🔥 SPOT NEWS:”ಕೊಪ್ಪಳ|ಸಿಡಿಲು ಬಡಿದು 9 ಕುರಿಗಳು ಸಾವು: ಕುರಿಗಾಹಿಗೆ ಭಾರಿ ನಷ್ಟ! ಪರಿಹಾರಕ್ಕೆ  ಸ್ಥಳೀಯರ ಒತ್ತಾಯ”

By admin

🔥 SPOT NEWS:“ಕೊಪ್ಪಳ|ಸಿಡಿಲು ಬಡಿದು 9 ಕುರಿಗಳು ಸಾವು: ಕುರಿಗಾಹಿಗೆ ಭಾರಿ ನಷ್ಟ! ಪರಿಹಾರಕ್ಕೆ  ಸ್ಥಳೀಯರ ಒತ್ತಾಯ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಕೊಪ್ಪಳ:

ತಾಲೂಕಿನ ಬಸಾಪುರ (ಗಿಣಿಗೇರಿ) ಗ್ರಾಮದಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು, ಕುರಿಗಾಹಿ ಮಾರುತಿ ಹೊಸಮನಿ ಅವರಿಗೆ ಸೇರಿದ 9 ಕುರಿಗಳು ಸಿಡಿಲು ಬಡಿದು ಸಾವಿಗೀಡಾಗಿವೆ.

ನಿನ್ನೆ ಸಂಜೆ ಸುಮಾರು 6 ಗಂಟೆಯ ವೇಳೆಗೆ ಎಂಎಸ್‌ಪಿಎಲ್ ಪಕ್ಕದಲ್ಲಿರುವ ಶಿವಯ್ಯ ಕೋಳಿ ಫಾರಂ ಹತ್ತಿರ ಈ ಘಟನೆ ನಡೆದಿದೆ. ಮಳೆ-ಗುಡುಗು ಸಹಿತ ವಾತಾವರಣದ ನಡುವೆ ಏಕಾಏಕಿ ಸಿಡಿಲು ಬಡಿದ ಪರಿಣಾಮ ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಇದಲ್ಲದೆ, ಕೆಲವು ಕುರಿಗಳು ಅಸ್ವಸ್ಥಗೊಂಡಿದ್ದು, ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪಶುವೈದ್ಯರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ಕುರಿಗಾಹಿಗೆ ದೊಡ್ಡ ಆರ್ಥಿಕ ನಷ್ಟವನ್ನುಂಟುಮಾಡಿದ್ದು, ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.