🔵SPECIAL REPORT : “ಭೀಮಾ ಕೋರೆಗಾಂವ್ ವಿಜಯೋತ್ಸವ : ದಲಿತ ಸ್ವಾಭಿಮಾನ ಮತ್ತು ಸಮಾನತೆಯ ಪ್ರತೀಕ! : ಅಸಮಾನತೆಯ ವಿರುದ್ಧ ಶೋಷಿತರ ಗೆಲುವು!

By admin

🔵SPECIAL REPORT : “ಭೀಮಾ ಕೋರೆಗಾಂವ್ ವಿಜಯೋತ್ಸವ : ದಲಿತ ಸ್ವಾಭಿಮಾನ ಮತ್ತು ಸಮಾನತೆಯ ಪ್ರತೀಕ!: ಅಸಮಾನತೆಯ ವಿರುದ್ಧ ಶೋಷಿತರ ಗೆಲುವು̤!

Contents
🔵SPECIAL REPORT : “ಭೀಮಾ ಕೋರೆಗಾಂವ್ ವಿಜಯೋತ್ಸವ : ದಲಿತ ಸ್ವಾಭಿಮಾನ ಮತ್ತು ಸಮಾನತೆಯ ಪ್ರತೀಕ!: ಅಸಮಾನತೆಯ ವಿರುದ್ಧ ಶೋಷಿತರ ಗೆಲುವು̤!• ಸೆಕ್ಯುಲರ್‌ ವಾಯ್ಸ್‌  ಡೆಸ್ಕ್‌ ವಿಶೇಷ ವರದಿ :  ಭೀಮಾ ಕೋರೆಗಾಂವ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಕೇವಲ ಒಂದು ಸೈನಿಕ ಸಂಘರ್ಷವಲ್ಲ; ಅದು ದಲಿತ ಸಮುದಾಯದ ಆತ್ಮಗೌರವ, ಪ್ರತಿರೋಧ ಮತ್ತು ಸಮಾನತೆಯ ಹೋರಾಟದ ಪ್ರತೀಕವಾಗಿದೆ. ಈ ಯುದ್ಧವು 1818ರ ಜನವರಿ 1ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ನದಿ ತೀರದ ಕೋರೆಗಾಂವ್ ಗ್ರಾಮದಲ್ಲಿ ನಡೆಯಿತು. ಇದು ಮೂರನೇ ಆಂಗ್ಲೋ–ಮರಾಠಾ ಯುದ್ಧದ ಭಾಗವಾಗಿದ್ದು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಸಾಮ್ರಾಜ್ಯದ ಪೇಶ್ವೆ ಎರಡನೇ ಬಾಜೀರಾಯನ ಸೇನೆಯ ನಡುವೆ ನಡೆದಿತ್ತು.• ದಲಿತರ ಸ್ವಾಭಿಮಾನದ ಹೋರಾಟಇಂದಿಗೂ ಸಮಾಜದಲ್ಲಿ ಜಾತಿ ಅಸಮಾನತೆ ಸಂಪೂರ್ಣವಾಗಿ ಮಾಯವಾಗಿಲ್ಲ. ಕಾನೂನು ಇದ್ದರೂ, ಅಸಮಾನತೆ ಬೇರೆಬೇರೆ ರೂಪಗಳಲ್ಲಿ ಕಾಣಿಸುತ್ತಲೇ ಇದೆ. ಆದರೆ ಪೇಶ್ವೆಗಳ ಕಾಲಘಟ್ಟದಲ್ಲಿ ಮಹರ್ ದಲಿತ ಸಮುದಾಯ ಅನುಭವಿಸಿದ ಅಸ್ಪೃಶ್ಯತೆ ಅಮಾನುಷವಾಗಿತ್ತು. ದಲಿತರು ಉಗುಳಿದ ಉಗುಳು ನೆಲಕ್ಕೆ ಬೀಳಬಾರದೆಂದು ಕುತ್ತಿಗೆಗೆ ಮಡಕೆ, ಅವರ ಹೆಜ್ಜೆಗಳ ಗುರು ನೆಲದಲ್ಲಿ ಮೂಡಬಾರದೆಂದು ಸೊಂಟಕ್ಕೆ ಕಸಪೊರಕೆ ಕಟ್ಟುವ ಪದ್ಧತಿಗಳು ಜಾರಿಯಲ್ಲಿದ್ದವು. ಇವುಗಳನ್ನು ಉಲ್ಲಂಘಿಸಿದರೆ ಕ್ರೂರ ಶಿಕ್ಷೆ ವಿಧಿಸಲಾಗುತ್ತಿತ್ತು.ಅಂತಹ ದೌರ್ಜನ್ಯಪೂರ್ಣ ಆಡಳಿತದ ವಿರುದ್ಧದ ಪ್ರತಿರೋಧವೇ ಭೀಮಾ ಕೋರೆಗಾಂವ್ ಯುದ್ಧ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಯುದ್ಧಕ್ಕೆ ಇಳಿದಿದ್ದ ಸುಮಾರು 500 ಮಹರ್ ದಲಿತ ಸೈನಿಕರು, ಪೇಶ್ವೆ ಬಾಜೀರಾಯನ ನೇತೃತ್ವದ 28,000 ಸೈನಿಕರ ಬೃಹತ್ ಪಡೆಯ ಎದುರು ಅಚಲವಾಗಿ ನಿಂತರು. ಸಂಖ್ಯಾಬಲದಲ್ಲಿ ಅತಿ ಕಡಿಮೆಯಿದ್ದರೂ, ಅವರ ಧೈರ್ಯ, ಶೌರ್ಯ ಮತ್ತು ಹೋರಾಟದ ಮನೋಭಾವ ಪೇಶ್ವೆಗಳ ಸೇನೆಯನ್ನು ಸೋಲುವಂತೆ ಮಾಡಿತು. ಈ ಗೆಲುವು ದಲಿತರಿಗೆ ಸೈನಿಕ ಜಯಕ್ಕಿಂತ ಹೆಚ್ಚಾಗಿ ಮಾನಸಿಕ ಹಾಗೂ ಸಾಮಾಜಿಕ ಮುಕ್ತಿಯ ಸಂಕೇತವಾಯಿತು.• ದೌರ್ಜನ್ಯದ ವಿರುದ್ಧ ಹೋರಾಟದ ವೇದಿಕೆಪೇಶ್ವೆಗಳ ಆಡಳಿತದಲ್ಲಿ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ದಲಿತರಿಗೆ ಈ ಯುದ್ಧವು ತಿರುಗೇಟು ನೀಡುವ ಒಂದು ಐತಿಹಾಸಿಕ ಅವಕಾಶವಾಗಿತ್ತು. ಈ ಹೋರಾಟವು, “ನಾವು ಅಸಹಾಯಕರು ಅಲ್ಲ” ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿತು. ಅದಕ್ಕಾಗಿಯೇ ಕೋರೆಗಾಂವ್ ಯುದ್ಧವು ದಲಿತ ಚಳವಳಿಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ.•ಡಾ.ಬಿ.ಆರ್. ಅಂಬೇಡ್ಕರ್ ಮತ್ತು ವಿಜಯ ಸ್ತಂಭಯುದ್ಧದ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ ವಿಜಯ ಸ್ತಂಭವನ್ನು ನಿರ್ಮಿಸಿದರು. ಈ ಸ್ತಂಭದಲ್ಲಿ ಯುದ್ಧದಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ.1927ರ ಜನವರಿ 1ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಸ್ಮಾರಕಕ್ಕೆ ಭೇಟಿ ನೀಡಿದರು. ಈ ಘಟನೆಯೇ ಭೀಮಾ ಕೋರೆಗಾಂವ್‌ಗೆ ಹೊಸ ಅರ್ಥ ನೀಡಿತು. ಅಂಬೇಡ್ಕರ್ ಅವರ ದೃಷ್ಟಿಕೋನದಿಂದಾಗಿ ಈ ಸ್ಥಳವು ದಲಿತರ ಪಾಲಿಗೆ ಶಕ್ತಿ ಕೇಂದ್ರವಾಗಿ ಮತ್ತು ಸ್ವಾಭಿಮಾನದ ಸಂಕೇತವಾಗಿ ರೂಪುಗೊಂಡಿತು.ಅಂದಿನಿಂದ ಪ್ರತಿ ವರ್ಷ ಜನವರಿ 1ರಂದು ಲಕ್ಷಾಂತರ–ಕೋಟ್ಯಂತರ ಜನರು ಇಲ್ಲಿ ಸೇರಿ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸುತ್ತಾರೆ. ಈ ಆಚರಣೆ ಕೇವಲ ಗೆಲುವಿನ ಸಂಭ್ರಮವಲ್ಲ; ಅದು ದಲಿತರ ರಾಜಕೀಯ ಪ್ರಜ್ಞೆ, ಸಾಂಸ್ಕೃತಿಕ ಅಸ್ಮಿತೆ ಮತ್ತು ಸಮಾನತೆಯ ಆಶಯದ ಘೋಷಣೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆಯ ಸುತ್ತ ಸಾಂಸ್ಕೃತಿಕ ಸಂಘರ್ಷಗಳು ಉಂಟಾಗುತ್ತಿರುವುದು ಚರ್ಚಾರ್ಹವಾದರೂ, ಅದರ ಮೂಲ ಅರ್ಥವನ್ನು ಮರೆಸಲಾಗುವುದಿಲ್ಲ.ಇತಿಹಾಸದ ಪುಟಗಳಲ್ಲಿ ಮರೆಯಾಗುವ ಹಂತದಲ್ಲಿದ್ದ ಭೀಮಾ ಕೋರೆಗಾಂವ್ ಯುದ್ಧ, ಅಂಬೇಡ್ಕರ್ ಅವರ ಚಿಂತನೆಯಿಂದಾಗಿ ಇಂದು ದಲಿತ ಚಳವಳಿಯ ಬಹುದೊಡ್ಡ ಶಕ್ತಿಯಾಗಿದೆ. ಶೋಷಿತರಿಗೆ ಆತ್ಮಗೌರವದ ಹಾದಿ ತೋರಿಸಿದ ಈ ಯುದ್ಧವು, ಸಮಾನತೆಯ ಭಾರತವನ್ನು ಕಟ್ಟುವ ಹೋರಾಟದಲ್ಲಿ ಸದಾ ಸ್ಫೂರ್ತಿದಾಯಕವಾಗಿಯೇ ಉಳಿಯಲಿದೆ.

 

• ಸೆಕ್ಯುಲರ್‌ ವಾಯ್ಸ್‌  ಡೆಸ್ಕ್‌ ವಿಶೇಷ ವರದಿ :  

ಭೀಮಾ ಕೋರೆಗಾಂವ್ ಯುದ್ಧವು ಭಾರತೀಯ ಇತಿಹಾಸದಲ್ಲಿ ಕೇವಲ ಒಂದು ಸೈನಿಕ ಸಂಘರ್ಷವಲ್ಲ; ಅದು ದಲಿತ ಸಮುದಾಯದ ಆತ್ಮಗೌರವ, ಪ್ರತಿರೋಧ ಮತ್ತು ಸಮಾನತೆಯ ಹೋರಾಟದ ಪ್ರತೀಕವಾಗಿದೆ. ಈ ಯುದ್ಧವು 1818ರ ಜನವರಿ 1ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ನದಿ ತೀರದ ಕೋರೆಗಾಂವ್ ಗ್ರಾಮದಲ್ಲಿ ನಡೆಯಿತು. ಇದು ಮೂರನೇ ಆಂಗ್ಲೋ–ಮರಾಠಾ ಯುದ್ಧದ ಭಾಗವಾಗಿದ್ದು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಸಾಮ್ರಾಜ್ಯದ ಪೇಶ್ವೆ ಎರಡನೇ ಬಾಜೀರಾಯನ ಸೇನೆಯ ನಡುವೆ ನಡೆದಿತ್ತು.

• ದಲಿತರ ಸ್ವಾಭಿಮಾನದ ಹೋರಾಟ

ಇಂದಿಗೂ ಸಮಾಜದಲ್ಲಿ ಜಾತಿ ಅಸಮಾನತೆ ಸಂಪೂರ್ಣವಾಗಿ ಮಾಯವಾಗಿಲ್ಲ. ಕಾನೂನು ಇದ್ದರೂ, ಅಸಮಾನತೆ ಬೇರೆಬೇರೆ ರೂಪಗಳಲ್ಲಿ ಕಾಣಿಸುತ್ತಲೇ ಇದೆ. ಆದರೆ ಪೇಶ್ವೆಗಳ ಕಾಲಘಟ್ಟದಲ್ಲಿ ಮಹರ್ ದಲಿತ ಸಮುದಾಯ ಅನುಭವಿಸಿದ ಅಸ್ಪೃಶ್ಯತೆ ಅಮಾನುಷವಾಗಿತ್ತು. ದಲಿತರು ಉಗುಳಿದ ಉಗುಳು ನೆಲಕ್ಕೆ ಬೀಳಬಾರದೆಂದು ಕುತ್ತಿಗೆಗೆ ಮಡಕೆ, ಅವರ ಹೆಜ್ಜೆಗಳ ಗುರು ನೆಲದಲ್ಲಿ ಮೂಡಬಾರದೆಂದು ಸೊಂಟಕ್ಕೆ ಕಸಪೊರಕೆ ಕಟ್ಟುವ ಪದ್ಧತಿಗಳು ಜಾರಿಯಲ್ಲಿದ್ದವು. ಇವುಗಳನ್ನು ಉಲ್ಲಂಘಿಸಿದರೆ ಕ್ರೂರ ಶಿಕ್ಷೆ ವಿಧಿಸಲಾಗುತ್ತಿತ್ತು.

ಅಂತಹ ದೌರ್ಜನ್ಯಪೂರ್ಣ ಆಡಳಿತದ ವಿರುದ್ಧದ ಪ್ರತಿರೋಧವೇ ಭೀಮಾ ಕೋರೆಗಾಂವ್ ಯುದ್ಧ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಯುದ್ಧಕ್ಕೆ ಇಳಿದಿದ್ದ ಸುಮಾರು 500 ಮಹರ್ ದಲಿತ ಸೈನಿಕರು, ಪೇಶ್ವೆ ಬಾಜೀರಾಯನ ನೇತೃತ್ವದ 28,000 ಸೈನಿಕರ ಬೃಹತ್ ಪಡೆಯ ಎದುರು ಅಚಲವಾಗಿ ನಿಂತರು. ಸಂಖ್ಯಾಬಲದಲ್ಲಿ ಅತಿ ಕಡಿಮೆಯಿದ್ದರೂ, ಅವರ ಧೈರ್ಯ, ಶೌರ್ಯ ಮತ್ತು ಹೋರಾಟದ ಮನೋಭಾವ ಪೇಶ್ವೆಗಳ ಸೇನೆಯನ್ನು ಸೋಲುವಂತೆ ಮಾಡಿತು. ಈ ಗೆಲುವು ದಲಿತರಿಗೆ ಸೈನಿಕ ಜಯಕ್ಕಿಂತ ಹೆಚ್ಚಾಗಿ ಮಾನಸಿಕ ಹಾಗೂ ಸಾಮಾಜಿಕ ಮುಕ್ತಿಯ ಸಂಕೇತವಾಯಿತು.

• ದೌರ್ಜನ್ಯದ ವಿರುದ್ಧ ಹೋರಾಟದ ವೇದಿಕೆ

ಪೇಶ್ವೆಗಳ ಆಡಳಿತದಲ್ಲಿ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ದಲಿತರಿಗೆ ಈ ಯುದ್ಧವು ತಿರುಗೇಟು ನೀಡುವ ಒಂದು ಐತಿಹಾಸಿಕ ಅವಕಾಶವಾಗಿತ್ತು. ಈ ಹೋರಾಟವು, “ನಾವು ಅಸಹಾಯಕರು ಅಲ್ಲ” ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿತು. ಅದಕ್ಕಾಗಿಯೇ ಕೋರೆಗಾಂವ್ ಯುದ್ಧವು ದಲಿತ ಚಳವಳಿಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ.

•ಡಾ.ಬಿ.ಆರ್. ಅಂಬೇಡ್ಕರ್ ಮತ್ತು ವಿಜಯ ಸ್ತಂಭ

ಯುದ್ಧದ ನೆನಪಿಗಾಗಿ ಬ್ರಿಟಿಷರು ಕೋರೆಗಾಂವ್‌ನಲ್ಲಿ ವಿಜಯ ಸ್ತಂಭವನ್ನು ನಿರ್ಮಿಸಿದರು. ಈ ಸ್ತಂಭದಲ್ಲಿ ಯುದ್ಧದಲ್ಲಿ ಹುತಾತ್ಮರಾದ 22 ಮಹರ್ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ.

1927ರ ಜನವರಿ 1ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಸ್ಮಾರಕಕ್ಕೆ ಭೇಟಿ ನೀಡಿದರು. ಈ ಘಟನೆಯೇ ಭೀಮಾ ಕೋರೆಗಾಂವ್‌ಗೆ ಹೊಸ ಅರ್ಥ ನೀಡಿತು. ಅಂಬೇಡ್ಕರ್ ಅವರ ದೃಷ್ಟಿಕೋನದಿಂದಾಗಿ ಈ ಸ್ಥಳವು ದಲಿತರ ಪಾಲಿಗೆ ಶಕ್ತಿ ಕೇಂದ್ರವಾಗಿ ಮತ್ತು ಸ್ವಾಭಿಮಾನದ ಸಂಕೇತವಾಗಿ ರೂಪುಗೊಂಡಿತು.

ಅಂದಿನಿಂದ ಪ್ರತಿ ವರ್ಷ ಜನವರಿ 1ರಂದು ಲಕ್ಷಾಂತರ–ಕೋಟ್ಯಂತರ ಜನರು ಇಲ್ಲಿ ಸೇರಿ ವಿಜಯ ಸ್ತಂಭಕ್ಕೆ ಗೌರವ ಸಲ್ಲಿಸುತ್ತಾರೆ. ಈ ಆಚರಣೆ ಕೇವಲ ಗೆಲುವಿನ ಸಂಭ್ರಮವಲ್ಲ; ಅದು ದಲಿತರ ರಾಜಕೀಯ ಪ್ರಜ್ಞೆ, ಸಾಂಸ್ಕೃತಿಕ ಅಸ್ಮಿತೆ ಮತ್ತು ಸಮಾನತೆಯ ಆಶಯದ ಘೋಷಣೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಆಚರಣೆಯ ಸುತ್ತ ಸಾಂಸ್ಕೃತಿಕ ಸಂಘರ್ಷಗಳು ಉಂಟಾಗುತ್ತಿರುವುದು ಚರ್ಚಾರ್ಹವಾದರೂ, ಅದರ ಮೂಲ ಅರ್ಥವನ್ನು ಮರೆಸಲಾಗುವುದಿಲ್ಲ.

ಇತಿಹಾಸದ ಪುಟಗಳಲ್ಲಿ ಮರೆಯಾಗುವ ಹಂತದಲ್ಲಿದ್ದ ಭೀಮಾ ಕೋರೆಗಾಂವ್ ಯುದ್ಧ, ಅಂಬೇಡ್ಕರ್ ಅವರ ಚಿಂತನೆಯಿಂದಾಗಿ ಇಂದು ದಲಿತ ಚಳವಳಿಯ ಬಹುದೊಡ್ಡ ಶಕ್ತಿಯಾಗಿದೆ. ಶೋಷಿತರಿಗೆ ಆತ್ಮಗೌರವದ ಹಾದಿ ತೋರಿಸಿದ ಈ ಯುದ್ಧವು, ಸಮಾನತೆಯ ಭಾರತವನ್ನು ಕಟ್ಟುವ ಹೋರಾಟದಲ್ಲಿ ಸದಾ ಸ್ಫೂರ್ತಿದಾಯಕವಾಗಿಯೇ ಉಳಿಯಲಿದೆ.