🟢 POSITIVE NEWS :“ಕನಕಗಿರಿ | ಹೊಸ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ಸಲ್ಲಿಸಿದ ಮುಸ್ಲಿಂ ವ್ಯಕ್ತಿ – ಭಾವೈಕ್ಯತೆಗೆ ಮಾದರಿ!
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕನಕಗಿರಿ
ನಗರದ ಐದನೇ ವಾರ್ಡ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ನೂತನ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಯನ್ನು ಶ್ರದ್ಧಾ-ಭಕ್ತಿಯಿಂದ ನೆರವೇರಿಸುವ ಮೂಲಕ ಧರ್ಮಾತೀತ ಭಾವೈಕ್ಯತೆಗೆ ಮಾದರಿಯಾದ ಘಟನೆ ನಡೆದಿದೆ.
ಕನಕಗಿರಿ ನಿವಾಸಿ ಶ್ಯಾಮೀದ್ ಸಾಬ್ ಗುರಿಕಾರ್ ಅವರು ಹೊಸ ಮನೆ ನಿರ್ಮಾಣದ ಬಳಿಕ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಮಾಜಕ್ಕೆ ಸೌಹಾರ್ದತೆಯ ಸಂದೇಶ ನೀಡಿದ್ದಾರೆ.
ಜನವರಿ 1ರಂದು ಗೃಹಪ್ರವೇಶ ಸಮಾರಂಭವನ್ನು ನೆರವೇರಿಸಿಕೊಂಡ ಶ್ಯಾಮೀದ್ ಸಾಬ್ ಗುರಿಕಾರ್ ಅವರು, ಜ̤ 3ರಂದು ತಮ್ಮ ನಿವಾಸದಲ್ಲೇ ಅಯ್ಯಪ್ಪ ಸ್ವಾಮಿ ಪೂಜೆಯನ್ನು ವಿಧಿವಿಧಾನಗಳೊಂದಿಗೆ ಅದ್ಧೂರಿಯಾಗಿ ಆಯೋಜಿಸಿದರು. ಪೂಜೆಯಲ್ಲಿ ಅಯ್ಯಪ್ಪ ಸ್ವಾಮಿಗೆ ಅಭಿಷೇಕ,

ಅಲಂಕಾರ, ಆರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿಗಳು ನೆರವೇರಿಸಲಾಯಿತು.
ಈ ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಭಾಗವಹಿಸಿ, ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಿದರು. ಪೂಜೆಯ ಬಳಿಕ ಪ್ರಸಾದ ವಿತರಣೆ ಕೂಡ ನಡೆಯಿತು.
ಈ ಪೂಜಾ ಕಾರ್ಯಕ್ರಮದಲ್ಲಿ ಸ್ಥಳೀಯ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಭಾಗವಹಿಸಿ, ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಿದರು. ಪೂಜೆಯ ಬಳಿಕ ಪ್ರಸಾದ ವಿತರಣೆ ಕೂಡ ನಡೆಯಿತು.
ಈ ಸಂದರ್ಭದಲ್ಲಿ ಎಲ್ಲ ಧರ್ಮಗಳ ಜನರು ಒಟ್ಟಾಗಿ ಭಾಗವಹಿಸಿರುವುದು ಗಮನ ಸೆಳೆಯಿತು.ಧರ್ಮಗಳ ನಡುವೆ ವೈಷಮ್ಯ ಹೆಚ್ಚುತ್ತಿರುವ ಈ ದಿನಗಳಲ್ಲಿ, ಶ್ಯಾಮೀದ್ ಸಾಬ್ ಗುರಿಕಾರ್ ಅವರ ಈ ನಡೆ ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಜೀವಂತ ಉದಾಹರಣೆಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯನ್ನು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಪ್ರಶಂಸಿಸಲಾಗಿದೆ.
“ಧರ್ಮ ಎನ್ನುವುದು ಮಾನವೀಯತೆಯನ್ನು ಬೆಳೆಸಬೇಕೇ ಹೊರತು ಬೇಧಿಸುವುದಕ್ಕಲ್ಲ. ಅಯ್ಯಪ್ಪ ಸ್ವಾಮಿ ಮೇಲಿನ ಭಕ್ತಿಯಿಂದ ಈ ಪೂಜೆಯನ್ನು ನೆರವೇರಿಸಿದ್ದೇನೆ. ಎಲ್ಲರೂ ಶಾಂತಿಯಿಂದ, ಸಹಬಾಳ್ವೆಯಿಂದ ಬದುಕಬೇಕು ಎಂಬುದೇ ನನ್ನ ಆಶಯ.”
— ಶ್ಯಾಮೀದ್ ಸಾಬ್ ಗುರಿಕಾರ್