ಪಶ್ಚಿಮಮುಖಿಯಾಗಿ ಹರಿವ ನದಿಯ ಸ್ಥಳಕ್ಕೆ ಬಂದ ರಾಮ…

By admin


ಮೂರು ಯೋಜನೆಗಷ್ಟು ನಡೆದು ಸರ್ಯುನದಿI
ಪಶ್ಚಿಮಮುಖಿಯಾಗಿ ಹರಿವ ಸ್ಥಳಕ್ಕೆ ಬಂದ ರಾಮ; II
ರಾಮನ ಸುತ್ತುವರೆದ ಜನರು ಮನಿಗಳುI
ವಾನರರು, ಜೀವಿಗಳು ನಿಂತವು ನದಿದಡದಲಿ; II
ಗಗನದಿ ಪುಷ್ಪವೃಷ್ಠಿ ನಡೆಯಿತು, ದೇವತೆಗಳುI
ವೀಕ್ಷಿಸಿಸುತಿದ್ದರು ಸಂತೋಷದಿ ರಾಮನ ಆಗಮನ; II
ವಾತಾವರಣ ತುಂಬಿತ್ತು ಸಂಗೀತ ವಾದ್ಯಗಳI
ಇಂಪಾದ ಸ್ವರದಿ, ಎತ್ತ ನೋಡಿದು ಹರುಷ; II
ಬ್ರಹ್ಮಲೋಕದಿ ಅಶರೀರವಾಣಿ ಕೇಳಿಸಿತು:I
“ಅಜಾನುಬಾಹು ರಘುವಂಶ ರಾಮನಿಗೆ ಸ್ವಾಗತ, II
ರಾಮನ ಸಹೋದರರಿಗೆ ಸ್ವಾಗತಾ, ರಾಮನೋದಿಗೆI
ಆಗಮಿಸುವ ಸಕಲ ಜೀವಿಗಳಿಗೆ ಸ್ವಾಗತಾ”. II
ರಾಮನೊಂದಿಗೆ ಎಲ್ಲರೂ ಗೋಪ್ರತರಕ ಘಾಟದಲ್ಲಿI
ಇಳಿದರು ಸರ್ಯು ನದಿಯಲಿ, ಪ್ರಾಣ ಅರ್ಪಿಸಿದರು; II
ಎಲ್ಲರೂ ಬ್ರಹ್ಮಸತ್ವದಲಿ ಲೀನವಾದರು,I
ಸೇರಿದರು ಬ್ರಹ್ಮಲೋಕ, ತಮ್ಮ ಮೂಲ ಆಲಯಕ್ಕೆ.II
ಉತ್ತರಕಾಂಡ

ರಾಮನು ತನ್ನ ಅನುಯಾಯಿಗಳೊಂದಿಗೆ ಸರಯೂ ನದಿಯಲ್ಲಿ ಪ್ರಾಣ ತ್ಯಾಗ ಮಾಡಿ ಬ್ರಹ್ಮಾಲಯ ಸೇರಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅಲ್ಲದೆ ಆದಿಕವಿಯು (1) ರಾಮನ ಮಹಾಪ್ರಸ್ಥಾ ಸ್ಥಳ ಮತ್ತು (2) ಬ್ರಹ್ಮಾಲಯ ಪರಿಭಾಷೆ, ಪ್ರಮುಖ ಅಂಶಗಳನ್ನು ಹೀಗೆ ತಿಳಿಸಿರುವರು: ಮೂರು ಯೋಜನೆಗಷ್ಟು ನಡೆದು ಸರಯೂನದಿ ಪಶ್ಚಿಮ ಮುಖಿಯಾಗಿ ಹರಿವ ಸ್ಥಳಕ್ಕೆ ರಾಮನು ಬಂದನು; ರಾಮನ ಸುತ್ತುವರೆದ ಜನರು ಮನಿಗಳು ವಾನರರು, ಜೀವಿಗಳು ನದಿದಡದಲಿ ನಿಂತವು; ಗಗನದಿಂದ ಪುಷ್ಪವೃಷ್ಠಿ ನಡೆಯಿತು, ರಾಮನ ಆಗಮನ ರಾಮನ ಆಗಮನವನ್ನು ಸಂತೋಷದಿಂದ ದೇವತೆಗಳು ವೀಕ್ಷಿಸಿಸುತಿದ್ದರು; ಸಂಗೀತ ವಾದ್ಯಗಳ ಇಂಪಾದ ಸ್ವರದಿಂದ ವಾತಾವರಣ ತುಂಬಿತ್ತು, ಎತ್ತ ನೋಡಿದು ಹರುಷ; ಬ್ರಹ್ಮಲೋಕದಿಂದ ಅಶರೀರವಾಣಿ ಕೇಳಿಸಿತು “ಅಜಾನುಬಾಹು ರಘುವಂಶ ರಾಮನಿಗೆ ಸ್ವಾಗತ, ರಾಮನ ಸಹೋದರರಿಗೆ ಸ್ವಾಗತಾ, ರಾಮನೊಂದಿಗೆ ಆಗಮಿಸುವ ಸಕಲ ಜೀವಿಗಳಿಗೆ ಸ್ವಾಗತಾ”. ರಾಮನೊಂದಿಗೆ ಎಲ್ಲರೂ ಗೋಪ್ರತರಕ ಘಾಟದಲ್ಲಿ ಇಳಿದರು ಸರಯೂ ನದಿಯಲಿ ತಮ್ಮ ಪ್ರಾಣ ಅರ್ಪಿಸಿದರು, ಎಲ್ಲರೂ ಬ್ರಹ್ಮಸತ್ವದಲಿ ಲೀನವಾದರು, ತಮ್ಮ ಮೂಲ ಆಲಯ ಬ್ರಹ್ಮಲೋಕ ಸೇರಿದರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌.