⭐ LOCAL EXPRESS :“ಕೊಪ್ಪಳ |ಪ್ರಜಾಪರ್ವ ಪತ್ರಿಕೆ ಸಂಪಾದಕ ಎಂ.ಜೆ. ಶ್ರೀನಿವಾಸ ಅವರಿಗೆ “ಸಂಪಾದಕ ರತ್ನ” ದತ್ತಿನಿಧಿ ರಾಜ್ಯ ಪ್ರಶಸ್ತಿ : ಪತ್ರಕರ್ತರಿಂದ ಶುಭ ಹಾರೈಕೆಗಳು.!

Contents
⭐ LOCAL EXPRESS :“ಕೊಪ್ಪಳ |ಪ್ರಜಾಪರ್ವ ಪತ್ರಿಕೆ ಸಂಪಾದಕ ಎಂ.ಜೆ. ಶ್ರೀನಿವಾಸ ಅವರಿಗೆ “ಸಂಪಾದಕ ರತ್ನ” ದತ್ತಿನಿಧಿ ರಾಜ್ಯ ಪ್ರಶಸ್ತಿ : ಪತ್ರಕರ್ತರಿಂದ ಶುಭ ಹಾರೈಕೆಗಳು.!• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ : ಜಿಲ್ಲೆಯ ಮುಂಚೂಣಿ ಕನ್ನಡ ದಿನಪತ್ರಿಕೆ ಪ್ರಜಾಪರ್ವ ಸಂಪಾದಕ ಎಂ.ಜೆ. ಶ್ರೀನಿವಾಸ್ ಅವರನ್ನು 2024-25ನೇ ಸಾಲಿನ ಸಂಪಾದಕ ರತ್ನ ದತ್ತಿನಿಧಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾನವೀಯ ಮೌಲ್ಯ ಮತ್ತು ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಗುವ ವರದಿಗಳಿಗಾಗಿ ಈ ಗೌರವ ನೀಡಲಾಗಿದೆ.ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ಬೆಂಗಳೂರಿನಲ್ಲಿ ಇದೇ ಡಿ. 21ರಂದು ನಡೆಯುವ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಸಂಪಾದಕರ ರತ್ನ ಪ್ರಶಸ್ತಿ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ತುಮಕೂರು ಜಿಲ್ಲಾ ಪತ್ರಕರ್ತರ ಸಂಘದಿಂದ ತಿಳಿಸಿದ್ದಾರೆ.• ಪತ್ರಕರ್ತರಿಂದ ಶುಭ ಹಾರೈಕೆಗಳು ; ಪ್ರಜಾಪರ್ವ ದಿನಪತ್ರಿಕೆಯ ನವೀನ ಸುದ್ದಿಗಳು ಮತ್ತು ಸಾಮಾಜಿಕ ವರದಿಗಳಿಂದ ಹೆಸರು ಮಾಡಿದ ಶ್ರೀನಿವಾಸ್ ಅವರಿಗೆ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ ಮಠದ, ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ದೊಡ್ಮನಿ, ಸಹ ಕಾರ್ಯದರ್ಶಿ ವೀರಯ್ಯ ಹಿರೇಮಠ, ಕುಕನೂರು ತಾಲೂಕ ಘಟಕದ ಅಧ್ಯಕ್ಷ ಚಂದ್ರು ಭಾನಾಪುರ, ಕುಕನೂರ ತಾಲ್ಲೂಕು ಗೌರವಾಧ್ಯಕ್ಷ ಮಹೇಶ್ ಕಲ್ಮಠ ಮತ್ತು ಸಂಘದ ಎಲ್ಲಾ ಸದಸ್ಯರು ಎಂ.ಜೆ. ಶ್ರೀನಿವಾಸ ಅವರನ್ನು ಹೃತ್ಪೂರ್ವಕ ಅಭಿನಂದಿಸಿ, ಅವರ ಸಾಮಾಜಿಕ ಮತ್ತು ಜನಪ್ರಿಯ ವರದಿ ಕಾರ್ಯಗಳು, ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಶುಭಹಾರೈಸಿದ್ದಾರೆ.
