🔵LOCAL NEWS : “ಯಲಬುರ್ಗಾ| ಗುನ್ನಾಳದಲ್ಲಿ ಯುವಜನರ ಸಂವಿಧಾನ ಸಮಿತಿ ರಚನೆ”

By admin

  LOCAL NEWS : “ಯಲಬುರ್ಗಾ| ಗುನ್ನಾಳದಲ್ಲಿ ಯುವಜನರ ಸಂವಿಧಾನ ಸಮಿತಿ ರಚನೆ”

• ಸೆಕ್ಯುಲರ್‌ ವಾಯ್ಸ ನ್ಯೂಸ್‌ ಯಲಬುರ್ಗಾ:

ತಾಲ್ಲೂಕಿನ ಗುನ್ನಾಳ ಗ್ರಾಮದಲ್ಲಿ ವಿಸ್ತಾರ್ ಕ್ರಿಯಾ–ಎಸ್ವೈಡಿಎಫ್ ಯೋಜನೆಯಡಿ ಯುವಜನರ ಸಂವಿಧಾನ ಸಮಿತಿ ರಚನೆ ಹಾಗೂ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.

ಈ ವೇಳೆ ಸಂಯೋಜಕ ಧರ್ಮರಾಜ ಗೋನಾಳ ಅವರು ಮಾತನಾಡಿ, “ಯುವಜನರ ಶಕ್ತಿ ಉತ್ಸಾಹದಲ್ಲೇ ನಿಲ್ಲದೆ ವಿಚಾರಶಕ್ತಿಯಾಗಿ ಬೆಳೆಯಬೇಕು. ಸಂವಿಧಾನದ ಮೌಲ್ಯಗಳನ್ನು ಅರಿತು ಸಮಾನತೆ, ಬ್ರಾತೃತ್ವ ಮತ್ತು ಮಾನವೀಯತೆಯ ಆಧಾರದ ಮೇಲೆ ಬದುಕುವ ಮನೋಭಾವವನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಯುವಕರು ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ತಿಳಿದು ಗ್ರಾಮದ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮುಂದಾಗಬೇಕು ಎಂದು ಹೇಳಿದರು.

ಸಂಯೋಜಕರಾದ ಮಾಲಾ ಅವರು,  ಸಂಸ್ಥೆಯ ಸೇವಾ ಪಯಣ ಮತ್ತು ವಿವಿಧ ಯೋಜನೆಗಳ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು. ಗ್ರಾಮ ಯುವ ಮುಖಂಡೆ,  ಶ್ರೀದೇವಿ ಸಂಸ್ಥೆಯು ಮಹಿಳೆಯರು, ಮಕ್ಕಳು ಹಾಗೂ ಯುವಜನರ ಹಕ್ಕುಗಳ ರಕ್ಷಣೆಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಮೆಚ್ಚಿದರು. ಶೋಭಾ ಸಾಹುಕಾರ ಸಂವಿಧಾನದ ಮೌಲ್ಯಗಳ ಅಳವಡಿಕೆ ಕುರಿತು ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಊರಿನ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು. ಯುವಜನರ ಸಂವಿಧಾನ ಸಮಿತಿ ಸದಸ್ಯರ ಹೆಸರುಗಳನ್ನು ಘೋಷಿಸಲಾಯಿತು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಮುಖರಾದ  ಶ್ರೀದೇವಿ, ಯಲ್ಲಮ್ಮ ಬಂಗಿ, ಮುದುಕಪ್ಪ, ಶರಣಪ್ಪ ಗುಡದಿ, ರಾಮಣ್ಣ ರೇವಣಕಿ, ಜಯಶ್ರೀ ನಿಲೋಗಲ್, ಇಮಾಮಸಾಬ್ ಕರಮುಡಿ, ರಮೇಶ್ ಕುಡಗುಂಟಿ, ದೇವಮ್ಮ ಕಿನ್ನಾಳ, ರವಿಚಂದ್ರ, ಶೋಭಾ ಹಾಗೂ ಸರಸ್ವತಿ ಉಪಸ್ಥಿತರಿದ್ದರು.