🔵 LOCAL EXPRESS : “ಕೆಂಭಾವಿ| ಬೀರಪ್ಪದೇವರ ದೇವಸ್ಥಾನದ ಜಮೀನು ಅತಿಕ್ರಮಣ ವಿರೋಧಿಸಿ ಹಾಲುಮತ ಸಮಾಜ ಧರಣಿ”

By admin

LOCAL EXPRESS : “ಕೆಂಭಾವಿ| ಬೀರಪ್ಪದೇವರ ದೇವಸ್ಥಾನದ ಜಮೀನು ಅತಿಕ್ರಮಣ ವಿರೋಧಿಸಿ ಹಾಲುಮತ ಸಮಾಜ ಧರಣಿ”

Contents
LOCAL EXPRESS : “ಕೆಂಭಾವಿ| ಬೀರಪ್ಪದೇವರ ದೇವಸ್ಥಾನದ ಜಮೀನು ಅತಿಕ್ರಮಣ ವಿರೋಧಿಸಿ ಹಾಲುಮತ ಸಮಾಜ ಧರಣಿ”• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೆಂಭಾವಿ:ಪಟ್ಟಣದ ಸರ್ವೇ ನಂ. 612ರಲ್ಲಿ ಇರುವ ಬೀರಪ್ಪದೇವರ ದೇವಸ್ಥಾನಕ್ಕೆ ಸೇರಿದ 5 ಎಕರೆಗೂ ಅಧಿಕ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಅತಿಕ್ರಮಣವನ್ನು ಖಂಡಿಸಿ ಮಾಳಹಳ್ಳಿಯ ಹಾಲುಮತ ಸಮಾಜದ ವತಿಯಿಂದ ಗುರುವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಿತು.‘ದೇವಸ್ಥಾನಕ್ಕೆ ಸೇರಿದ ಪಟ್ಟಾ ಜಾಗದಲ್ಲಿ ಕೆಲವರು ಯಾವುದೇ ಅನುಮತಿ ಪಡೆಯದೆ ಅಂಗಡಿ–ಮುಂಗಟ್ಟುಗಳು ಹಾಗೂ ಶೆಡ್‌ಗಳನ್ನು ನಿರ್ಮಿಸಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮದ ಮುಖಂಡರು ಆರೋಪಿಸಿದರು.‘ಈ ಜಮೀನಿನಲ್ಲಿ ಈಗಾಗಲೇ ಸರಕಾರಿ ಹೈಸ್ಕೂಲ್, ಸಮುದಾಯ ಆರೋಗ್ಯ ಕೇಂದ್ರ ಮತ್ತು ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರ ನಡುವೆಯೂ ಖಾಲಿ ಜಾಗವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಮಾಜದ ಪ್ರತಿನಿಧಿಗಳು ಹೇಳಿದರು.ಧರಣಿ ಆರಂಭ: ಫೆ.18ರಿಂದ ಸಮುದಾಯ ಆರೋಗ್ಯ ಕೇಂದ್ರದ ಮುಂದಿರುವ ಖಾಲಿ ಜಾಗದಲ್ಲಿ ಸಮಾಜದ ಬಾಂಧವರು ಧರಣಿ ಕುಳಿತಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.“ದೇವಸ್ಥಾನದ ಆಸ್ತಿಯನ್ನು ಉಳಿಸುವುದು ನಮ್ಮ ಆದ್ಯತೆ. ಸಂಬಂಧಪಟ್ಟ ಶಾಸಕರು ಹಾಗೂ ಪುರಸಭೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಕೆಂಚರಾಯ ಮುತ್ಯಾ ಮಾಳಹಳ್ಳಿ, ಮುದಕಣ್ಣ ಅಮ್ಮಾಗೋಳ, ಮುದಿನಿಂಗಪ್ಪ ದೊಡಮನಿ, ಸಿದ್ದಣ್ಣ ಗೋಡಿಹಾಳ, ಸಿದ್ದಪ್ಪ ಹೊಟ್ಟಿ, ಕೆಂಜೋಡೆಪ್ಪ ಹೊಂಬಳಕಲ್ಲ, ಸಿದ್ದಪ್ಪ ಪೂಜಾರಿ ಸಾಲಿಮನಿ, ರಾಯಣ್ಣ ದೊಡಮನಿ, ನಿಂಗಪ್ಪ ಬೇಲೂರ್, ನಿಂಗಣ್ಣ ಮೇಟಿ, ನಿಂಗಪ್ಪ ಪೂಜಾರಿ ಗುಡಿಮನಿ, ರೇವಣಸಿದ್ಧ ಬಿಸನಾಳ, ಮಾಳಪ್ಪ ಹೊಟ್ಟಿ, ಶಿವರಾಯ ಪೂಜಾರಿ ನರಗಡ್ಡಿ ಸೇರಿದಂತೆ ನೂರಾರು ಸಮಾಜದ ಬಾಂಧವರು ಪಾಲ್ಗೊಂಡಿದ್ದರು.

• ಸೆಕ್ಯುಲರ್ ವಾಯ್ಸ್ ನ್ಯೂಸ್ ಕೆಂಭಾವಿ:

ಪಟ್ಟಣದ ಸರ್ವೇ ನಂ. 612ರಲ್ಲಿ ಇರುವ ಬೀರಪ್ಪದೇವರ ದೇವಸ್ಥಾನಕ್ಕೆ ಸೇರಿದ 5 ಎಕರೆಗೂ ಅಧಿಕ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಅತಿಕ್ರಮಣವನ್ನು ಖಂಡಿಸಿ ಮಾಳಹಳ್ಳಿಯ ಹಾಲುಮತ ಸಮಾಜದ ವತಿಯಿಂದ ಗುರುವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಿತು.

‘ದೇವಸ್ಥಾನಕ್ಕೆ ಸೇರಿದ ಪಟ್ಟಾ ಜಾಗದಲ್ಲಿ ಕೆಲವರು ಯಾವುದೇ ಅನುಮತಿ ಪಡೆಯದೆ ಅಂಗಡಿ–ಮುಂಗಟ್ಟುಗಳು ಹಾಗೂ ಶೆಡ್‌ಗಳನ್ನು ನಿರ್ಮಿಸಿ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮದ ಮುಖಂಡರು ಆರೋಪಿಸಿದರು.

‘ಈ ಜಮೀನಿನಲ್ಲಿ ಈಗಾಗಲೇ ಸರಕಾರಿ ಹೈಸ್ಕೂಲ್, ಸಮುದಾಯ ಆರೋಗ್ಯ ಕೇಂದ್ರ ಮತ್ತು ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಇದರ ನಡುವೆಯೂ ಖಾಲಿ ಜಾಗವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಮಾಜದ ಪ್ರತಿನಿಧಿಗಳು ಹೇಳಿದರು.

ಧರಣಿ ಆರಂಭ: ಫೆ.18ರಿಂದ ಸಮುದಾಯ ಆರೋಗ್ಯ ಕೇಂದ್ರದ ಮುಂದಿರುವ ಖಾಲಿ ಜಾಗದಲ್ಲಿ ಸಮಾಜದ ಬಾಂಧವರು ಧರಣಿ ಕುಳಿತಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.

“ದೇವಸ್ಥಾನದ ಆಸ್ತಿಯನ್ನು ಉಳಿಸುವುದು ನಮ್ಮ ಆದ್ಯತೆ. ಸಂಬಂಧಪಟ್ಟ ಶಾಸಕರು ಹಾಗೂ ಪುರಸಭೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ಆಗ್ರಹಿಸಿದರು.

  “ದೇವಸ್ಥಾನಕ್ಕೆ ಸೇರಿದ ಪಟ್ಟಾ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಅಂಗಡಿ    ಮತ್ತು ಶೆಡ್‌ಗಳನ್ನು ನಿರ್ಮಿಸಲಾಗಿದೆ. ಕೂಡಲೇ ಅಧಿಕಾರಿಗಳು ಅಕ್ರಮ ಶೆಡ್ ಹಾಗೂ ಅಂಗಡಿಗಳನ್ನು ತೆರವುಗೊಳಿಸಿ ದೇವಸ್ಥಾನದ ಪಾವಿತ್ರ್ಯತೆಗೆ ನ್ಯಾಯ ಒದಗಿಸಬೇಕು. ಕ್ರಮ ಕೈಗೊಳ್ಳದಿದ್ದರೆ ಪುರಸಭೆ ಕಚೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು,”    ಕೆಂಚರಾಯ ಮುತ್ಯಾ, ಮಾಳಹಳ್ಳಿ

ಪ್ರತಿಭಟನೆಯಲ್ಲಿ ಕೆಂಚರಾಯ ಮುತ್ಯಾ ಮಾಳಹಳ್ಳಿ, ಮುದಕಣ್ಣ ಅಮ್ಮಾಗೋಳ, ಮುದಿನಿಂಗಪ್ಪ ದೊಡಮನಿ, ಸಿದ್ದಣ್ಣ ಗೋಡಿಹಾಳ, ಸಿದ್ದಪ್ಪ ಹೊಟ್ಟಿ, ಕೆಂಜೋಡೆಪ್ಪ ಹೊಂಬಳಕಲ್ಲ, ಸಿದ್ದಪ್ಪ ಪೂಜಾರಿ ಸಾಲಿಮನಿ, ರಾಯಣ್ಣ ದೊಡಮನಿ, ನಿಂಗಪ್ಪ ಬೇಲೂರ್, ನಿಂಗಣ್ಣ ಮೇಟಿ, ನಿಂಗಪ್ಪ ಪೂಜಾರಿ ಗುಡಿಮನಿ, ರೇವಣಸಿದ್ಧ ಬಿಸನಾಳ, ಮಾಳಪ್ಪ ಹೊಟ್ಟಿ, ಶಿವರಾಯ ಪೂಜಾರಿ ನರಗಡ್ಡಿ ಸೇರಿದಂತೆ ನೂರಾರು ಸಮಾಜದ ಬಾಂಧವರು ಪಾಲ್ಗೊಂಡಿದ್ದರು.