.
ಈ ಸಂದರ್ಭದಲ್ಲಿ ಗಂಟಲು ಸೋಂಕು, ಚರ್ಮ ಸಮಸ್ಯೆಗಳು ಹಾಗೂ ಮನೋಸ್ಥಿತಿಯಲ್ಲಿ ಬದಲಾವಣೆಗಳು ಕಾಣಿಸಬಹುದು. ಮಕ್ಕಳು ಮತ್ತು ವಯೋವೃದ್ಧರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ದಿನನಿತ್ಯ ಬೆಚ್ಚಗಿನ ನೀರು ಕುಡಿಯಬೇಕು, ವಿಟಮಿನ್–ಸಿ ಸಮೃದ್ಧವುಳ್ಳ ಆಹಾರ ಸೇವಿಸಬೇಕು. ಬಿಪಿ ಮತ್ತು ಶುಗರ್ ಇರುವವರು ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು.ಜೊತೆಗೆ ಬೆಚ್ಚಗಿನ ಉಡುಪು ಧರಿಸಿಕೊಂಡು ಶರೀರ ಕಾಪಾಡಿಕೊಳ್ಳಬೇಕು”
▪️ ಡಾ.ಚಂದ್ರಕಲಾ, ಜನರಲ್ ಫಿಸಿಷಿಯನ್, ಆಶ್ರಯ ಆಸ್ಪತ್ರೆ, ಕಲಬುರಗಿ,
————————————————————-
Contents
🟢 SPECIAL STORY :” ಮೈ ಕೊರವ ಚಳಿಗೆ ನಡುಗಿದ ಕಲ್ಯಾಣ ಕರ್ನಾಟಕ : ಬೀದರ್‌ನಲ್ಲಿ 7.4 ಡಿಗ್ರಿ ಸೆಲ್ಸಿಯಸ್! ಆರೆಂಜ್ ಅಲರ್ಟ್: ಬೈಕ್ ಸವಾರರು, ಕಾರ್ಮಿಕರು, ಮಕ್ಕಳು ಮತ್ತು ವಯೋವೃದ್ದರು ತತ್ತರ.! ಚಳಿಯ ರಕ್ಷಣೆಗೆ ವೈದ್ಯರ ಸಲಹೆಗಳೇನು? ಇಲ್ಲಿದೆ ನೋಡಿ ಡೀಟೆಲ್ಸ್..👇(ಬೀದರನಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪು ಧರಿಸಿ ವಾಕಿಂಗ್ ಮಾಡುತ್ತಿರುವ ದೃಶ್ಯ ಕಂಡು ಬಂತು.)• ಸೆಕ್ಯುಲರ್ ವಾಯ್ಸ್ ನ್ಯೂಸ್ -ವಿಶೇಷ ಸ್ಟೋರಿ: ▪️ಭೀಮಾಶಂಕರ ಪಾಣೇಗಾಂವ.ಕಲ್ಯಾಣ ಕರ್ನಾಟಕದ ಹಲವೆಡೆ ತೀವ್ರ ಚಳಿ ವ್ಯಾಪಿಸಿದ್ದು, ಸಾರ್ವಜನಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹವಾಮಾನ ಇಲಾಖೆ ವರದಿ ಪ್ರಕಾರ, ಮುಂದಿನ 3–4 ದಿನಗಳಲ್ಲಿ ತಾಪಮಾನ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ. ಬೀದರ್ ಜಿಲ್ಲೆಯಲ್ಲಿ ಕನಿಷ್ಠ 7.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಲಬುರಗಿಯಲ್ಲಿ 10.5, ಯಾದಗಿರಿಯಲ್ಲಿ 11.2, ರಾಯಚೂರಿನಲ್ಲಿ 12, ಕೊಪ್ಪಳದಲ್ಲಿ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ವಿಜಯನಗರದಲ್ಲಿ 14.2 ಹಾಗೂ ಬಳ್ಳಾರಿಯಲ್ಲಿ 14.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಈ ಋತುವಿನ ಅತ್ಯಂತ ಕಡಿಮೆ ತಾಪಮಾನ ಎಂದಾಗಿ ದಾಖಲಾಗಿದೆ.(ಕೊಪ್ಪಳದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳಲು ಬೆಂಕಿಯ ಶಾಖಕ್ಕೆ ಮೈ ಕಾಯಿಸಿಕೊಳ್ಳುತ್ತಿರುವ ಮಹಿಳೆಯರು)ಗ್ರಾಮೀಣ ಪ್ರದೇಶಗಳಲ್ಲಿ ಜನರು ಚಳಿಯಿಂದ ರಕ್ಷಣೆ ಪಡೆಯಲು ಉರಿ ಹಚ್ಚಿಕೊಂಡು ಮೈ ಕಾಯಿಸಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ತಿಪ್ಪರಸನಾಳ ಗ್ರಾಮದಲ್ಲಿ ಬುಧವಾರ ಈ ದೃಶ್ಯಗಳು ಗಮನ ಸೆಳೆದವು. ಬೆಳಗಿನ ಜಾವ ಜನರು ಅಗತ್ಯವಿದ್ದರೆ ಮಾತ್ರ ಹೊರಹೊಮ್ಮುತ್ತಿದ್ದಾರೆ. ಚಳಿಯ ತೀವ್ರತೆ ಮಕ್ಕಳ, ವಿದ್ಯಾರ್ಥಿಗಳ, ರೈತರ ಹಾಗೂ ಪ್ರತಿದಿನ ಬೈಕ್‌ನಲ್ಲಿ ಸಂಚರಿಸುವ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. (ಕಲಬುರಗಿಯ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವ ಮಂಜು ಆವರಿಸಿರುವ ದೃಶ್ಯ ಕಂಡು ಬಂತು.)ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಚಳಿಗಾಳಿ ಹೆಚ್ಚಾಗುವ ಸಾಧ್ಯತೆ ಇದ್ದು, ಬೆಳಗಿನ ಜಾವ ದಟ್ಟ ಮಂಜು ಕಾಣಬಹುದು ಎಂದು ಸೂಚಿಸಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಲಾಗಿದೆ. ಅಧಿಕಾರಿಗಳು ರಸ್ತೆಯಲ್ಲಿನ ವಾಹನ ಸವಾರರ ಎಚ್ಚರಿಕೆಯನ್ನು ಹೆಚ್ಚಿಸುವ ಸಲಹೆ ನೀಡುತ್ತಿದ್ದಾರೆ.(ಚಳಿಗೆ ಹೆದರಿ ಶರೀರ ಕಾಪಾಡಿಕೊಳ್ಳಲು ಬೆಚ್ಚಗಿನ ಉಡುಪು ಖರೀದಿಗಾಗಿ ಮೋರೆ ಹೋದ ಜನ)ಚಳಿಯ ತೀವ್ರತೆಯಿಂದ ಪ್ರದೇಶದ ಜನರು, ವಿಶೇಷವಾಗಿ ಗ್ರಾಮೀಣ ಭಾಗದವರು, ಹೊರಗೆ ಹೊರಬರುವುದು ಕಡಿಮೆ ಮಾಡುತ್ತಿದ್ದಾರೆ. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಉದ್ಯೋಗಸ್ಥರು ಎಲ್ಲಾ ರೀತಿಯ ಬೆಚ್ಚಗಿನ ಉಡುಪು ಧರಿಸುತ್ತಿದ್ದಾರೆ. ಬೆಳಗಿನ ಜಾವ ದಟ್ಟ ಮಂಜಿನ ಪರಿಣಾಮದಿಂದ ರಸ್ತೆಯಲ್ಲಿ ದೃಶ್ಯತೆ ಕಡಿಮೆ, ಅಪಘಾತದ ಅಪಾಯ ಹೆಚ್ಚಾಗಿದೆ.——————————————————-🩺 ವೈದ್ಯರ ಸಲಹೆ :👇 “ಚಳಿಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರ ಸೇವನೆಯಿಂದ ವೈರಲ್ ಇನ್ಫೆಕ್ಷನ್, ಅಸ್ತಮಾ, ಶ್ವಾಸಕೋಶ ಸಮಸ್ಯೆಗಳು ಹೆಚ್ಚಾಗುತ್ತವೆ. ಹೀಗಾಗಿ ಅದನ್ನು ತ್ಯಜಿಸಿದರೆ ಒಳ್ಳೆಯದ್ದು. ನಿರ್ಲಕ್ಷಿಸಿದರೆ ,ಹೃದಯ ಸಂಬಂಧಿ ತೊಂದರೆಗಳೂ ಸಂಭವಿಸಬಹುದು.ಈ ಸಂದರ್ಭದಲ್ಲಿ ಗಂಟಲು ಸೋಂಕು, ಚರ್ಮ ಸಮಸ್ಯೆಗಳು ಹಾಗೂ ಮನೋಸ್ಥಿತಿಯಲ್ಲಿ ಬದಲಾವಣೆಗಳು ಕಾಣಿಸಬಹುದು. ಮಕ್ಕಳು ಮತ್ತು ವಯೋವೃದ್ಧರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ದಿನನಿತ್ಯ ಬೆಚ್ಚಗಿನ ನೀರು ಕುಡಿಯಬೇಕು, ವಿಟಮಿನ್–ಸಿ ಸಮೃದ್ಧವುಳ್ಳ ಆಹಾರ ಸೇವಿಸಬೇಕು. ಬಿಪಿ ಮತ್ತು ಶುಗರ್ ಇರುವವರು ನಿಯಮಿತ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು.ಜೊತೆಗೆ ಬೆಚ್ಚಗಿನ ಉಡುಪು ಧರಿಸಿಕೊಂಡು ಶರೀರ ಕಾಪಾಡಿಕೊಳ್ಳಬೇಕು” ▪️ ಡಾ.ಚಂದ್ರಕಲಾ, ಜನರಲ್ ಫಿಸಿಷಿಯನ್, ಆಶ್ರಯ ಆಸ್ಪತ್ರೆ, ಕಲಬುರಗಿ, 🗣️ ಸುಭಾಸಸಾಬ್ ನೀರಲಗಿ , ಉದ್ಯೋಗಿ“ಇತ್ತೀಚಿನ ದಿನಗಳಲ್ಲಿ ಚಳಿ ತುಂಬಾ ಹೆಚ್ಚಾಗಿದೆ. ದಾರಿಯಲ್ಲೇ ನಡುಗುತ್ತಾ ಬೈಕ್ ತೆಗೆದುಕೊಂಡು ಹೋಗಬೇಕಾಗಿದೆ. ಮಂಜು ದಟ್ಟವಾಗಿದೆ. ರಸ್ತೆ ಸ್ಪಷ್ಟವಾಗಿ ಕಾಣುವುದಿಲ್ಲ. ಎಚ್ಚರಿಕೆಯಿಂದ ಸಾಗಬೇಕಿದೆ.,——————————————————


