🟢 LOCAL EXPRESS : “ಗದಗ | ‘ನಿರಂತರ’ ಪ್ರಕಾಶನಕ್ಕೆ ರಾಜ್ಯಮಟ್ಟದ ಪ್ರಕಾಶಕ ಪ್ರಶಸ್ತಿ ಗರಿ”

By admin

LOCAL EXPRESS : “ಗದಗ | ‘ನಿರಂತರ’ ಪ್ರಕಾಶನಕ್ಕೆ ರಾಜ್ಯಮಟ್ಟದ ಪ್ರಕಾಶಕ ಪ್ರಶಸ್ತಿ ಗರಿ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗದಗ : 

ಕಳೆದ ಎರಡೂವರೆ ದಶಕಗಳಿಂದ ಪುಸ್ತಕ ಪ್ರಕಾಶನ ಸಂಸ್ಥೆಯಲ್ಲಿ ತನ್ನದೇ ಆದ ಹಿರಿಮೆಗಳಿಸಿ ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿ ಅಕ್ಷರ ಸಂಸ್ಕೃತಿ ಉಳಿಸಿ, ಪುಸ್ತಕ ಸಂಸ್ಕೃತಿ ಬೆಳೆಸಲು ಪಣ ತೊಟ್ಟಿರುವ ಗದಗಿನ ನಿರಂತರ ಪ್ರಕಾಶನದ ಪ್ರಕಾಶಕ, ಹಿರಿಯ ಸಾಹಿತಿ ಎ.ಎಸ್. ಮಕಾನದಾರ ಅವರು ರಾಜ್ಯಮಟ್ಟದ ಪ್ರಕಾಶನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಫೆ. 7-8ರಂದು ಎರಡು ದಿನಗಳ ಕಾಲ ಬೀದರ್ ಜಿಲ್ಲೆಯ ಬೇಲೂರಿನ ಶರಣ ಉರಿಲಿಂಗ ಪೆದ್ದಿ, ಶರಣೆ ಕಾಳವ್ವೆ ಉತ್ಸವ, ಲಿಂಗೈಕ್ಯ ಶಿವಲಿಂಗೇಶ್ವರ ಶಿವಯೋಗಿಗಳ 57 ಪುಣ್ಯ ಸ್ಮರಣೆ ನಿಮಿತ್ಯ ಉರಿಲಿಂಗ ಪೆದ್ದಿ ಮಠದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಸಮಗ್ರ ಯೋಜನೆ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ ಸತೀಶ್ ಹೊಸಮನಿ ಯವರು ಪ್ರಶಸ್ತಿ ಪ್ರದಾನ ಮಾಡಿದರು.

ಪುಸ್ತಕೋದ್ಯಮಿ ಬಸವರಾಜ್ ಜಿ ಕೊನೆಕ್ ಸಮ್ಮೇಳನದ ಸರ್ವಧ್ಯಕ್ಷತೆ ವಹಿಸಲಿದ್ದರು. ಶಾಸಕ ಶರಣು ಸಲಗರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಲೋಕಸಭಾ ಸದಸ್ಯ ಸಾಗರ ಖಂಡ್ರೆ ಪುಸ್ತಕ ವ್ಯಾಪಾರಿ ಮತ್ತು ಪ್ರಕಾಶಕರ ಸಂಘದ ಜಿಯಾ ಉದ್ದಿತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಉರಿಲಿಂಗ ಪೆದ್ದಿ ಸಂಸ್ಥಾನ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸಿದರು.

ಇದೇ ಸಂದರ್ಭದಲ್ಲಿ ನಿರಂತರ ಪ್ರಕಾಶನದ ಜೊತೆಗೆ ವಿದ್ಯಾನಿಧಿ ಪ್ರಕಾಶನ, ಅಭಿನವ ಪ್ರಕಾಶನ, ಶಾರದಾ ಪ್ರಕಾಶನ, ಅಮರ ಪ್ರಕಾಶನ ಶಿರಪುರ ಪ್ರಕಾಶನ, ಧರಿನಾಡು ಪ್ರಕಾಶನ, ಪೂಜಾ ಪ್ರಕಾಶನ ಸಂಸ್ಥೆ ಗಳ ಪ್ರಕಾಶಕರೂ ಪ್ರಕಾಶನ ಪ್ರಶಸ್ತಿ ಸ್ವೀಕರಿಸಿದ್ದಾರೆ

ನಿರಂತರ ಪ್ರಕಾಶನ ಪ್ರಕಟಿಸಿದ ವಿವಿಧ ಲೇಖಕರ ಪುಸ್ತಕಗಳು ನಾಡಿನ ಹಲವು ದತ್ತಿ ಪ್ರಶಸ್ತಿ ಮತ್ತು ಪುರಸ್ಕಾರಗಳು ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.