
ಲೇಖಕರು-ಶ್ರೀಶೈಲ ಬಿರಾದಾರ ನಾಗನಟಿಗಿ.
ಭಾರತ ದೇಶದ ಅಧೀಕೃತ ಇತಿಹಾಸ ಆರಂಭವಾಗುವದು ಹರಪ್ಪ ಮತ್ತು ಮೇಂಜೋದ್ದಾರ್ ನಾಗರಿಕತಿಯಿಂದ ಅದಕ್ಕಿಂತ ಮುಂಚಿನ ಇತಿಹಾಸಕ್ಕೆ ಸಾಕಷ್ಟು ಆಧಾರಗಳು ಲಭ್ಯವಿಲ್ಲದ ಕಾರಣ ಹರಪ್ಪ ಮತ್ತು ಮೇಂಜೊದ್ದಾರ ನಾಗರಿಕತೆಗಳಿಂದಲೆ ನಮ್ಮ ಅಧಿಕೃತ ಇತಿಹಾಸ ಆರಂಭವಾಗುವದು.
ರಾಮಾಯಣವು ಮಹರ್ಷಿ ವಾಲ್ಮೀಕಿ ಗುರುಗಳು ಒಂದು ಆಧರ್ಶ ಸಮಾಜದ ಕಲ್ಪನೆಯೊಂದಿಗೆ ರಚಿಸಿದ ಒಂದು ಮಹಕಾವ್ಯವಾಗಿದೆಯ ವಿನಹ ಅದು ಐತಿಹಾಸಿಕ ಕೃತಿಯಲ್ಲಾ ಎನ್ನುವವರು ಇದ್ದಾರೆ ಆಗೆಯೇ ಇದಕ್ಕೆ ತದ್ದ ವಿರುದ್ಧವಾಗಿ ರಾಮಾಯಣ ಐತಹಾಸಿಕ ಕೃತಿ ಶ್ರೀ ರಾಮಚಂದ್ರ ಇತಿಹಾಸ ಪುರಷ್ಯ ಎನ್ನುವ ಜನರು ಇದ್ದಾರೆ, ಅದರ. ಬಗ್ಗೆ ವಿಸ್ತುರುತ ಚರ್ಚೆ ಇಲ್ಲಿ ಬೇಡ ಆ ವಿಷಯದ ಬಗ್ಗೆ ಅಧ್ಯಯನ ನಡೆದು ಸಂಶೋಧನೆ ಆಗಿ ನಿರ್ದಾರ ಆಗಲಿ ಅಲ್ಲಿಯವರೆಗೆ ನಾವು ಆ ವಿಷಯ ಸಂಶೋದನೆಯ ಮಟ್ಟದಲ್ಲಿ ಚರ್ಚೆಯಾಗಲಿ,
ಅರಸ್ತೊತ್ತಿಗೆಯಲ್ಲಿ ರಾಜ ಶ್ರೀರಾಮಚಂದ್ರನು ಮರೆಯಲ್ಲಿ ನಿಂತು ವಾಲಿಯನ್ನು ಕೊಂದದ್ದು ಕ್ಷೇತ್ರೀಯ ಧರ್ಮ ಯುದ್ಧ ನೀತಿಗೆ ವಿರುದ್ಧವಾದ್ದು ಮತ್ತು ಶೂದ್ರ ಶಂಬುಕನನ್ನು ಕೊಂದದ್ದು ಸಹ ರಾಜ್ಯ ಧರ್ಮಕ್ಕೆ ವಿರುದ್ಧವಾದ್ದಾಗಿದೆ,ಈ ಘಟನೆಗಳು ಶ್ರೀ ರಾಮ ಚಂದ್ರನನ್ನು ಅಪರಾಧಿಸ್ಥಾನದಲ್ಲಿ ನಿಲ್ಲಿಸ್ತುವೆ? ಇವುಗಳೊರತು ಪಡಿಸಿ ಪಿತೃವಾಕ್ಯ ಪರಿಪಾಲನೆ, ಏಕಪತ್ನಿತ್ವ, ಸಹೋದರ ಸಂಬಂಧ ಹೀಗೆ ಸಾಕಷ್ಟು ಆಧರ್ಶವಾದ ಮೌಲಿಕ ಗುಣ ಸಂಪನ್ನಗಳನ್ನೊಂದಿದ ಪಾತ್ರದಾರಿ ಶ್ರೀರಾಮಚಂದ್ರ, ಈ ಆಧರ್ಶ ಗುಣಸಂಪನ್ನ ರಾಮನನ್ನು ಪೂಜಿಲು ಆರಾಧಿಸಲು ಗೂಡಿಯಕಟ್ಟಲು ಯಾರ ವಿರೋಧವು ಇಲ್ಲಾ ಹೀಗಾಲೆ ಈ ದೇಶದ ಉದ್ದಗಲಕ್ಕೂ ಸಾಕಷ್ಟು ರಾಮಮಂದಿರಗಳಿವೆ ಆದರೆ ಅಯೋದ್ಯಯ ಈ ರಾಮಂದಿರ ನೋಡಿ ಸ್ವತಃ ಪ್ರಭು ಶ್ರೀ ರಾಮಚಂದ್ರನೆ ನಗುತ್ತಿರ ಬೇಕು.
ದೇವರೆಂದ್ರೆ ಕರುಣಾಮಹಿ ದೇವರು ಯಾರಿಗೂ ಕೆಟ್ಟದ್ದನ್ನು ಬಯಸುವದಿಲ್ಲಾ, ಅಂತದ್ದರಲ್ಲಿ ಹಿಡಿ ಒಂದು ಸಮುದಾಯ ಒಂದು ಧರ್ಮದ ಜನರಿಗೆ ನೋವನ್ನು ಕೊಡುವ ಕೆಲಸ ಯಾವ ದೇವರು ಮಾಡಲಾರ ಮಾಡುವವರನ್ನು ಸಹಿಸುವದುಯಿಲ್ಲಾ,
ಅರಸೊತ್ತಿಗೆಯ ಕಾಲದಲ್ಲಿ ಸರ್ವಾಧಿಕಾರಿ ಬಾಬರ್ ನಿಜವಾಗಿ ರಾಮ ಮಂದಿರವನ್ನು ಕೆಡವಿ ಮಜೀದಿ ಕಟ್ಟಿದ್ದು ತಪ್ಪು ಏನ್ನುವದಾದರೆ , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಕಾನೂನುನ್ನು ದಿಕ್ಕರಿಸಿ ಉಲ್ಲಂಘನೆ ಮಾಡಿ ಮಜೀದಿ ಕೆಡುವಿದ್ದು ತಪ್ಪೆಂದು ಅನಿಸುವದಿಲ್ಲವೆ?
ಈ ದೇಶದ ಸರ್ವೋಚ್ಚ ನ್ಯಾಯಲಯವು ತಪ್ಪು ಒಪ್ಪಗಳನ್ನೊತ್ತಟ್ಟಿಗಿಟ್ಟು ಈ ದೇಶದ ಕೋಟ್ಯಾಂತರ ಭಾವನೆಗಳಿಗೆ ಬೆಲೆಕೊಟ್ಟು ಮಂದಿರ ನಿರ್ಮಿಸಲು ಅನುಮತಿ ನೀಡಿದ್ದು ಅದನ್ನು ಈ ದೇಶದ ಸರ್ವ ಜನರು ಸ್ವಾಗತಿಸಿ ಶಾಂತಿಯನ್ನು ಕಾಪಡಿದ್ದು ಬಾಬಾ ಸಾಹೇಬರ ಸಂವಿಧಾನದ ಅಡಿಯಲ್ಲಿ ಎನ್ನುವದು ನೆನಪಿನಲ್ಲಿಟ್ಟುಕೊಳ್ಳಬೇಕು,
ಮಂದಿರ ನಿರ್ಮಾಣಕ್ಕೆ ಈ ದೇಶದ ಎಲ್ಲಾ ಜಾತಿ ಧರ್ಮಿಯ ಜನರು ಕಾಣಿಕೆಯನ್ನು ಕೊಟ್ಟಿದ್ದಾರೆ ದೇಹಿಕ ಶ್ರಮವನ್ನು ವಹಿಸಿದ್ದಾರೆ,ಆದರೆ ಮಂದಿರದ ನಿರ್ಮಾಣವಾದ ಮೇಲೆ ಪ್ರವೇಶದ ಪ್ರಾಣಪ್ರತಿಷ್ಠಾಪನದ ಕಾರ್ಯದ ಗರ್ಭ ಗೂಡಿಯಲ್ಲಿ ಯಾರಿದ್ದಾರೆ?
ರಾಮನ ಹಿಂದುರಾಷ್ಟ್ರದಲ್ಲಿ ಕಲ್ಲು ಮಣ್ಣು ಹೊತ್ತು ಗೂಡಿಯ ಕಟ್ಟಲು ಎಲ್ಲಾ ಜಾತಿಯವರು ಬೇಕು,ಕಟ್ಟಿದ ಮೇಲೆ ಒಂದು ಜಾತಿಯವರು ಮಾತ್ರ ಗರ್ಭಗುಡಿಯಲ್ಲಿ ಪೂಜೆ ಪುನಸ್ಕಾರಗಳು ಮಾಡಬೇಕು ಉಳಿದವರು ಹೊರಗಡೆಯೆ ಕೆಲಸಗಳೆ ಮಾಡಬೇಕು ಇದು ಈ ದೇಶದ ಬಹುತೇಕ ಮಂದಿರಗಳ ಕಥೆಯಾಗಿದೆ ಮುಂದೆ ಅಯೋದ್ಯ ರಾಮ ಮಂದಿರದ ಕಥೆಯು ಇದಕ್ಕಿಂತ ಬಿನ್ನವಾಗಿಯೆನು ಇರಲಾರದು,
ದಯವಿಲ್ಲದ ಧರ್ಮ ಯಾವುದು
ದಯವಿರಬೇಕು ಸಕಲ ಪ್ರಾಣಿಗಳಲ್ಲಿ,
ದಯವೇ ಧರ್ಮದ ಮೂಲವಯ್ಯಾ ಎಂದ ಬಸವಾದಿ ಶಿವಶರಣರ ಧರ್ಮ ನಮ್ಮದಾಗಬೇಕು,ರಾಜ ಪ್ರಭುತ್ವದ ಕಾಲದಲ್ಲಿ ಪ್ರಜಾಪ್ರಭುತ್ವದೆಡಗೆ ಜನರನ್ನು ಮುನ್ನಡಿಸಿದ ಗುರು ಬಸವಣ್ಣನು ಆಧರ್ಶನಾಗಬೇಕು, ಬಸವ ಧರ್ಮದ ಆಶೆಯಗಳು ಈ ದೇಶದ ಜನಸಾಮಾನ್ಯರ ಆಶೆಯವಾಗಿದೆ,
ಆ ಪ್ರಾಣಿ ಶ್ರೇಷ್ಠ ಈ ಪ್ರಾಣಿಕೀಳೆಂದು ಪ್ರಾಣಿಪಕ್ಷಿಗಳಿಗಿಂತಲು ಈ ನೆಲದ ಜನರನ್ನು ಕೀಳಾಗಿ ನಡೆಸಿಕೊಳ್ಳುವ ಧರ್ಮ ಧರ್ಮವೆ?
ಇವನಾರವ ಇವನಾರವನೆನ್ನದೆ
ಇವನಮ್ಮವ ಇವನಮ್ಮವನೆಂದು ಎಲ್ಲರನ್ನಪ್ಪಿಕೊಂಡ ಬಸವಣ್ಣನ ಧರ್ಮಕ್ಕಿಂತ ಮಿಗಿಲಾವುದು ಧರ್ಮವಯ್ಯಾ,
ಐತಿಹಾಸಿಕ ಪುರಷ್ಯ ಬಸವಣ್ಣ ಪ್ರಚಾರ ಮಾಡಿದ ಸರ್ವರನ್ನೊಳಗೊಂಡ ಸರ್ವರರ ಹೇಳಿಗೆ ಬಯಸಿದ ಬಸವ ಧರ್ಮವೆ ಮಾಡಲು ಬಿಡದೆ, ಮೇಲು ಕೀಳು ತಾರತಮ್ಯದ ಮನು ಧರ್ಮದಲ್ಲಿ ರಾಮನನನ್ನಿಟ್ಟು ಕೊಂಡು ಸರ್ವಜನಾಂಗವನ್ನಪ್ಪಿಕೊಂಡ ಬಸವನ ಬದಿಗೆ ಸರಿಸಿ ಒಟಿನ ರಾಜಕಾರಣಕ್ಕೆ ಧರ್ಮ ಮತ್ತು ರಾಮನನ್ನು ಅಡ್ಡ ತರುವದೆಕೆ?
ಕವಿ ಮಹರ್ಷಿ ವಾಲ್ಮೀಕಿಯ ಕಟ್ಟಿದ ಕಾವ್ಯದ ರಾಮನು ಆಧರ್ಶ ರಾಮನೊ ಐತಿಹಾಸಿಕನೋ ಅಥವಾ ಕಾಲ್ಪನಿಕನೋ ಎನ್ನುವದು ಮತ್ತು ರಾಮನ ಲೋಪ ದೋಷಗಳನ್ನು ಬಿಟ್ಟು ರಾಮನ ಆಧರ್ಶಗಳು ಪಾಲಿಸ ಬೇಕಿದೆಯೆ ವಿನಹ ರಾಮನೆಸರಿನಲ್ಲಿ ಸಾಮರಷ್ಯ ಕೆಡಿಸಿ ಭಾವನಾತ್ಮಕವಾಗಿ ಜನರನ್ನು ಪ್ರಚುಗೊಳಿಸಿ ರಾಜಕೀಯ ಲಾಭಕ್ಕೆ ರಾಮನನ್ನು ವಾಲ್ ಪೋಸ್ಟರಾಗಿ ಬಳಸಿಕೊಳ್ಳುವದು ಸರಿಯಲ್ಲಾ,
ಪ್ರಧಾನ ಮಂತ್ರಿಗಳು ದೇಶದ ಸರ್ವ ಜನರ ಪ್ರಧಾನಿಯಾಗಿದ್ದರು ಅವರು ಒಂದು ಪಕ್ಷದ ಸದಸ್ಯರಾಗಿರುತ್ತಾರೆ, ರಾಮಮಂದಿರ ಪ್ರತಿಯೊಂದುಕ್ಕೂ ಮುಂಚುಣಿಯಲ್ಲಿ ನಿಲ್ಲುವದೆಷ್ಟು ಸರಿ,ಪಕ್ಷಾತೀತವಾಗಿರುವ ಯಾವ ಪಕ್ಷದ ಸದಸ್ಯರಾಗಿರದ ರಾಷ್ಟ್ರಪತಿಗಳು ಯುಗ ಪುರಷ್ಯ ರಾಮನ ಮಂದಿರ ವಿಷಯದಲ್ಲಿ ಸಮಿಪವು ಬಿಟ್ಟಕೊಳ್ಳದಿರುವದು ಯಾಕೆ?
ಈ ದೇಶದ ಸಂವಿಧಾನಕಿಂತ ದೊಡ್ಡದು ಯಾವುದು ಸಂವಿಧಾನದತ್ತ ಹುದ್ದೆಯನ್ನು ಮರೆತು ಒಂದು ಪಕ್ಷದ ಒಕ್ಕತ್ತಾರು ಸರ್ವಜನಾಂಗದ ಯುಗ ಪುರಷ್ಯ ರಾಮನ ಮಂದಿರ ಉದ್ಘಾಟನೆಯನ್ನು ಪೂರ್ಣಗೊಳ್ಳದ ಅಪೂರ್ಣ ಮಂದಿರದಲ್ಲಿ ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವದು, ದೇವರಗೆ ಮಾನವನಿಂದ ಪ್ರಾಣ ಪ್ರತಿಷ್ಠಾಪನೆ ಮಾಡುವದು,ದೇವರು ಮಾನವನಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾನೆ, ನಾವೇಗೆ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲು ಸಾದ್ಯ,
ರಾಮನ ಈ ದೇಶದಲ್ಲಿ ಆ ಪ್ರಾಣ ಪ್ರತಿಷ್ಠಾಪನೆ ಗೊಂಡ ದೇವರುಗಳು ಇಸ್ಲಾಂ ದೊರೆಗಳು ದಾಳಿಮಾಡಿ ಹೊಡೆದು ಹಾಕುವಾಗ ಎಲ್ಲಿಗೆ ಹೋರಟು ಹೋಗಿದ್ದವು, ಆಗೆಯೆ ಮಸೀದಿಯನ್ನು ಹೊಡೆದು ಹಾಕುವಾಗ ಆ ಅಲ್ಲಾಹನು ಸಹ ಎಲ್ಲಿ ಹೋಗಿದ್ದನು ಎನ್ನ ಬಹುದು ಅದಕ್ಕಾಗಿಯೆ ನಮ್ಮ ಬಸವಾದಿ ಶಿವ ಶರಣರು ಕಾಯಕದೊಳಗೆ ದೇವರನ್ನು ಕಂಡವರು ದುಡಿಮೆಯೆ ದೇವರೆಂದರು,ದಯವೆ ದೇವರೆಂದವರು, ಮಹ್ಮದ ಗಜ್ನಿ ಸೋಮನಾಥ ಶಿವಲಿಂಗವನ್ನು ಹೊಡೆಯುವಾಗ ಅವನ ವಿರುದ್ಧ ಪ್ರತಿದಾಳಿಯನ್ನು ಮಾಡದೆ ನಮ್ಮ ದೇವರು ರಕ್ಷಿಸುವನೆಂದು ಭಜನೆಯ ಮಾಡುತ್ತಕುಳಿತರು ಅವ ಕೊಳ್ಳೆ ಹೊಡೆದುಕೊಂಡು ಹೋರಟೊದನು,
ಹೀಗಾಗಿ ನಮ್ಮ ಬಸವಾದಿ ಶಿವಶರಣರು ತಮ್ಮ ಕಾಯಕದಲ್ಲಿ ನಂಬಿಕೆ ಇಟ್ಟುಕೊಂಡು ದುಡಿದರು ಬಸವ ಧರ್ಮದಲ್ಲಿ ಸಮತೆಯಿಂದ ಬಾಳುತ್ತಿದ್ದರು ಸಹಿಸಿಕೊಳ್ಳಲಾಗದ ಈ ಮನುವಾದಿ ಧರ್ಮದ ಪರುಹೋಹಿತ ಶಾಹಿಗಳು ಜನರೆದೆಯಲ್ಲಿ ಜಾತಿ ಬೆದವೆತ್ತಿಕಟ್ಟಿ ಬಸವಾದಿ ಶಿವಶರಣರ ಕಗ್ಗೊಲೆಗೆ ಕಾರಣರಾಗಲಿಲ್ಲವೆ?
ಇಂದು ರಾಜಕಾರಣಿಗಳು ತಮ್ಮ ಅಧಿಕಾರದ ಅಪಾಪಿಯಿಂದಾಗಿ ಜನರೆದೆಯೊಳಗೆ ಹುಸಿ ಧರ್ಮ ದೇಶಭಕ್ತಿಯ ಹೆಸರಲ್ಲಿ ವಿಷ ಬೀಜಗಳು ಬಿತ್ತುತ್ತಿಯರು ಅವು ಬೆಳೆದು ಫಲಬಿಟ್ಟರೆ ದೇಶದ ಗತಿ ಏನಾಗ ಬಹುದೆಂಬ ಕೊಂಚ ಆಲೋಚನೆಯು ಇಲ್ಲದ ಈ ಜನರು ಪ್ರಜಾಪ್ರಭುತ್ವವನ್ನು ಮತ್ತೆ ಅರಸೊತ್ತಿಗೆಯಡೆಗೆ ಕರೆದೊಯುತ್ತಿರುವದು ಸ್ವಾತಂತ್ರ್ಯಕ್ಕಾಗಿ ಹೋರಾಡಿಗಳಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದವರಾತ್ಮಗಳು ಮಮ್ಮಲ ಮರಗುತ್ತಿರಬೇಕು,
ಮಂದಿರ ನಿರ್ಮಾಣಕ್ಕೆ ಕಾರಣಿ ಬೂತವಾದದ್ದು ಈ ದೇಶದ ಪ್ರಜಾಪ್ರಭುತ್ವದ ಆಡಳಿತ ಗ್ರಂಥ ಸಂವಿಧಾನವಾಗಿದೆ ಈ ದೇಶದ ಸಂವಿಧಾನ ರಚಿಸುವಾಗ ರಾಷ್ಟಪಿತ ಮಹಾತ್ಮಗಾಂಧಿ ಸೇರಿದಂತೆ ಬಹುದೊಡ್ಡ ಮೇದಾವಿಗಳು ಬ್ರಾಹ್ಮಣ ಮತ್ತು ಮೇಲ್ವರ್ಗದ ಜನಾಂಗದಲ್ಲಿದ್ದರು ಆದರು ಸಹ ಅಸ್ಪೃಶ್ಯ ಜಾತಿಯ ಅಂಬೇಡ್ಕರ್ ರವರಿಗೆ ಈ ದೇಶದ ಸಂವಿಧಾನ ಬರೆಯು ಕೇಲಸ ಯಾಕೆ ಕೊಟ್ಟರು ಎನ್ನುವದು ಒಂದು ಚೂರು ಯೋಚಿಸ ಬೇಕಲ್ಲವಾ? ಆರ್ಯರ ಆಗಮನಕ್ಕಿಂತ ಮುಂಚೆ ದ್ರಾವಿಡ ದೇಶವಾದ ಈ ನಾಡು ಅವರಾಗಮನದಿಂದ ಕಾಲನಂತರದಲ್ಲಿ ಯೂರೊಪಿಯನ್ನರ ಆಗಮನದಿಂದ ಎಲ್ಲರೂ ಅನುಸಂದಾನ ಗೊಂಡು ಎಲ್ಲಾ ಜಾತಿ ಧರ್ಮಗಳ ಬಿಡಾಗಿರುವ ಈ ದೇಶಕ್ಕೆ ಅಂಬೇಡ್ಕರ್ ಹೊರತು ಪಡಿಸಿ ಯಾರೆ ಸಂವಿಧಾನ ಬರೆದರು ಅದು ಇಷ್ಟೊಂದು ಜನಪ್ರಿಯ ಮತ್ತು ಸುಭದ್ರವಾಗಿರುತ್ತಿರಲಿಲ್ಲಾ,ಇದಕ್ಕೆನಾದರು ಅನುಮಾನವಿದ್ದರೆ ಅಂಬೇಡ್ಕರ್ ರವರೆ ಹೇಳಿದಂತೆ ಸಂವಿಧಾನ ರಚನಾ ಸಭೆಯ ನಡವಳಿಗಳನ್ನು ಓದಿಕೊಳ್ಳಿರಿ,
ನನಗಿರು ಸಿಮಿತ ಜ್ಞಾನದ ಪರದಿಯಲ್ಲೆ ಹೇಳಲಾದ ಈ ನನ್ನ ಅಭಿಪ್ರಾಯಗಳಲ್ಲಿ ಏನಾದರು ತಪ್ಪಗಳಿದ್ದರೆ ದಯ ಮಾಡಿ ಹೇಳಿರಿ ನನ್ನ ಜ್ಞಾನ ಹೃದ್ದಿಗೆ ಸಹಕಾರಿಯಾಗಿರಿ , ಶತಶತಮಾನಗಳಿಂದ ಈ ಪುರೋಹಿತರು ಸೃಷ್ಟಿಸಿದ ರಾಮನ ಗೂಡಿ ಸೇರಿದಂತೆ ಮೂಕ್ಕೊಟಿ ದೇವರಗಳ ಗೂಡಿಯ ಕಟ್ಟಿ ಕುರಿ ಕೋಣಗಳ ಕಡಿದು ದೇವರು ಮಾಡಿದ್ದೆವೆ ಆದರೆ ಯಾವ ದೇವರು ನಮಗೆ ಜ್ಞಾನವನ್ನು ಕೊಡಲಿಲ್ಲಾ, ಬದುಕ ಕಟ್ಟಲಿಲ್ಲಾ ಆದರೆ ಡಾಕ್ಟರ್ ಬಾಬಾ ಸಾಹೇಬರ ಸಂವಿಧಾನ ಕಟ್ಟಿದ ಶಾಲೆಗಳು ನಮಗೆ ಜ್ಞಾನ ಕೊಟ್ಟಿವೆ ಬದುಕೊಟ್ಟಿದೆ, ಹೀಗಾಗಿ ಈ ದೇಶದ ಸಾಮಾನ್ಯ ಜನರಿಗೆ ನಿಜವಾಗಿ ಬೇಕಾಗಿರುವದು ರಾಮರಾಜ್ಯವಲ್ಲಾ ಭೀಮರಾಜ್ಯವು.
-ಶ್ರೀಶೈಲ ಬಿರಾದಾರ ನಾಗನಟಿಗಿ.
