🔴CRIME NEWS : “ವಿಜಯಪುರ| ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನದ ಸರ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ”

By admin

  CRIME NEWS : “ವಿಜಯಪುರ| ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನದ ಸರ ಕಳ್ಳತನ : ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ವಿಜಯಪುರ:

ಜಿಲ್ಲೆಯ ಇಂಡಿ ಹಾಗೂ ಆಲಮೇಲ ಪಟ್ಟಣಗಳ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಮೇಲೆ ಗುರಿ ಮಾಡಿಕೊಂಡು ಚಿನ್ನದ ಸರ ಕಳ್ಳತನ ನಡೆಸಿರುವ ಘಟನೆಗಳು ಬೆಳಕಿಗೆ ಬಂದಿವೆ

 ಕಳ್ಳರು ಮಹಿಳೆಯರ ಕತ್ತಿನಿಂದ ಸರ ಎಗರಿಸಿ, ಕ್ಷಣಾರ್ಧದಲ್ಲಿ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ, ಮಧ್ಯಾಹ್ನದ ವೇಳೆಯಲ್ಲೇ ಈ ಕೃತ್ಯಗಳು ನಡೆದಿದ್ದು, ಜನಸಂದಣಿ ಹೆಚ್ಚಿರುವ ಸಮಯವನ್ನೇ ಕಳ್ಳರು ಆಯ್ಕೆ ಮಾಡಿಕೊಂಡಿದ್ದಾರೆ. ಇಂಡಿ ಶಹರ ಹಾಗೂ ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.

ಘಟನೆಯ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಬೈಕ್‌ನಲ್ಲಿ ಬಂದಿದ್ದ ಇಬ್ಬರು ಕಳ್ಳರ ಬಗ್ಗೆ ಸುಳಿವು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

ಒಂದೇ ಮಾದರಿಯ ಕೃತ್ಯಗಳು ನಡೆದಿರುವುದರಿಂದ ಇದು ಸಂಘಟಿತ ಸರಗಳ್ಳತನ ಗ್ಯಾಂಗ್ ಆಗಿರುವ ಸಾಧ್ಯತೆ ಎನ್ನಲಾಗುತ್ತಿದೆ. ಇತ್ತ ಸಾರ್ವಜನಿಕರು, ಬಸ್ ನಿಲ್ದಾಣಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವಂತೆ ಹಾಗೂ ಮಹಿಳೆಯರ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.