🔴BBK12 NEWS : “ಬೆಂಗಳೂರು|ಬಿಗ್ ಬಾಸ್ ಕನ್ನಡ ಸೀಸನ್ 12 : ಈ ವಾರ ಸ್ಪಂದನ ಎಲಿಮಿನೇಟೆಡ್ – ವೀಕ್ಷಕರಲ್ಲಿ ಅಚ್ಚರಿ ಮತ್ತು ಚರ್ಚೆ!”
• ಸೆಕ್ಯುಲರ್ ವಾಯ್ಸ್ ಡೆಸ್ಕ್ ನ್ಯೂಸ್ :
ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಹಂತಕ್ಕೆ ಕಾಲಿಡಲಿದ್ದು, ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ನಡುವೆ ಈ ವಾರ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪಂದನ ಬಿಗ್ ಮನೆಯಿಂದ ಹೊರಬಿದ್ದಿದ್ದಾರೆ.
ಈ ವಾರದ ಎಲಿಮಿನೇಷನ್‌ಗೆ ಸ್ಪಂದನ ಸೇರಿದಂತೆ ಹಲವು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದ ಹಿನ್ನೆಲೆ ಈ ವಾರ ಯಾರೂ ಹೊರಬೀಳುವುದಿಲ್ಲ ಎಂಬ ಊಹಾಪೋಹಗಳು ಹರಡಿದ್ದರೂ, ಬಿಗ್ ಬಾಸ್ ನೀಡಿದ ಅಚ್ಚರಿಯ ತೀರ್ಮಾನದಿಂದ ಸ್ಪಂದನ ಮನೆಯಿಂದ ಹೊರಹೋಗಬೇಕಾಯಿತು.
ಕಳೆದ ವಾರ ಸ್ಪಂದನ ಎಲಿಮಿನೇಷನ್‌ನ ಕೊನೆಯ ಹಂತದವರೆಗೂ ಹೋಗಿ ಅಲ್ಪ ಅಂತರದಲ್ಲಿ ಸೇಫ್ ಆಗಿದ್ದರು.
ಕಳೆದ ವಾರ ಸ್ಪಂದನ ಎಲಿಮಿನೇಷನ್‌ನ ಕೊನೆಯ ಹಂತದವರೆಗೂ ಹೋಗಿ ಅಲ್ಪ ಅಂತರದಲ್ಲಿ ಸೇಫ್ ಆಗಿದ್ದರು.

