CRIME NEWS : “ಕೊಪ್ಪಳ| ಸಾರಾಯಿ ಎಂದು ಭಾವಿಸಿ ಸ್ಪಿರಿಟ್ ಸೇವನೆ : ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ – ಇಬ್ಬರು ವಶಕ್ಕೆ ! ಮುಂದೇನಾಯ್ತು ಓದಿ.!
• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೊಪ್ಪಳ:
ಸಾರಾಯಿ ಎಂದು ಭಾವಿಸಿ ಸ್ಪಿರಿಟ್ ಸೇವಿಸಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ನಡೆದಿದೆ.
ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತರನ್ನು ಕೂಕನಪಳ್ಳಿ ಗ್ರಾಮದ ಅಮರಯ್ಯ ಹಿರೇಮಠ (35) ಹಾಗೂ ರಮೇಶ ಹೊಸಹಳ್ಳಿ (25) ಎಂದು ಗುರುತಿಸಲಾಗಿದೆ.
ಮೃತರನ್ನು ಕೂಕನಪಳ್ಳಿ ಗ್ರಾಮದ ಅಮರಯ್ಯ ಹಿರೇಮಠ (35) ಹಾಗೂ ರಮೇಶ ಹೊಸಹಳ್ಳಿ (25) ಎಂದು ಗುರುತಿಸಲಾಗಿದೆ.
ಶರಣಪ್ಪ ಹಂಚಿನಾಳ ಎಂಬ ಯುವಕನಿಗೆ ಗಂಭೀರ ಸ್ಥಿತಿ ಉಂಟಾಗಿದೆ. ಅಮರಯ್ಯ ಜೆಸ್ಕಾಂ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ರಮೇಶ ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದನೆಂದು ತಿಳಿದುಬಂದಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.
• ಘಟನೆಯ ವಿವರ:
ಫೆಬ್ರವರಿ 4ರಂದು ಕೂಕನಪಳ್ಳಿ ಗ್ರಾಮದ ಜಮೀನೊಂದರಲ್ಲಿ ಐವರು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ವೇಳೆ ದದೇಗಲ್ ಗ್ರಾಮದ ವಾಟರ್ ಸರ್ವಿಸ್ ನಡೆಸುತ್ತಿದ್ದ ಮಾರುತಿ ಬಂಡಿ ಸಾರಾಯಿ ಎಂದು ಹೇಳಿ ಸ್ಪಿರಿಟ್ ತಂದಿದ್ದಾನೆ ಎಂದು ಆರೋಪಿಸಲಾಗಿದೆ. ಅವನ ಮಾತು ನಂಬಿದ ಅಮರಯ್ಯ ಹಿರೇಮಠ, ರಮೇಶ ಹೊಸಹಳ್ಳಿ ಹಾಗೂ ಶರಣಪ್ಪ ಹಂಚಿನಾಳ ಸ್ಪಿರಿಟ್ ಸೇವಿಸಿದ್ದಾರೆ.
ಸ್ಪಿರಿಟ್ ಸೇವಿಸಿದ ಕೆಲವೇ ಸಮಯದಲ್ಲಿ ಮೂವರು ಅಸ್ವಸ್ಥಗೊಂಡಿದ್ದು, ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಮರಯ್ಯ ಹಿರೇಮಠ ಹಾಗೂ ಶರಣಪ್ಪ ಹಂಚಿನಾಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
ಚಿಕಿತ್ಸೆ ಫಲಕಾರಿಯಾಗದೆ ಅಮರಯ್ಯ ಹಿರೇಮಠ ಮೃತಪಟ್ಟಿದ್ದಾರೆ. ಬಳಿಕ ರಮೇಶ ಹೊಸಹಳ್ಳಿ ಕೂಡ ಅಸ್ವಸ್ಥಗೊಂಡು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯಂತೆ, ಅಮರಯ್ಯ ಮೃತಪಟ್ಟ ಬಳಿಕ ಆತಂಕಗೊಂಡ ರಮೇಶ ಪೊಲೀಸ್ ಠಾಣೆಯಿಂದ ಮನೆಗೆ ತೆರಳಿ ಮತ್ತೊಮ್ಮೆ ಅದೇ ಸ್ಪಿರಿಟ್ ಸೇವನೆ ಮಾಡಿದ ಪರಿಣಾಮ ಗಂಭೀರ ಸ್ಥಿತಿ ಉಂಟಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸರು ನೀಡಿದ ಮಾಹಿತಿಯಂತೆ, ಅಮರಯ್ಯ ಮೃತಪಟ್ಟ ಬಳಿಕ ಆತಂಕಗೊಂಡ ರಮೇಶ ಪೊಲೀಸ್ ಠಾಣೆಯಿಂದ ಮನೆಗೆ ತೆರಳಿ ಮತ್ತೊಮ್ಮೆ ಅದೇ ಸ್ಪಿರಿಟ್ ಸೇವನೆ ಮಾಡಿದ ಪರಿಣಾಮ ಗಂಭೀರ ಸ್ಥಿತಿ ಉಂಟಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.