SPECIAL ARTICLE : “ಭಾರತದ ಹಸಿರು ಕ್ರಾಂತಿಯ ಹರಿಕಾರ : ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ ಅವರ 119ನೇ ಜಯಂತಿ ಇಂದು!”

Contents
SPECIAL ARTICLE : “ಭಾರತದ ಹಸಿರು ಕ್ರಾಂತಿಯ ಹರಿಕಾರ : ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ ಅವರ 119ನೇ ಜಯಂತಿ ಇಂದು!” ✍️ ಶ್ರೀಶೈಲ ಬಿರಾದಾರ ,ನಾಗನಟಗಿಬಾಬುಜಿ’ ಎಂದು ಕರೆಯಲ್ಪಡುವ ಡಾ. ಬಾಬು ಜಗಜೀವನ ರಾಮ್ ದೇಶ ಕಂಡ ಅಪ್ರತಿಮ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದಾರೆ,ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲಗೊಂಡುವರು ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರಾಗಿ, ಉಪ ಪ್ರಧಾನಿಯಾಗಿ,ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಹಾಗೂ ಸುಧೀರ್ಘ ಕಾಲ ಲೋಕಸಭೆಯ ಸದಸ್ಯರಾಗಿ ದೇಶದ ಅಬಿವೃದ್ಧಿಯ ಜೊತೆಜೊತೆಗೆ ದಣಿವರಿಯದೆ ದುಡಿಯುವ ದಮನಿತರ ಪ್ರತಿ ನಿಧಿಯಾಗಿ ದೇಶದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆ ಎಂಬ ಮನೋಭಾವಗಳನ್ನು ತೊಡೆದು ಹಾಕಿ ಸಮ ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಸಾಕಷ್ಟು ಶ್ರಮಿಸಿದ ಮಹಾನ್ ಚೇತನರಲ್ಲಿ ಬಾಬೂಜಿಯವರು ಒಬ್ಬರಾಗಿದ್ದಾರೆ,1908 ಏಪ್ರಿಲ್ 5 ರಂದು ಬಿಹಾರದ ಆರಾ ಜಿಲ್ಲೆಯ ಚಾಂದ್ವಾ ಗ್ರಾಮದಲ್ಲಿ ಶೋಬಿರಾಮ್ ಮತ್ತು ವಾಸಂತಿ ದೇವಿಯವರ ಕೊನೆಯ (ಏಳನೆಯ )ಮಗನಾಗಿ ಜನಿಸಿದ ಬಾಬೂಜಿ ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ನಿಂದನೆ, ಅಪಮಾನ ಮತ್ತು ನೋವುಗಳನ್ನು ಅನುಭವಿಸಿದವರು,ತಂದೆ “ಶ್ರೀ ಶೋಭಿರಾಮ್ “ಬ್ರಿಟಿಷ ಭಾರತೀಯ ಸೈನ್ಯದಲ್ಲಿ ಸೇವೆಸಲ್ಲಿಸಿ ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟು ಆರಾ ಪಟ್ಟಣದ ಸಮೀಪದ ಚಾಂದ್ವಾ ಗ್ರಾಮದಲ್ಲಿ ಭೂಮಿಯನ್ನು ಕೊಂಡು ಕೃಷಿ ಕಾಯಕವನ್ನು ಆರಂಭಿಸಿದವರು ಬಾಬೂಜಿ.1914 ರಲ್ಲಿ ಶಾಲೆಗೆ ಸೇರಿದ ಸ್ವಲ್ಪೆ (ಆರು ತಿಂಗಳಲ್ಲಿ )ದಿನಗಳಲ್ಲಿ ಈ ಲೋಕವನ್ನು ತೇಜಿಸಿದ್ದರಿಂದಾಗಿ ತಾಯಿ “ವಾಸಂತಿ ದೇವಿ”ಯವರ ಆರೈಕೆಯಲ್ಲಿ ಬೆಳೆಯುತ್ತಾರೆ,ಒಮ್ಮೆ ಆರಾದಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ಅಲ್ಲಿ ಒಂದು ಮಡಿಕೆಯ ನೀರು ಹಿಂದು ಮಕ್ಕಳಿಗೆ, ಮತ್ತೊಂದು ಮಡಿಕೆಯ ನೀರು ಮುಸ್ಲಿಂ ಮಕ್ಕಳಿಗೆಂದು ಪ್ರತ್ಯೇಕ ವಾಗಿ ಹಿಡಲಾಗಿತ್ತು, ಅವರು ಹಿಂದುಗಳ ಮಡಿಕೆಯ ನೀರನ್ನು ಕುಡಿದಾಗ ಮೇಲ್ವರ್ಗದ ವಿದ್ಯಾರ್ಥಿಗಳು ಶಾಲಾ ಪ್ರಾಂಶುಪಾಲರವರೆಗೆ ದೂರನ್ನು ಕೊಡುತ್ತಾರೆ. ಆಗ ಮಾನವಿಯ ಮೌಲ್ಯಗಳಿಗೆ ಸ್ಪಂದಿಸುವ ಮೃದು ಮನಸಿನ ಪ್ರಾಂಶುಪಾಲರಾದ “ಕಪಿಲಮುನಿತಿವಾರಿ”ಯವರು ಅಸ್ಪೃಶ್ಯ ಮಕ್ಕಳಿಗಾಗಿ ಮೂರನೆಯ ಮಡಿಕೆಯನ್ನು ಇರಿಸುವರು ಆಗ ಮೊದಲ ಬಾರಿಗೆ ಅಸ್ಪೃಶ್ಯತೆಯ ಅಪಮಾನ ಅವರನ್ನು ಬಹುವಾಗಿ ಕಾಡಿತು.ಇದರಿಂದ ಸಿಟ್ಟಿಗೆದ್ದು ಅವರು ಎರಡು ಬಾರಿ ಆ ಮಡಕೆಯನ್ನು ಒಡೆದು ಹಾಕಿ ಪ್ರತಿರೋಧವನ್ನು ಪ್ರದರ್ಶಿಸಿದಾಗ ಪ್ರಾಂಶುಪಾಲರು ವಿವರಣೆಯನ್ನು ಕೆಳುತ್ತಾರೆ, ಶಾಲಾ ಕೊಣೆಯಲ್ಲಿ ಸಮಾನತೆಯನ್ನು ಬೋಧಿಸುತ್ತಿರುವಾಗ ಕುಡಿಯುವ ನೀರಿನ ವಿಷಯವಾಗಿ ವಿದ್ಯಾರ್ಥಿಗಳಲ್ಲಿ ಯಾಕೆ? ಬೇದಭಾವ ಮಾಡುತ್ತಿರಿ ಎಲ್ಲಾ ವಿದ್ಯಾರ್ಥಿಗಳು ಒಂದೆಯಲ್ಲವೆಂದು ಕೇಳುತ್ತಾರೆ ಹೀಗಾಗಿ ಪ್ರಾಶುಪಾಲರು ಒಪ್ಪಿ ಆ ಮೂರನೇಯ ಮಡಿಕೆ ತೆಗೆಸಿದರು ಆದರೆ ಈ ಜಾತಿ ಪದ್ಧತಿಯ ಅಪಮಾನದ ಗಾಯ ಅವರ ಎದೆಯೊಳೊಕ್ಕು ಮುಂದೆ ಅವರ ಜೀವನದ ಉದ್ದಕ್ಕೂ ಅವರೆಲ್ಲಾ ಕಾರ್ಯ ಚಟುವಟಿಕೆಗಳ ಹಿಂದೆ ಈ ನೋವು ಪ್ರೇರಕವಾಗಿ ಕೆಲಸಮಾಡುತ್ತದೆ ಇಂತಹ ಅಮಾನವಿಯ ಅಪಮಾನದಿಂದ ದಲಿತರನ್ನು ಪಾರು ಮಾಡಿ ಸ್ವಾಭಿಮಾನದ ಬದುಕನ್ನು ರೂಪಿಸುವ ಆಶೆಯವು ಅವರನ್ನು ಸರ್ಕಾರಿ ನೌಕರಿಗೆ ಹೋಗದೆ ಸಮಾಜದ ಸೇವೆಯಲ್ಲಿ ಮುಂದುವರಿಯುವಂತೆ ಮಾಡಿತು, ಇದರಿಂದಾಗಿ ಅವರು ದಲಿತ ಧಮನಿತರ ನಾಯಕರಾಗಿ ರೂಪುಗೊಳ್ಳುವರು,ಗಾಂಧೀಜಿಯವರು ಆರಂಭಿಸಿದ್ದ ಅಸ್ಪೃಶ್ಯತೆಯ ವಿರುದ್ದದ ಹೋರಾಟದಲ್ಲಿ ಪಾಲ್ಗೊಳ್ಳುವರು, 1935ರಲ್ಲಿ ದಲಿತರ ಸಮಾನತೆಗಾಗಿ ಹೋರಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ದಮನಿತ ವರ್ಗಗಳ ಒಕ್ಕೂಟವನ್ನು ಸ್ಥಾಪಿಸುವಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿವರು. 1936 ರಿಂದ 1946 ರವರೆಗೆ ಬಿಹಾರದ ವಿಧಾನ ಸಭೆಗೆ ಆಯ್ಕೆಯಾಗಿ, 1946 ರಿಂದ 1947ರ ಸ್ವತಂತ್ರ ಪೂರ್ವ ಜವಹರಲಾಲ್ ನೆಹರು ಅವರ ನೇತೃತ್ವದಲ್ಲಿ ಪ್ರಥಮ ಹಂಗಾಮಿ ಸರ್ಕಾರದ ಸಂಪುಟದ ಅತ್ಯಂತ ಕಿರಿಯ ಸಚಿವರಾಗಿ ಕಾರ್ಮಿಕ ಖಾತೆಯನ್ನು ನಿರ್ವಹಿಸುವರು. ಮುಂದೆ ಅವರು ತಮ್ಮ ರಾಜಕೀಯ ಪಯಣದಲ್ಲಿ ಹಿಂದುರುಗಿ ನೋಡಿದ್ದೇ ಇಲ್ಲ, ಹಲವಾರು ಖಾತೆಗಳ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಹೊಸ-ಹೊಸ ಕಾಯ್ದೆಗಳನ್ನು ಜಾರಿಗೆ ತಂದು “ಕಾರ್ಮಿಕ ಖಾತೆಗಳ ಶಿಲ್ಪಿ “ಎಂದು ಕರೆಸೆಕೊಂಡರು. ಭಾರತದಲ್ಲಿ ಪ್ರಪ್ರಥಮ ಬಾರಿಗೆ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾನೂನು ರಚಿಸಿದ್ದು ಬಾಬುಜೀ ಅವರ ಹೆಗ್ಗಳಿಕೆಯಾಗಿದೆ.1971 ರಲ್ಲಿ ಭಾರತ-ಪಾಕ್ ಮಧ್ಯೆ ಯುದ್ಧ ನಡೆದು ಬಾಂಗ್ಲಾ ಪ್ರತ್ಯೇಕ ರಾಷ್ಟ್ರವಾಗಿ ಉದಯಸುತ್ತದೆ ಆಗ ಅವರು ಕೇಂದ್ರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ಅವರು ಕೃಷಿ ಸಚಿವರಾಗಿದ್ದಾಗ ಭಾರತೀಯ ಕೃಷಿ ಆಧುನೀಕರಣಗೊಂಡಿತು ಮತ್ತು ಭಾರತದಲ್ಲಿ ಹಸಿರು ಕ್ರಾಂತಿ ನಡೆಯಿತು ಮತ್ತು 1974ರಲ್ಲಿ ದೇಶ ಬರಗಾಲವನ್ನು ಎದುರಿಸಿದಾಗ ಆಹಾರದ ಬಿಕ್ಕಟ್ಟನ್ನು ನಿಭಾಯಿಸುವ ಹೊಣೆಯನ್ನು ಹೊತ್ತು, ಆಹಾರ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡು ಸಮರ್ಥವಾಗಿ ನಿರ್ವಿಸಿದ್ದರು ಇದರಿಂದಾಗಿ ಅವರಿಗೆ “ಹಸಿರು ಕ್ರಾಂತಿಯ ಹರಿಕಾರ”ರೆಂದು ಕರೆಯಲಾಯಿತು1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಅದನ್ನು ಬೆಂಬಲಿಸಿದರು ನಂತರ 1977ರಲ್ಲಿ ಕಾಂಗ್ರೆಸ್ ತೊರೆದು “ಕಾಂಗ್ರೆಸ್ ಫಾರ್ ಡೆಮಾಕ್ರಸಿ”ಎಂಬ ಹೊಸ ಪಕ್ಷವನ್ನು ಸ್ಥಾಪಿಸಿ ಜನತಾ ಪಕ್ಷದ ಮೈತ್ರಿಯನ್ನು ಸೇರಿದರು ಆದರೆ ಪ್ರಧಾನಿ ಆಗಬೇಕಿದ್ದ ಅವರು ಮುರಾರಜೀ ದೇಸಾಯಿ ನೇತೃತ್ವ ಸರ್ಕಾರದಲ್ಲಿ ಭಾರತದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸುವರು. ಭಾರತ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ದೀರ್ಘಕಾಲ ಸೇವೆಲ್ಲಿಸಿದ ದಾಖಲೆಯನ್ನು ಹೊಂದಿದ್ದಾರೆ. 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು 34 ವರ್ಷಗಳ ಕಾಲ ನಿರಂತರ ಸಂಸದರಾಗಿ ಸೇವೆ ಸಲ್ಲಿಸಿದರು. 1986ರಲ್ಲಿ ಅವರು ಮರಣ ಹೊಂದುವವರೆಗೂ ಸಂಸತ್ತಿನಲ್ಲಿ ಸದಸ್ಯರಾಗಿದ್ದರು ಇಷ್ಟೊಂದು ಸುಧಿರ್ಘ ಕಾಲ ಶಾಸನ ಸಭೆಯ ಸದಸ್ಯರಸಗಿದ್ದುದ್ದು ಭಾರತದಲ್ಲಿ ಮತ್ತೊಬ್ಬ ನಾಯಕರಿಲ್ಲಾ ಭವಷ್ಯ ಜಗತ್ತಿನಲ್ಲಿ ಕೂಡ ಇರಲಿಕ್ಕಿಲ್ಲಾ ,ಪ್ರಸ್ತುತ ದಿನಮಾನಗಳಲ್ಲಿ ದಲಿತ ನಾಯಕರು ಮೀಸಲು ಕ್ಷೇತ್ರದಲ್ಲಿ ಗೆಲ್ಲವುದೇ ಕಷ್ಟವಿರುವಾಗ ಅವರು ಅಂದು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬಂದಿರುವದು ಅವರು ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವ ಜಾತ್ಯಾತೀತ ನಾಯಕರಾಗಿದ್ದರೆಂದು ತಿಳಿಯುತ್ತದೆ,
ಬಾಬಾ ಸಾಹೇಬ್ ರೊಂದಿಗೆ ಮತಾಂತರದ ವಿಷಯವಾಗಿ ಕೆಲವು ಬಿನ್ನಭಿಪ್ರಾಯಗಳಿದ್ದರು ಅವರ ನಡುವೆ ಉತ್ತಮವಾದ ಸಂಬಂಧವನ್ನು ಹೊಂದಿದ್ದರು ಹಾಗೇಯೆ ಗಾಂಧೀಜಿಯವರೊಂದಿಗಿದ್ದರು ಸಂಪೂರ್ಣ ಗಾಂಧಿವಾದಿಯಾಗದೆ ಮತ್ತು ಕಾಂಗ್ರೆಸ್ ನಲ್ಲಿದ್ದರು ಪ್ರತಿರೋಧವನ್ನು ವ್ಯಕ್ತಪಡಿಸುವ ಸ್ವಂತಿಕೆಯ ಸ್ವಾಭಿಮಾನನವನ್ನು ಹೊಂದಿದ್ದರು,1946-52 ರವರೆಗೆಕಾರ್ಮಿಕ ಮಂತ್ರಿ ಯಾಗಿ, 1952-56 ಕೇಂದ್ರ ಸಂಪರ್ಕ ಸಚಿವರಾಗಿ, 1956- 62 ರವರೆಗೆ ಕೇಂದ್ರ ಸಾರಿಗೆ ಮತ್ತು ರೈಲ್ವೇ ಸಚಿವರಾಗಿ, 1962-63ಕೇಂದ್ರ ಸಾರಿಗೆ ಮತ್ತು ಸಂಪರ್ಕ ಸಚಿವರಾಗಿ,1966-67ರವರೆಗೆ ಕಾರ್ಮಿಕ, ಉದ್ಯೋಗ ಮತ್ತು ಪುನರ್ವಸತಿ ಕೇಂದ್ರ ಸಚಿವರಾಗಿ, 1967-70ರವರೆಗೆ ಕೇಂದ್ರ ಆಹಾರ ಮತ್ತುಕೃಷಿ ಸಚಿವರಾಗಿ , 1970-74,1977-79ರವರೆಗೆ ಕೇಂದ್ರ ರಕ್ಷಣ ಸಚಿವರಾಗಿ,ದೇಶ ಸೇವೆ ಮಾಡಿದ್ದಾರೆ ,ಜನರ ಸರ್ವತೋ ಮುಖ ಅಭಿವೃದ್ಧಿ, ದಲಿತ ಸಮುದಾಯಗಳ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಬಾಬುಜೀ ಅವರು 1986 ಜುಲೈ 6 ರಂದು ಕೊನೆಯುಸಿರೆಳೆದರು. ಅವರ ಸಮಾದಿ ಸ್ಥಳವನ್ನು ‘(ತನ್ಮಯಿ’ )ಸಮತಾ ಎಂದು ಕರೆಯಲಾಗುತ್ತದೆ, ಮತ್ತು ಅವರ ಜನ್ಮ ದಿನವನ್ನು ಭಾರತದಲ್ಲಿ 2008ರಿಂದ (ತನ್ಮಯಿ ದಿನ) ಸಮಾತಾ ದಿನ ಎಂದು ಆಚರಿಸಲಾಗುತ್ತಿದೆ. 1967ರಲ್ಲಿ ಉಜ್ಜಯನಿ ವಿಕ್ರಮ ವಿಶ್ವವಿದ್ಯಾಲಯ ಹಾಗೂ 1973ರಲ್ಲಿ ಆದ್ರ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕಾರಿಸಿತ್ತು,ಅತ್ಯಂತ ಚಿಕ್ಕವಯಸ್ಸಿನಲ್ಲೇ ಬಾಲ್ಯವಿವಾಹವಾಗಿದ್ದರು ಅವರ ಮೊದಲನೆ ಪತ್ನಿ ತಿರಕೊಂಡ ಮೇಲೆ 1935ರಲ್ಲಿ ಇಂದ್ರಾಣಿ ದೇವಿಯೊಂದಿಗೆ ವಿವಾಹವಾಗಿ ಸುರೇಶ ಕುಮಾರ್ ಮತ್ತು ಮೀರಾ ಕುಮಾರ್ ಎಂಬ ಮಕ್ಕಳನ್ನು ಪಡೆಯತ್ತಾರೆ 1969 ರಿಂದ 1971 ರವರೆಗೆ ರಾಷ್ಟ್ರೀಯ ಕಾಂಗ್ರೇಷನ ಅಧ್ಯಕ್ಷರಾಗಿದ್ದ ಮೊದಲು ದಲಿತ ನಾಯಕರು ಎರಡನೆಯವರಾಗಿ ಶ್ರೀ ಮಲ್ಲಿಕಾರ್ಜುನ ಖರ್ಗೆಜೀಯವರು 2022ರಿಂದ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದಾರೆ ,ಮಗಳು ಮೀರಾ ಕುಮಾರಿ 2009ರಲ್ಲಿ ಲೋಕಸಭೆ ಮಹಿಳಾ ಸ್ಪೀಕರ್ ಆಗಿ ಸೇವೆಸಲ್ಲಿಸಿದ್ದಾರೆ,ದಲಿತರು ದೌರ್ಜನ್ಯಕ್ಕೊಳಗಾದವರ ಕುರಿತು ತೀವ್ರ ಸಹಾನುಭೂತಿ ಹೊಂದಿದ್ದ ಬಾಬೂಜಿ ತಮ್ಮ ಜ್ಞಾನ ಮತ್ತು ವ್ಯಾಪಕ ದೃಷ್ಟಿಕೋನದಿಂದ ದೇಶದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ ಸರ್ವ ಜನರ ಕಲ್ಯಾಣದ ಕನಸುಗಾರ,1956ರಲ್ಲಿ ಬಾಬಾ ಸಾಹೇಬರು ಮರಣದನಂತರ ಅವರು ಬಿಟ್ಡೊದ ಕೆಲಸಗಳನ್ನು ಪೂರ್ತಿಮಾಡಲು ಅವರ ಸಂವಿಧಾನಗಳ ಆಶಯಗಳಿಗೆ 30ವರ್ಷಗಳಕಾಲ ಶ್ರಮಿಸಿದರು, ಬಾಬಾ ಸಾಹೇಬರು ಕಲ್ಪನೆಯ ಭಾರತದ ನಕಾಶೆಗೆ ಬಣ್ಣ ತುಂಬಿದ ಡಾಕ್ಟರ್ ಬಾಬು ಜಗಜೀವನ ರಾಮ್,ರವರು ತಮ್ಮ ಸುದೀರ್ಘವಾದ ಸಾರ್ವಜನಿಕ ಜೀವನದ ಅವರ ಬದುಕು ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಸ್ಪೂರ್ತಿದಾಯಕವಾಗಿದೆ.ಲೇಖಕರು : ಶ್ರೀಶೈಲ ಬಿರಾದಾರ ,ನಾಗನಟಗಿ, ಹವ್ಯಾಸಿ ಬರಹಗಾರರು.
✍️ ಶ್ರೀಶೈಲ ಬಿರಾದಾರ ,ನಾಗನಟಗಿ
ಬಾಬುಜಿ’ ಎಂದು ಕರೆಯಲ್ಪಡುವ ಡಾ. ಬಾಬು ಜಗಜೀವನ ರಾಮ್ ದೇಶ ಕಂಡ ಅಪ್ರತಿಮ ಧೀಮಂತ ನಾಯಕರಲ್ಲಿ ಒಬ್ಬರಾಗಿದ್ದಾರೆ,ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲಗೊಂಡುವರು ಮತ್ತು ಸಂವಿಧಾನ ರಚನಾ ಸಭೆಯ ಸದಸ್ಯರಾಗಿ, ಉಪ ಪ್ರಧಾನಿಯಾಗಿ,ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಹಾಗೂ ಸುಧೀರ್ಘ ಕಾಲ ಲೋಕಸಭೆಯ ಸದಸ್ಯರಾಗಿ ದೇಶದ ಅಬಿವೃದ್ಧಿಯ ಜೊತೆಜೊತೆಗೆ ದಣಿವರಿಯದೆ ದುಡಿಯುವ ದಮನಿತರ ಪ್ರತಿ ನಿಧಿಯಾಗಿ ದೇಶದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯತೆ ಎಂಬ ಮನೋಭಾವಗಳನ್ನು ತೊಡೆದು ಹಾಕಿ ಸಮ ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಸಾಕಷ್ಟು ಶ್ರಮಿಸಿದ ಮಹಾನ್ ಚೇತನರಲ್ಲಿ ಬಾಬೂಜಿಯವರು ಒಬ್ಬರಾಗಿದ್ದಾರೆ,
1908 ಏಪ್ರಿಲ್ 5 ರಂದು ಬಿಹಾರದ ಆರಾ ಜಿಲ್ಲೆಯ ಚಾಂದ್ವಾ ಗ್ರಾಮದಲ್ಲಿ ಶೋಬಿರಾಮ್ ಮತ್ತು ವಾಸಂತಿ ದೇವಿಯವರ ಕೊನೆಯ (ಏಳನೆಯ )ಮಗನಾಗಿ ಜನಿಸಿದ ಬಾಬೂಜಿ ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ನಿಂದನೆ, ಅಪಮಾನ ಮತ್ತು ನೋವುಗಳನ್ನು ಅನುಭವಿಸಿದವರು,ತಂದೆ “ಶ್ರೀ ಶೋಭಿರಾಮ್ “ಬ್ರಿಟಿಷ ಭಾರತೀಯ ಸೈನ್ಯದಲ್ಲಿ ಸೇವೆಸಲ್ಲಿಸಿ ತಮ್ಮ ಹುದ್ದೆಗೆ ರಾಜಿನಾಮೆ ಕೊಟ್ಟು ಆರಾ ಪಟ್ಟಣದ ಸಮೀಪದ ಚಾಂದ್ವಾ ಗ್ರಾಮದಲ್ಲಿ ಭೂಮಿಯನ್ನು ಕೊಂಡು ಕೃಷಿ ಕಾಯಕವನ್ನು ಆರಂಭಿಸಿದವರು ಬಾಬೂಜಿ.
1914 ರಲ್ಲಿ ಶಾಲೆಗೆ ಸೇರಿದ ಸ್ವಲ್ಪೆ (ಆರು ತಿಂಗಳಲ್ಲಿ )ದಿನಗಳಲ್ಲಿ ಈ ಲೋಕವನ್ನು ತೇಜಿಸಿದ್ದರಿಂದಾಗಿ ತಾಯಿ “ವಾಸಂತಿ ದೇವಿ”ಯವರ ಆರೈಕೆಯಲ್ಲಿ ಬೆಳೆಯುತ್ತಾರೆ,ಒಮ್ಮೆ ಆರಾದಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ಅಲ್ಲಿ ಒಂದು ಮಡಿಕೆಯ ನೀರು ಹಿಂದು ಮಕ್ಕಳಿಗೆ, ಮತ್ತೊಂದು ಮಡಿಕೆಯ ನೀರು ಮುಸ್ಲಿಂ ಮಕ್ಕಳಿಗೆಂದು ಪ್ರತ್ಯೇಕ ವಾಗಿ ಹಿಡಲಾಗಿತ್ತು, ಅವರು ಹಿಂದುಗಳ ಮಡಿಕೆಯ ನೀರನ್ನು ಕುಡಿದಾಗ ಮೇಲ್ವರ್ಗದ ವಿದ್ಯಾರ್ಥಿಗಳು ಶಾಲಾ ಪ್ರಾಂಶುಪಾಲರವರೆಗೆ ದೂರನ್ನು ಕೊಡುತ್ತಾರೆ. ಆಗ ಮಾನವಿಯ ಮೌಲ್ಯಗಳಿಗೆ ಸ್ಪಂದಿಸುವ ಮೃದು ಮನಸಿನ ಪ್ರಾಂಶುಪಾಲರಾದ “ಕಪಿಲಮುನಿತಿವಾರಿ”ಯವರು ಅಸ್ಪೃಶ್ಯ ಮಕ್ಕಳಿಗಾಗಿ ಮೂರನೆಯ ಮಡಿಕೆಯನ್ನು ಇರಿಸುವರು ಆಗ ಮೊದಲ ಬಾರಿಗೆ ಅಸ್ಪೃಶ್ಯತೆಯ ಅಪಮಾನ ಅವರನ್ನು ಬಹುವಾಗಿ ಕಾಡಿತು.
ಇದರಿಂದ ಸಿಟ್ಟಿಗೆದ್ದು ಅವರು ಎರಡು ಬಾರಿ ಆ ಮಡಕೆಯನ್ನು ಒಡೆದು ಹಾಕಿ ಪ್ರತಿರೋಧವನ್ನು ಪ್ರದರ್ಶಿಸಿದಾಗ ಪ್ರಾಂಶುಪಾಲರು ವಿವರಣೆಯನ್ನು ಕೆಳುತ್ತಾರೆ, ಶಾಲಾ ಕೊಣೆಯಲ್ಲಿ ಸಮಾನತೆಯನ್ನು ಬೋಧಿಸುತ್ತಿರುವಾಗ ಕುಡಿಯುವ ನೀರಿನ ವಿಷಯವಾಗಿ ವಿದ್ಯಾರ್ಥಿಗಳಲ್ಲಿ ಯಾಕೆ? ಬೇದಭಾವ ಮಾಡುತ್ತಿರಿ ಎಲ್ಲಾ ವಿದ್ಯಾರ್ಥಿಗಳು ಒಂದೆಯಲ್ಲವೆಂದು ಕೇಳುತ್ತಾರೆ ಹೀಗಾಗಿ ಪ್ರಾಶುಪಾಲರು ಒಪ್ಪಿ ಆ ಮೂರನೇಯ ಮಡಿಕೆ ತೆಗೆಸಿದರು ಆದರೆ ಈ ಜಾತಿ ಪದ್ಧತಿಯ ಅಪಮಾನದ ಗಾಯ ಅವರ ಎದೆಯೊಳೊಕ್ಕು ಮುಂದೆ ಅವರ ಜೀವನದ ಉದ್ದಕ್ಕೂ ಅವರೆಲ್ಲಾ ಕಾರ್ಯ ಚಟುವಟಿಕೆಗಳ ಹಿಂದೆ ಈ ನೋವು ಪ್ರೇರಕವಾಗಿ ಕೆಲಸಮಾಡುತ್ತದೆ ಇಂತಹ ಅಮಾನವಿಯ ಅಪಮಾನದಿಂದ ದಲಿತರನ್ನು ಪಾರು ಮಾಡಿ ಸ್ವಾಭಿಮಾನದ ಬದುಕನ್ನು ರೂಪಿಸುವ ಆಶೆಯವು ಅವರನ್ನು ಸರ್ಕಾರಿ ನೌಕರಿಗೆ ಹೋಗದೆ ಸಮಾಜದ ಸೇವೆಯಲ್ಲಿ ಮುಂದುವರಿಯುವಂತೆ ಮಾಡಿತು, ಇದರಿಂದಾಗಿ ಅವರು ದಲಿತ ಧಮನಿತರ ನಾಯಕರಾಗಿ ರೂಪುಗೊಳ್ಳುವರು,
ಗಾಂಧೀಜಿಯವರು ಆರಂಭಿಸಿದ್ದ ಅಸ್ಪೃಶ್ಯತೆಯ ವಿರುದ್ದದ ಹೋರಾಟದಲ್ಲಿ ಪಾಲ್ಗೊಳ್ಳುವರು, 1935ರಲ್ಲಿ ದಲಿತರ ಸಮಾನತೆಗಾಗಿ ಹೋರಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ದಮನಿತ ವರ್ಗಗಳ ಒಕ್ಕೂಟವನ್ನು ಸ್ಥಾಪಿಸುವಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿವರು. 1936 ರಿಂದ 1946 ರವರೆಗೆ ಬಿಹಾರದ ವಿಧಾನ ಸಭೆಗೆ ಆಯ್ಕೆಯಾಗಿ, 1946 ರಿಂದ 1947ರ ಸ್ವತಂತ್ರ ಪೂರ್ವ ಜವಹರಲಾಲ್ ನೆಹರು ಅವರ ನೇತೃತ್ವದಲ್ಲಿ ಪ್ರಥಮ ಹಂಗಾಮಿ ಸರ್ಕಾರದ ಸಂಪುಟದ ಅತ್ಯಂತ ಕಿರಿಯ ಸಚಿವರಾಗಿ ಕಾರ್ಮಿಕ ಖಾತೆಯನ್ನು ನಿರ್ವಹಿಸುವರು. ಮುಂದೆ ಅವರು ತಮ್ಮ ರಾಜಕೀಯ ಪಯಣದಲ್ಲಿ ಹಿಂದುರುಗಿ ನೋಡಿದ್ದೇ ಇಲ್ಲ, ಹಲವಾರು ಖಾತೆಗಳ ಸಚಿವರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಹೊಸ-ಹೊಸ ಕಾಯ್ದೆಗಳನ್ನು ಜಾರಿಗೆ ತಂದು “ಕಾರ್ಮಿಕ ಖಾತೆಗಳ ಶಿಲ್ಪಿ “ಎಂದು ಕರೆಸೆಕೊಂಡರು. ಭಾರತದಲ್ಲಿ ಪ್ರಪ್ರಥಮ ಬಾರಿಗೆ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾನೂನು ರಚಿಸಿದ್ದು ಬಾಬುಜೀ ಅವರ ಹೆಗ್ಗಳಿಕೆಯಾಗಿದೆ.
1971 ರಲ್ಲಿ ಭಾರತ-ಪಾಕ್ ಮಧ್ಯೆ ಯುದ್ಧ ನಡೆದು ಬಾಂಗ್ಲಾ ಪ್ರತ್ಯೇಕ ರಾಷ್ಟ್ರವಾಗಿ ಉದಯಸುತ್ತದೆ ಆಗ ಅವರು ಕೇಂದ್ರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದರು. ಅವರು ಕೃಷಿ ಸಚಿವರಾಗಿದ್ದಾಗ ಭಾರತೀಯ ಕೃಷಿ ಆಧುನೀಕರಣಗೊಂಡಿತು ಮತ್ತು ಭಾರತದಲ್ಲಿ ಹಸಿರು ಕ್ರಾಂತಿ ನಡೆಯಿತು ಮತ್ತು 1974ರಲ್ಲಿ ದೇಶ ಬರಗಾಲವನ್ನು ಎದುರಿಸಿದಾಗ ಆಹಾರದ ಬಿಕ್ಕಟ್ಟನ್ನು ನಿಭಾಯಿಸುವ ಹೊಣೆಯನ್ನು ಹೊತ್ತು, ಆಹಾರ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಿಕೊಂಡು ಸಮರ್ಥವಾಗಿ ನಿರ್ವಿಸಿದ್ದರು ಇದರಿಂದಾಗಿ ಅವರಿಗೆ “ಹಸಿರು ಕ್ರಾಂತಿಯ ಹರಿಕಾರ”ರೆಂದು ಕರೆಯಲಾಯಿತು
1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ಅದನ್ನು ಬೆಂಬಲಿಸಿದರು ನಂತರ 1977ರಲ್ಲಿ ಕಾಂಗ್ರೆಸ್ ತೊರೆದು “ಕಾಂಗ್ರೆಸ್ ಫಾರ್ ಡೆಮಾಕ್ರಸಿ”ಎಂಬ ಹೊಸ ಪಕ್ಷವನ್ನು ಸ್ಥಾಪಿಸಿ ಜನತಾ ಪಕ್ಷದ ಮೈತ್ರಿಯನ್ನು ಸೇರಿದರು ಆದರೆ ಪ್ರಧಾನಿ ಆಗಬೇಕಿದ್ದ ಅವರು ಮುರಾರಜೀ ದೇಸಾಯಿ ನೇತೃತ್ವ ಸರ್ಕಾರದಲ್ಲಿ ಭಾರತದ ಉಪಪ್ರಧಾನಿಯಾಗಿ ಸೇವೆ ಸಲ್ಲಿಸುವರು. ಭಾರತ ಸರ್ಕಾರದ ಕ್ಯಾಬಿನೆಟ್ ಮಂತ್ರಿಯಾಗಿ ದೀರ್ಘಕಾಲ ಸೇವೆಲ್ಲಿಸಿದ ದಾಖಲೆಯನ್ನು ಹೊಂದಿದ್ದಾರೆ. 1952ರಲ್ಲಿ ನಡೆದ ಮೊದಲ ಚುನಾವಣೆಯಿಂದ ಹಿಡಿದು 34 ವರ್ಷಗಳ ಕಾಲ ನಿರಂತರ ಸಂಸದರಾಗಿ ಸೇವೆ ಸಲ್ಲಿಸಿದರು. 1986ರಲ್ಲಿ ಅವರು ಮರಣ ಹೊಂದುವವರೆಗೂ ಸಂಸತ್ತಿನಲ್ಲಿ ಸದಸ್ಯರಾಗಿದ್ದರು ಇಷ್ಟೊಂದು ಸುಧಿರ್ಘ ಕಾಲ ಶಾಸನ ಸಭೆಯ ಸದಸ್ಯರಸಗಿದ್ದುದ್ದು ಭಾರತದಲ್ಲಿ ಮತ್ತೊಬ್ಬ ನಾಯಕರಿಲ್ಲಾ ಭವಷ್ಯ ಜಗತ್ತಿನಲ್ಲಿ ಕೂಡ ಇರಲಿಕ್ಕಿಲ್ಲಾ ,ಪ್ರಸ್ತುತ ದಿನಮಾನಗಳಲ್ಲಿ ದಲಿತ ನಾಯಕರು ಮೀಸಲು ಕ್ಷೇತ್ರದಲ್ಲಿ ಗೆಲ್ಲವುದೇ ಕಷ್ಟವಿರುವಾಗ ಅವರು ಅಂದು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬಂದಿರುವದು ಅವರು ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿರುವ ಜಾತ್ಯಾತೀತ ನಾಯಕರಾಗಿದ್ದರೆಂದು ತಿಳಿಯುತ್ತದೆ,
ಬಾಬಾ ಸಾಹೇಬ್ ರೊಂದಿಗೆ ಮತಾಂತರದ ವಿಷಯವಾಗಿ ಕೆಲವು ಬಿನ್ನಭಿಪ್ರಾಯಗಳಿದ್ದರು ಅವರ ನಡುವೆ ಉತ್ತಮವಾದ ಸಂಬಂಧವನ್ನು ಹೊಂದಿದ್ದರು ಹಾಗೇಯೆ ಗಾಂಧೀಜಿಯವರೊಂದಿಗಿದ್ದರು ಸಂಪೂರ್ಣ ಗಾಂಧಿವಾದಿಯಾಗದೆ ಮತ್ತು ಕಾಂಗ್ರೆಸ್ ನಲ್ಲಿದ್ದರು ಪ್ರತಿರೋಧವನ್ನು ವ್ಯಕ್ತಪಡಿಸುವ ಸ್ವಂತಿಕೆಯ ಸ್ವಾಭಿಮಾನನವನ್ನು ಹೊಂದಿದ್ದರು,
1946-52 ರವರೆಗೆಕಾರ್ಮಿಕ ಮಂತ್ರಿ ಯಾಗಿ, 1952-56 ಕೇಂದ್ರ ಸಂಪರ್ಕ ಸಚಿವರಾಗಿ, 1956- 62 ರವರೆಗೆ ಕೇಂದ್ರ ಸಾರಿಗೆ ಮತ್ತು ರೈಲ್ವೇ ಸಚಿವರಾಗಿ, 1962-63ಕೇಂದ್ರ ಸಾರಿಗೆ ಮತ್ತು ಸಂಪರ್ಕ ಸಚಿವರಾಗಿ,1966-67ರವರೆಗೆ ಕಾರ್ಮಿಕ, ಉದ್ಯೋಗ ಮತ್ತು ಪುನರ್ವಸತಿ ಕೇಂದ್ರ ಸಚಿವರಾಗಿ, 1967-70ರವರೆಗೆ ಕೇಂದ್ರ ಆಹಾರ ಮತ್ತುಕೃಷಿ ಸಚಿವರಾಗಿ , 1970-74,1977-79ರವರೆಗೆ ಕೇಂದ್ರ ರಕ್ಷಣ ಸಚಿವರಾಗಿ,ದೇಶ ಸೇವೆ ಮಾಡಿದ್ದಾರೆ ,ಜನರ ಸರ್ವತೋ ಮುಖ ಅಭಿವೃದ್ಧಿ, ದಲಿತ ಸಮುದಾಯಗಳ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಬಾಬುಜೀ ಅವರು 1986 ಜುಲೈ 6 ರಂದು ಕೊನೆಯುಸಿರೆಳೆದರು. ಅವರ ಸಮಾದಿ ಸ್ಥಳವನ್ನು ‘(ತನ್ಮಯಿ’ )ಸಮತಾ ಎಂದು ಕರೆಯಲಾಗುತ್ತದೆ, ಮತ್ತು ಅವರ ಜನ್ಮ ದಿನವನ್ನು ಭಾರತದಲ್ಲಿ 2008ರಿಂದ (ತನ್ಮಯಿ ದಿನ) ಸಮಾತಾ ದಿನ ಎಂದು ಆಚರಿಸಲಾಗುತ್ತಿದೆ. 1967ರಲ್ಲಿ ಉಜ್ಜಯನಿ ವಿಕ್ರಮ ವಿಶ್ವವಿದ್ಯಾಲಯ ಹಾಗೂ 1973ರಲ್ಲಿ ಆದ್ರ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಕೊಟ್ಟು ಪುರಸ್ಕಾರಿಸಿತ್ತು,
ಅತ್ಯಂತ ಚಿಕ್ಕವಯಸ್ಸಿನಲ್ಲೇ ಬಾಲ್ಯವಿವಾಹವಾಗಿದ್ದರು ಅವರ ಮೊದಲನೆ ಪತ್ನಿ ತಿರಕೊಂಡ ಮೇಲೆ 1935ರಲ್ಲಿ ಇಂದ್ರಾಣಿ ದೇವಿಯೊಂದಿಗೆ ವಿವಾಹವಾಗಿ ಸುರೇಶ ಕುಮಾರ್ ಮತ್ತು ಮೀರಾ ಕುಮಾರ್ ಎಂಬ ಮಕ್ಕಳನ್ನು ಪಡೆಯತ್ತಾರೆ 1969 ರಿಂದ 1971 ರವರೆಗೆ ರಾಷ್ಟ್ರೀಯ ಕಾಂಗ್ರೇಷನ ಅಧ್ಯಕ್ಷರಾಗಿದ್ದ ಮೊದಲು ದಲಿತ ನಾಯಕರು ಎರಡನೆಯವರಾಗಿ ಶ್ರೀ ಮಲ್ಲಿಕಾರ್ಜುನ ಖರ್ಗೆಜೀಯವರು 2022ರಿಂದ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದಾರೆ ,ಮಗಳು ಮೀರಾ ಕುಮಾರಿ 2009ರಲ್ಲಿ ಲೋಕಸಭೆ ಮಹಿಳಾ ಸ್ಪೀಕರ್ ಆಗಿ ಸೇವೆಸಲ್ಲಿಸಿದ್ದಾರೆ,
ದಲಿತರು ದೌರ್ಜನ್ಯಕ್ಕೊಳಗಾದವರ ಕುರಿತು ತೀವ್ರ ಸಹಾನುಭೂತಿ ಹೊಂದಿದ್ದ ಬಾಬೂಜಿ ತಮ್ಮ ಜ್ಞಾನ ಮತ್ತು ವ್ಯಾಪಕ ದೃಷ್ಟಿಕೋನದಿಂದ ದೇಶದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ ಸರ್ವ ಜನರ ಕಲ್ಯಾಣದ ಕನಸುಗಾರ,1956ರಲ್ಲಿ ಬಾಬಾ ಸಾಹೇಬರು ಮರಣದನಂತರ ಅವರು ಬಿಟ್ಡೊದ ಕೆಲಸಗಳನ್ನು ಪೂರ್ತಿಮಾಡಲು ಅವರ ಸಂವಿಧಾನಗಳ ಆಶಯಗಳಿಗೆ 30ವರ್ಷಗಳಕಾಲ ಶ್ರಮಿಸಿದರು, ಬಾಬಾ ಸಾಹೇಬರು ಕಲ್ಪನೆಯ ಭಾರತದ ನಕಾಶೆಗೆ ಬಣ್ಣ ತುಂಬಿದ ಡಾಕ್ಟರ್ ಬಾಬು ಜಗಜೀವನ ರಾಮ್,ರವರು ತಮ್ಮ ಸುದೀರ್ಘವಾದ ಸಾರ್ವಜನಿಕ ಜೀವನದ ಅವರ ಬದುಕು ಪ್ರಜಾಪ್ರಭುತ್ವ ಪ್ರೇಮಿಗಳಿಗೆ ಸ್ಪೂರ್ತಿದಾಯಕವಾಗಿದೆ.

