
ಬೆಳಗಾಯಿತು, ಸಜ್ಜುಗೊಳಿಸಿದಳು ಕುಶಜಳು ಕುಶ ಲವರನ್ನು I
ಕಳಿಸಲು ಯಜ್ಞ ತಾಣಕ್ಕೆ ಮುನಿ ವಾಲ್ಮೀಕಿಯೊಂದಿಗೆ; II
ಕಂಡು ಸಜ್ಜಾದ ಕುಶ ಲವರಿಗೆ ವಾಲ್ಮೀಕಿ ಮುನಿI
ಉಪದೇಶಿಸಿದ:” ನನ್ನ ಅಪ್ಪಣೆಯಂತೆ ವರ್ತಿಸಿ: II
ನಾನು ಹೇಳಿದಾಗ ಸಭೀಕರ ಮುಂದೆ ರಾಮನI
ಚರಿತೆ ಲೋಕಗೀತೆಯನ್ನು ಮಧುರ ಕಂಠದಿ ಹಾಡಿ,II
ಯಾರಾದರು ನಿಮ್ಮನ್ನು ನಿವ್ಯಾರೆಂದು ವಿಚಾರಿಸಿದಾಗI
ನಾವು ವಾಲ್ಮೀಕಿ ಮುನಿ ಶಿಷ್ಯರೆಂದು ಉತ್ತರಿಸಿರಿ.”II
ವಾಲ್ಮೀಕಿ ಮುನಿ ಲವಕುಶರಿಗೆ ವಿವರಿಸಿದ ಅಲ್ಲಿ ನೆರೆದಿದ್ದವರನು I
ಅಶ್ವಮೇಧಯಜ್ಞ ಪ್ರಾರಂಭ ಪೂರ್ವದಲಿ:II
ಸುಗ್ರೀವ, ಹನುಮಾನ, ಅಂಗದ, ಜಾಂಬವಾನ, ರೋಮಾ ತಾರಾI
ಎಲ್ಲ ವಾನರ ವೀರರನು ತೋರಿಸಿ ವಿವರಿಸಿದ ವಾಲ್ಮೀಕಿ; II
ವಿಭೀಷಣ, ಅವನ ಪತ್ನಿ, ಮಗಳು, ಸುರಮಾ, I
ತ್ರಿಜಟಾ, ಸೀತೆ ಮಾತೆ ಸಖಿಯರನ್ನು ವಿವರಿಸಿದ ವಾಲ್ಮೀಕಿ; II
ಕೌಶಲ್ಯ, ಸುಮಿತ್ರಾ, ಕೈಕೆಯಿ ರಾಜಮಾತೆಯರನು ತೋರಿಸಿ I
ರಾಮನ ತಾಯಂದಿರ ಬಗ್ಗೆ ವಿವರಿಸಿದ ವಾಲ್ಮೀಕಿ; II
ಭರತ, ಶತ್ರುಘ್ನ, ಲಕ್ಷ್ಮಣ ವ ಅವರ ಪತ್ನಿಯರ,I
ಸೀತೆಯ ಸಹೋದರಿರ ಬಗ್ಗೆ ವಿವರಿಸಿದ ವಾಲ್ಮೀಕಿ; II
ವಸಿಷ್ಠ, ಜಾಬಾಲಿ,ಗುರು ಹಿರಿಯರ ಕುರಿತುI
ವಾಲ್ಮೀಕಿ ವಿವರಿಸಿದ ಲವ ಕುಶರಿಗೆ; II
ಆದರೆ ತಾಯಿ ಸೀತೆ ಹೋಲುವ ಪುತ್ಥಳಿ ಕಂಡು I
ಬೆರಗಾದ ಲವ ಕುಶರು ಲಾಲಿಸಿದರು ಗುರು ವಾಲ್ಮೀಕಿಯನ್ನು:II
“ನಮ್ಮ ತಾಯಿ ಸೀತೆ ಹೊಲುವ ಮೂರ್ತಿ ಯಾರದ್ದುI
ಅದರ ಪಕ್ಕದಲಿ ಕುಳಿತವರು ಯಾರು?”;II
ವಾಲ್ಮೀಕಿ ಮುನಿ ಲವ ಕುಶರಿಗೆ ದಿಟ ಹೇಳಿದರು:ಮಕ್ಕಳೇ, I
ತಡವರಿಸಬಾರದು, ಆತಂಕಿತ ವಾಗಬಾರದು, II
ಎದುರಿಸಬೇಕಿದೆ ಸತ್ಯ, ಉದಾಶೀನದಿ,ಆ ಮೂರ್ತಿ ನಿಮ್ಮ ತಾಯಿ ಸೀತೆ, I
ಅದರ ಬದಿ ಕುಳಿತ ರಾಜ ಅವಳ ಪತಿ ರಾಮ, II
ನಿಮ್ಮ ತಂದೆ ತಾಯಿ ಪಟ್ಟ ವ್ಯಥೆ ಕಥೆI
ರಾಮನ ಚರಿತೆಯನ್ನು ಹಾಡಬೇಕಾಗಿದೆ ನೀವು,II
ಇಂದು ದೈವದ ಬಯಕೆ, ವಿಧಿವಿಲಾಸI
ಕಾಲದ ನಿರ್ಣಯ, ಸಾಗುವದೇಲ್ಲೂ ಅವುಗಳಂತೆ”.II
ತಂದೆ ರಾಮನ ದರ್ಶನ ಪಡೆದು ಪುನಿತರಾದರು I
ಲವ ಕುಶರು, ವಂದಿಸಿದರು ಗುರು ವಾಲ್ಮೀಕಿಗೆII
ಉತ್ತರಕಾಂಡ
ಲವ, ಕುಶ ಮತ್ತು ಕುಶಜಳನ್ನು ಯಜ್ಞ ಸ್ಥಳಕ್ಕೆ ಕರೆದೊಯ್ದ, ಯಜ್ಞ ಪೂರ್ವದಲ್ಲಿ ವಾಲ್ಮೀಕಿ ಮುನಿಯು ಲವ ಕುಶರಿಗೆ ಶಿಸ್ತಿನಿಂದ ವರ್ತಿಸಿವು ಎಚ್ಚರಿಕೆ ಮಾತು ಹೇಳಿದ, ಅಲ್ಲಿ ನೆರೆದ ರಾಮನ, ರಾಮನ ಮಾತೆಯರ, ಸ್ನೇಹಿತರ, ಸಂಭಂದಿಗಳ ವಿವರಣೆ ನೀಡಿದ, ಲವಕುಶರು ತಮ್ಮ ತಾಯಿಯನ್ನು ಹೋಲುವ ಸ್ತ್ರೀ-ಪುಥ್ಥಳಿ ನೋಡಿದ ಕೇಳಿದ ಪ್ರಶ್ನೆ, ವಾಲ್ಮೀಕಿಯು ಲವಕುಶರಿಗೆ ರಾಮನು ಅವರ ತಂದೆ, ಆ ಪುಥ್ಥಳಿ ಅವರ ತಾಯಿಯದು ಎಂದು ಮಕ್ಕಳ ಮುಂದೆ ಸತ್ಯ ಬಿಚ್ಚಿಟ್ಟ ಹಾಗು ಅವರ ತಂದೆ ತಾಯಿ ವ್ಯಥೆಗಾಥೆ ರಾಮಾಯಣವನ್ನು ಹಾಡುವಂತೆ ದೈರ್ಯತುಂಬಿದ ಪ್ರಸಂಗಗಳ ವಿವರಣೆ ಆದಿಕವಿ ವಾಲ್ಮೀಕಿಯು
ನೀಡಿರುವರು, ಇಲ್ಲಿ ಮೂಡಿ ಬರುವ (1) ಗುರು ಅಪ್ಪಣೆ ಪಾಲಣೆ (2) ಯಜ್ಷ ಪೂರ್ವದಲ್ಲಿ ವಾಲ್ಮೀಕಿಯಿಂದ ವಿವರಣೆ ಮತ್ತು (3) ರಾಮಾಯಣವು ರಾಮ ಮತ್ತು ಸೀತೆಯ ವ್ಯಥೆಗಾಥೆ.ಪ್ರಮುಖ ಅಂಶಗಳು ಹೀಗೆ ವಿವರಿಸಿರುವರು: ಬೆಳಗಾಯಿತು, ಮುನಿ ವಾಲ್ಮೀಕಿಯೊಂದಿಗೆ ಯಜ್ಞ ತಾಣಕ್ಕೆ ಕಳಿಸಲು ಕುಶಜಳು ಕುಶ ಲವರನ್ನು ಸಜ್ಜುಗೊಳಿಸಿದಳು; ಹೊರಡಲು ಸಜ್ಜಾದ ಕುಶ ಲವರಿಗೆ ಕಂಡು ವಾಲ್ಮೀಕಿ ಮುನಿ ಉಪದೇಶಿಸಿದನು ”ನನ್ನ ಅಪ್ಪಣೆಯಂತೆ ವರ್ತಿಸಿರಿ, ನಾನು ಹೇಳಿದಾಗ ಸಭೀಕರ ಮುಂದೆ ರಾಮನ ಚರಿತೆ ಲೋಕಗೀತೆಯನ್ನು ಮಧುರ ಕಂಠದಿಂದ ಹಾಡಿರಿ, ಯಾರಾದರು ನಿಮ್ಮನ್ನು ನಿವ್ಯಾರೆಂದು ವಿಚಾರಿಸಿದಾಗ ನಾವು ವಾಲ್ಮೀಕಿ ಮುನಿ ಶಿಷ್ಯರೆಂದು ಉತ್ತರಿಸಿರಿ.” ಅಶ್ವಮೇಧಯಜ್ಞ ಪ್ರಾರಂಭ ಪೂರ್ವದಲಿ ವಾಲ್ಮೀಕಿ ಮುನಿ ಲವಕುಶರಿಗೆ ಅಲ್ಲಿ ನೆರೆದಿದ್ದವರ ಬಗ್ಗೆ ವಿವರಿಸಿದರು; ವಾಲ್ಮೀಕಿಯು ಸುಗ್ರೀವ, ಹನುಮಾನ, ಅಂಗದ, ಜಾಂಬವಾನ, ರೋಮಾ ತಾರಾ ಎಲ್ಲ ವಾನರ ವೀರರನು ಲವ ಕುಶರಿಗೆ ತೋರಿಸಿ ವಿವರಿಸಿದನು; ವಿಭೀಷಣ, ಅವನ ಪತ್ನಿ, ಮಗಳು, ರಾಕ್ಷಸವೀರರನು, ಸುರಮಾ, ತ್ರಿಜಟಾ ಸೀತೆ ಮಾತೆ ಸಖಿಯರನ್ನು ವಾಲ್ಮೀಕಿಯು ವಿವರಿಸಿದನು; ಕೌಶಲ್ಯ, ಸುಮಿತ್ರಾ, ಕೈಕೆಯಿ ರಾಜಮಾತೆಯರನು ತೋರಿಸಿ ರಾಮನ ತಾಯಂದಿರ ಬಗ್ಗೆ ವಾಲ್ಮೀಕಿಯು ವಿವರಿಸಿದನು; ಭರತ, ಶತ್ರುಘ್ನ, ಲಕ್ಷ್ಮಣ ಮತ್ತು ಅವರ ಪತ್ನಿಯರ,ಸೀತೆಯ ಸಹೋದರಿರ ಬಗ್ಗೆ ವಾಲ್ಮೀಕಿ ವಿವರಿಸಿದನು; ವಸಿಷ್ಠ, ಜಾಬಾಲಿ,ಗುರು ಹಿರಿಯರ ಕುರಿತು ಲವ ಕುಶರಿಗೆ ವಾಲ್ಮೀಕಿಯು ವಿವರಿಸಿದನು;ಆದರೆ ತಾಯಿ ಸೀತೆಯನ್ನು ಹೋಲುವ ಪುತ್ಥಳಿ ಕಂಡು ಬೆರಗಾದ ಲವ ಕುಶರು ಗುರು ವಾಲ್ಮೀಕಿಯನ್ನು ಲಾಲಿಸಿದರು “ನಮ್ಮ ತಾಯಿ ಸೀತೆ ಹೋಲುವ ಮೂರ್ತಿ ಯಾರದ್ದು, ಅದರ ಪಕ್ಕದಲಿ ಕುಳಿತವರು ಯಾರು?” ವಾಲ್ಮೀಕಿ ಮುನಿಯು ಲವ ಕುಶರಿಗೆ ದಿಟ ಹೇಳಿದರು “ ಮಕ್ಕಳೇ, ತಡವರಿಸಬಾರದು, ಆತಂಕಿತ ವಾಗಬಾರದು, ನೀವು ಸತ್ಯವನ್ನು ಎದುರಿಸಬೇಕಾಗಿದೆ, ನೀವು ಉದಾಶೀನರಾಗಿ, ಆ ಮೂರ್ತಿ ನಿಮ್ಮ ತಾಯಿ ಸೀತೆಯದು,ಅದರ ಪಕ್ಕದಲಿ ಕುಳಿತ ರಾಜ ಅವಳ ಪತಿ ರಾಮನು, ನೀವು ನಿಮ್ಮ ತಂದೆ ತಾಯಿ ಪಟ್ಟ ವ್ಯಥೆ ಕಥೆ ರಾಮನ ಚರಿತೆಯನ್ನು ಹಾಡಬೇಕಾಗಿದೆ, ಇಂದು ದೈವದ ಬಯಕೆ, ವಿಧಿವಿಲಾಸ, ಕಾಲದ ನಿರ್ಣಯ, ಅವುಗಳಂತೆ ಎಲ್ಲವೂ ಸಾಗುವವು.” ಲವ ಕುಶರು ತಮ್ಮ ತಂದೆ ರಾಮನ ದರ್ಶನ ಪಡೆದು ಪುನಿತರಾದರು, ಗುರು ವಾಲ್ಮೀಕಿಗೆ ವಂದಿಸಿದರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
