🟢 LOCAL EXPRESS :” ಕೆಂಭಾವಿ|ಅಂಜುಮನ್-ಏ-ಖಜಾಯತ್: ರಾಜ್ಯಾಧ್ಯಕ್ಷರಾಗಿ ಖಾಜಿ ಮೊಹಮ್ಮದ್ ಆದಮ್ ಫಾರೂಕಿ ಅವಿರೋಧ ಆಯ್ಕೆ”

By admin

LOCAL EXPRESS :” ಕೆಂಭಾವಿ|ಅಂಜುಮನ್-ಏ-ಖಜಾಯತ್: ರಾಜ್ಯಾಧ್ಯಕ್ಷರಾಗಿ ಖಾಜಿ ಮೊಹಮ್ಮದ್ ಆದಮ್ ಫಾರೂಕಿ ಅವಿರೋಧ ಆಯ್ಕೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೆಂಭಾವಿ :

ಕರ್ನಾಟಕದ ಅಂಜುಮನ್-ಏ-ಖಜಾಯತ್ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಕಲಬುರ್ಗಿಯ ಅಂಜುಮನ್ ಕಾರ್ಯಾಲಯದಲ್ಲಿ ಜರುಗಿತು.

ಗೌರವ ಅಧ್ಯಕ್ಷ ಖಾಜಿ ಮೊಹಮ್ಮದ್ ಹಮೀದ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೆಂಭಾವಿ ಮತ್ತು ಹುಣಸಗಿಯ ಸದರ್ ಖಾಜಿ ಖಾಜಿ ಮೊಹಮ್ಮದ್ ಆದಮ್ ಫಾರೂಕಿ ಅವರನ್ನು ಸರ್ವಾನುಮತದಿಂದ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಇತರೆ ಪದಾಧಿಕಾರಿಗಳು:
ಉಪಾಧ್ಯಕ್ಷರು : ಖಾಜಿ ಮಿರ್ ಇಬ್ರಾಹಿಂ ಅಲಿ (ಗಂಗಾವತಿ), ಸಯ್ಯದ್ ಗೌಸುದ್ದಿನ್

ಕಾರ್ಯದರ್ಶಿ : ಹಮೀದ್ ಫೈಸಲ್ ಸಿದ್ದಿಕಿ (ಕಲಬುರ್ಗಿ)

ಜಂಟಿ ಕಾರ್ಯದರ್ಶಿ: ಮೌಲನಾ ಖಾಜಿ ಜಮೀರ್ ಅಹಮದ್ (ಮುದ್ಗಲ್)

ಖಜಾಂಚಿ: ಖಾಜಿ ಆಜಮ್ ಸಿದ್ದಿಕಿ (ಚಿತ್ತಾಪುರ)

ಜಂಟಿ ಖಜಾಂಚಿ: ಖಾಜಿ ಸಯ್ಯದ್ ಇಮ್ರಾನ್ (ಆಳಂದ್)

• ಕಾರ್ಯಕಾರಿ ಸಮಿತಿ ಸದಸ್ಯರು:
ಖಾಜಿ ರಿಯಾಜುದ್ದಿನ್ (ಮಸ್ಕಿ), ಖಾಜಿ ಮಸೂದ್ ಅಹಮದ್ (ಕಾಳಗಿ), ಖಾಜಿ ಅಹಮದ್ ಮೋಹಿದ್ದಿನ್ ಸಿದ್ದಿಕ್ (ಗುರ್ಮಿಟ್ಕಲ್), ಸಯ್ಯದ್ ಶಂಶಾಲಾಮ್ ಹುಸೈನಿ (ಕೊಂಗಂಡ), ಖಾಜಿ ಶಂಶುದ್ದಿನ್ (ಕೌತಾಲ್), ಖಾಜಿ ಸಯ್ಯದ್ ಜಾಫರ್ (ಗುರಗುಂಟಾ), ಖಾಜಿ ಮಲೀಕ್ (ಸಿಂಧನೂರು), ಖಾಜಿ ಅಬ್ದುಲ್ ಖಲೀಕ್ (ಉತ್ತಕೂರು), ಖಾಜಿ ಹಾಫಿಜ್ ಯುನೂಸ್ (ಲಿಂಗಸಗೂರು), ಖಾಜಿ ಮುಕ್ರಮ್ (ಗೋಗಿ), ಸಯ್ಯದ್ ಅಬುಲ್ ಹಸನ್ (ಕಂಪ್ಲಿ), ಖಾಜಿ ಆಸೀಫ್ ಜಿಲಾನಿ (ದೇವದುರ್ಗ), ಖಾಜಿ ಏಜಾಜುದ್ದಿನ್ (ತಾವರಗೇರಾ), ಖಾಜಿ ಆತಿಫ್ (ಚಿಂಚೋಳಿ) ಅವರು ಆಯ್ಕೆಯಾದರು.

ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಗಣ್ಯ ಖಾಜಿಯವರು ಉಪಸ್ಥಿತರಿದ್ದು, ನೂತನ ಸಮಿತಿಗೆ ಶುಭ ಹಾರೈಸಿದರು.