🔵 LOCAL NEWS : “ಗದಗ | ಐತಿಹಾಸಿಕ ವಿದ್ಯಾರ್ಥಿ ಚಳುವಳಿಗೆ 56ರ ಸಂಭ್ರಮ: ಎಸ್‌ಎಫ್‌ಐ ಸಂಸ್ಥಾಪನಾ ದಿನಾಚರಣೆ”

Contents
🔵 LOCAL NEWS : “ಗದಗ | ಐತಿಹಾಸಿಕ ವಿದ್ಯಾರ್ಥಿ ಚಳುವಳಿಗೆ 56ರ ಸಂಭ್ರಮ: ಎಸ್‌ಎಫ್‌ಐ ಸಂಸ್ಥಾಪನಾ ದಿನಾಚರಣೆ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಗದಗ:ಐತಿಹಾಸಿಕ ವಿದ್ಯಾರ್ಥಿ ಚಳುವಳಿಯ ಹಿನ್ನೆಲೆ ಹೊಂದಿರುವ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಂಘಟನೆಯ ಸಂಸ್ಥಾಪನಾ ದಿನಾಚರಣೆಯನ್ನು ಗಜೇಂದ್ರಗಡ ತಾಲೂಕಿನ ವಿವಿಧ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ಕಳೆದ ಮೂರು ದಿನಗಳಿಂದ ಆಚರಿಸಲಾಯಿತು. ಗುರುವಾರ ಎಸ್‌ಎಫ್‌ಐ ಕಚೇರಿ ಎದುರು ಶ್ವೇತಪತಾಕೆ ಹಾರಿಸುವ ಮೂಲಕ ಅಧಿಕೃತವಾಗಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ್ ರಾಠೋಡ್, “ಐತಿಹಾಸಿಕ ಚಳುವಳಿಯ ನೆಲೆಗಟ್ಟಿನಲ್ಲಿ ನಿಂತಿರುವ ಎಸ್‌ಎಫ್‌ಐಗೆ 56 ವರ್ಷಗಳು ತುಂಬಿವೆ. ಯಾವುದೇ ರಾಜಿಗೆ ತಲೆಬಾಗದೆ, ಸೈದ್ಧಾಂತಿಕ ದೃಢತೆಯೊಂದಿಗೆ ವಿದ್ಯಾರ್ಥಿಗಳ ನಡುವೆ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಬೆಳೆಸುತ್ತಾ ಸಂಘಟನಾತ್ಮಕ ಹೋರಾಟಗಳನ್ನು ರೂಪಿಸಿದೆ” ಎಂದರು.ಸ್ವಾತಂತ್ರ್ಯ ಚಳುವಳಿಯಲ್ಲಿ ವಿದ್ಯಾರ್ಥಿಗಳ ಕೊಡುಗೆಯನ್ನು ಸ್ಮರಿಸಿದ ಅವರು, “ಭಗತ್‌ಸಿಂಗ್‌ರಂತಹ ನಾಯಕರ ಆಶಯ–ಕನಸಿನ ಭಾರತವನ್ನು ಕಟ್ಟುವ ದಿಸೆಯಲ್ಲಿ ಎಸ್‌ಎಫ್‌ಐ ನಿರಂತರ ಶ್ರಮಿಸುತ್ತಿದೆ. ಇಂದಿನ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ರೂಪಿಸಬೇಕು. ಜಾಗತೀಕರಣ–ಖಾಸಗೀಕರಣದ ನಡುವೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಕಾಲದ ಅಗತ್ಯ” ಎಂದರು.ನಿಲಯ ಪಾಲಕ ಮಾಂತೇಶ್ ಗೋಡಿ ಮಾತನಾಡಿ, “ನಾನು ವಿದ್ಯಾರ್ಥಿಯಾಗಿದ್ದಾಗ ಎಸ್‌ಎಫ್‌ಐ ಚಳುವಳಿಯ ಮೂಲಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಆ ಚಳುವಳಿ ನನಗೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಯಿತು. ವಿದ್ಯಾರ್ಥಿಗಳು ಹೋರಾಟದ ಜೊತೆಗೆ ಉತ್ತಮ ಅಧ್ಯಯನ ನಡೆಸಿ ಸಮಾಜಕ್ಕೆ ಉತ್ತಮ ನಾಗರಿಕರಾಗಬೇಕು” ಎಂದು ಹೇಳಿದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, “ಗಜೇಂದ್ರಗಡ ತಾಲೂಕಿನಲ್ಲಿ ವಿದ್ಯಾರ್ಥಿಗಳ ಹೋರಾಟದಿಂದ ಮೆಟ್ರಿಕ್ ನಂತರದ ಬಾಲಕರ ಮೂರು ವಸತಿ ನಿಲಯಗಳು, ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ಡಿಗ್ರಿ ಕಾಲೇಜು ಉಳಿವಿನ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ” ಎಂದರು.
ತಾಲೂಕು ಅಧ್ಯಕ್ಷ ಅನಿಲ್ ಆರ್ ಮಾತನಾಡಿ, “56 ವರ್ಷಗಳ ಐತಿಹಾಸಿಕ ಚಳುವಳಿಯ ಪರಂಪರೆಯನ್ನು ಅರಿತು, ಎದುರಾಗುವ ಅನ್ಯಾಯಗಳನ್ನು ಪ್ರಶ್ನಿಸುತ್ತಾ ಚಳುವಳಿಯನ್ನು ಬಲಪಡಿಸುವುದು ವಿದ್ಯಾರ್ಥಿಗಳ ಕರ್ತವ್ಯ” ಎಂದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಗುರು, ರಾಹುಲ್, ಮಂಜುಳಾ, ಅಶ್ವಿನಿ, ಜ್ಯೋತಿ, ರಾಧಾ, ಸಂಗೀತಾ, ಕುಮಾರ, ವಿದ್ಯಾ, ಅರುಣ, ಸಿದ್ದಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
• ಸೆಕ್ಯುಲರ್ ವಾಯ್ಸ್ ನ್ಯೂಸ್ ಗದಗ:
ಐತಿಹಾಸಿಕ ವಿದ್ಯಾರ್ಥಿ ಚಳುವಳಿಯ ಹಿನ್ನೆಲೆ ಹೊಂದಿರುವ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಂಘಟನೆಯ ಸಂಸ್ಥಾಪನಾ ದಿನಾಚರಣೆಯನ್ನು ಗಜೇಂದ್ರಗಡ ತಾಲೂಕಿನ ವಿವಿಧ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ಕಳೆದ ಮೂರು ದಿನಗಳಿಂದ ಆಚರಿಸಲಾಯಿತು. ಗುರುವಾರ ಎಸ್‌ಎಫ್‌ಐ ಕಚೇರಿ ಎದುರು ಶ್ವೇತಪತಾಕೆ ಹಾರಿಸುವ ಮೂಲಕ ಅಧಿಕೃತವಾಗಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಗಣೇಶ್ ರಾಠೋಡ್, “ಐತಿಹಾಸಿಕ ಚಳುವಳಿಯ ನೆಲೆಗಟ್ಟಿನಲ್ಲಿ ನಿಂತಿರುವ ಎಸ್‌ಎಫ್‌ಐಗೆ 56 ವರ್ಷಗಳು ತುಂಬಿವೆ. ಯಾವುದೇ ರಾಜಿಗೆ ತಲೆಬಾಗದೆ, ಸೈದ್ಧಾಂತಿಕ ದೃಢತೆಯೊಂದಿಗೆ ವಿದ್ಯಾರ್ಥಿಗಳ ನಡುವೆ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಬೆಳೆಸುತ್ತಾ ಸಂಘಟನಾತ್ಮಕ ಹೋರಾಟಗಳನ್ನು ರೂಪಿಸಿದೆ” ಎಂದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ವಿದ್ಯಾರ್ಥಿಗಳ ಕೊಡುಗೆಯನ್ನು ಸ್ಮರಿಸಿದ ಅವರು, “ಭಗತ್‌ಸಿಂಗ್‌ರಂತಹ ನಾಯಕರ ಆಶಯ–ಕನಸಿನ ಭಾರತವನ್ನು ಕಟ್ಟುವ ದಿಸೆಯಲ್ಲಿ ಎಸ್‌ಎಫ್‌ಐ ನಿರಂತರ ಶ್ರಮಿಸುತ್ತಿದೆ. ಇಂದಿನ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ತಮ್ಮ ಹಕ್ಕುಗಳಿಗಾಗಿ ಹೋರಾಟ ರೂಪಿಸಬೇಕು. ಜಾಗತೀಕರಣ–ಖಾಸಗೀಕರಣದ ನಡುವೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದು ಕಾಲದ ಅಗತ್ಯ” ಎಂದರು.
ನಿಲಯ ಪಾಲಕ ಮಾಂತೇಶ್ ಗೋಡಿ ಮಾತನಾಡಿ, “ನಾನು ವಿದ್ಯಾರ್ಥಿಯಾಗಿದ್ದಾಗ ಎಸ್‌ಎಫ್‌ಐ ಚಳುವಳಿಯ ಮೂಲಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಆ ಚಳುವಳಿ ನನಗೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಯಿತು. ವಿದ್ಯಾರ್ಥಿಗಳು ಹೋರಾಟದ ಜೊತೆಗೆ ಉತ್ತಮ ಅಧ್ಯಯನ ನಡೆಸಿ ಸಮಾಜಕ್ಕೆ ಉತ್ತಮ ನಾಗರಿಕರಾಗಬೇಕು” ಎಂದು ಹೇಳಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ್ ಮಾತನಾಡಿ, “ಗಜೇಂದ್ರಗಡ ತಾಲೂಕಿನಲ್ಲಿ ವಿದ್ಯಾರ್ಥಿಗಳ ಹೋರಾಟದಿಂದ ಮೆಟ್ರಿಕ್ ನಂತರದ ಬಾಲಕರ ಮೂರು ವಸತಿ ನಿಲಯಗಳು, ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ. ಡಿಗ್ರಿ ಕಾಲೇಜು ಉಳಿವಿನ ಹೋರಾಟ ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿದೆ” ಎಂದರು.
ತಾಲೂಕು ಅಧ್ಯಕ್ಷ ಅನಿಲ್ ಆರ್ ಮಾತನಾಡಿ, “56 ವರ್ಷಗಳ ಐತಿಹಾಸಿಕ ಚಳುವಳಿಯ ಪರಂಪರೆಯನ್ನು ಅರಿತು, ಎದುರಾಗುವ ಅನ್ಯಾಯಗಳನ್ನು ಪ್ರಶ್ನಿಸುತ್ತಾ ಚಳುವಳಿಯನ್ನು ಬಲಪಡಿಸುವುದು ವಿದ್ಯಾರ್ಥಿಗಳ ಕರ್ತವ್ಯ” ಎಂದರು.
ತಾಲೂಕು ಅಧ್ಯಕ್ಷ ಅನಿಲ್ ಆರ್ ಮಾತನಾಡಿ, “56 ವರ್ಷಗಳ ಐತಿಹಾಸಿಕ ಚಳುವಳಿಯ ಪರಂಪರೆಯನ್ನು ಅರಿತು, ಎದುರಾಗುವ ಅನ್ಯಾಯಗಳನ್ನು ಪ್ರಶ್ನಿಸುತ್ತಾ ಚಳುವಳಿಯನ್ನು ಬಲಪಡಿಸುವುದು ವಿದ್ಯಾರ್ಥಿಗಳ ಕರ್ತವ್ಯ” ಎಂದರು.
