ಪ್ರಾಣ ಪ್ರತಿಷ್ಠಾಪನೆ

By admin

ಕವಿ:-ಆನಂದ ಗೊಬ್ಬಿ

ಪ್ರಾಣ ಬಂತೇ…?
ಉಸಿರಾಡಿತ್ತೇ…?
ಕೊಡಿ ಪ್ರಾಣ ಕೊಡುವುದಾದರೆ

ಎಷ್ಟೋ ಕಾಮುಕರ ಕಣ್ಣಿಗೆ
ಬಲಿಯಾಗಿ
ಜಗವ ನೋಡುವ ಮುಂಚೆ
ಮುಚ್ಚಿದ ಕಣ್ಣಿಗೆ
ಕೊಡಿ ಪ್ರಾಣ ಕೊಡುವುದಾದರೆ

ಸಿಡಿಗುಂಡಿಗೆ ಮಲಗಿದ
ಯೋಧನ ಉಸಿರಿಗೆ,
ಎಳೆ ಕೂಸು ಅಪ್ಪಾ
ಎನ್ನುವ ಬಯಕೆಯಾದರು ಈಡೇರಿತು
ಕೊಡಿ ಪ್ರಾಣ ಕೊಡುವುದಾದರೆ

ವಾಹನ ಚಕ್ರದ ಅಡಿಗೆ
ಪ್ರಾಣತ್ತೆತ ಹಸಿರು ನೆರಳಿಗೆ,
ಕುಟುಂಬದ ಆಸರೆಗೆ
ನಿಂತ ಒಣ ಕಂಬಕ್ಕೆ
ಕೊಡಿ ಪ್ರಾಣ ಕೊಡುವುದಾದರೆ

ಅಷ್ಟೇ ಯಾಕೆ
ದಿವಂಗತರಾದ ನಿಮ್ಮ‌
ಮನೆ ಮಂದಿಗೆ
ಕೊಡಿ ಪ್ರಾಣ ಕೊಡುವುದಾದರೆ

ಶತ ಸಿದ್ಧಿ ಪುರುಷರು
ಕೈಯಾಕಲಿ
ಸಾಧ್ಯವಾದರೆ
ಅಜ್ಞಾನವೇ ವಿಜ್ಞಾನವೇ
ಬೀಳಲಿ ಬಯಲಿಗೆ

ಎಲ್ಲೋ ಕಲಾವಿದನ ಕೈಯಲ್ಲರಳಿದ
ಶಿಲೆಗೆ ನಿರೇರಚಿದರೆ ಸಾದ್ಯವಾದಿತ್ತೆ
ಉಸಿರಾಡಿತ್ತೇ?
ಪ್ರತಿಷ್ಠಾಪನವಾದಿತ್ತೇ…?

ಕವಿ:-ಆನಂದ ಗೊಬ್ಬಿ