🚨BREAKING NEWS :”ಗದಗ | ಜಿಲ್ಲಾ ನ್ಯಾಯಾಲಕ್ಕೆ ಬಾಂಬ್  ಬೆದರಿಕೆ ಕರೆ ; ಪೊಲೀಸರಿಂದ ಪರಿಶೀಲನೆ”

By admin

🚨BREAKING NEWS :“ಗದಗ | ಜಿಲ್ಲಾ ನ್ಯಾಯಾಲಕ್ಕೆ ಬಾಂಬ್  ಬೆದರಿಕೆ ಕರೆ ; ಪೊಲೀಸರಿಂದ ಪರಿಶೀಲನೆ”

•ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗದಗ:

ಇಲ್ಲಿಯ ಜಿಲ್ಲಾ ನ್ಯಾಯಾಲಯದಲ್ಲಿ ಇ-ಮೇಲ ಕರೆಯ ಮೂಲಕ ಬಾಂಬ್ ಸ್ಪೋಟಿಸುವ ಬೆದರಿಕೆ ಕರೆ ಬಂದಿದ್ದರಿಂದ ನ್ಯಾಯಾಧೀಶರು, ಅಧಿಕಾರಿಗಳು, ಸಿಬ್ಬಂದಿಗಳು ಆತಂಕಗೊಂಡ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದರು

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬ್ಲಾಸ್ಟ್ ಮಾಡೋದಾಗಿ ಮಹಮ್ಮದ್ ರಾಜಗುರು ಎಂಬಾತನಿಂದ ಜಿಲ್ಲಾ ನ್ಯಾಯಾಧೀಶರಿಗೆ ಇ-ಮೇಲ್ ಬಂದಿದೆ. ಮಧ್ನಾಹ್ನ ವೇಳೆಗೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಮೇಲ್ ಬಂದಿದ್ದು, ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಸಿಬ್ಬಂದಿಗಳು ಭಯಗೊಂಡು ಎಲ್ಲರು ನ್ಯಾಯಾಲಯದಿಂದ ಹೊರಗೆ ಬಂದಿದ್ದಾರೆ.

ವಿಷಯ ತಿಳಿದ ಕೂಡಲೇ ಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಪೊಲೀಸ್ ತಂಡ ಸ್ಥಳ ಭೇಟಿ ನಿಡಿಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ‌ದಿಂದ ಪರಿಶೀಲನೆ ನಡೆಸಿದರು. ಪ್ರಕರಣವನ್ನು ಗಂಬೀರವಾಗಿ ಪರಿಗಣಿಸಿ ವರಿಷ್ಠಾಧಿಕಾರಿಗಳು ಮುಂದಿನ ತನಿಖೆ ನಡೆಸಿದ್ದಾರೆ.