
ಕಲಬುರಗಿ: ಹೈದ್ರಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ವತಿ ಯಿಂದ ” ಭಾರತ ಪ್ರವಾಸೋದ್ಯಮ ದಿನಾಚರಣೆ ” ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮ ದಲ್ಲಿ ಮುಖ್ಯ ಅಥಿತಿಗಳಾಗಿ ಡಾ.ಶಿವುಕುಮಾರ ಉಪ್ಪೆ ಪ್ರಾಧ್ಯಾಪಕರು, ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ರು G F G C ಬೀದರ್. ಆಗಮಿಸಿ ನಮ್ಮ ರಾಷ್ಟ್ರೀಯ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಪ್ರವಾಸಿ ತಾಣಗಳನ್ನು ಪ್ರವಾಸಿ ಸ್ನೇಹಿಯನ್ನಾಗಿ ಮಾಡುವ ಮೂಲಕ ಅವುಗಳ ಸೌಂದರ್ಯವನ್ನು ಕೆಡದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಹೊಣೆ ಎಂದು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷತೆ ಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ರಾದ ಡಾ. ಆರ್. ಬಿ. ಕೊಂಡ ಸರ್ ರವರು ವಹಿಸಿಕೊಂಡರು. ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸುಭಾಶ್ಚಂದ್ರ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಶ್ರೀಮತಿ ಶಿವಲೀಲಾ ಡಿ. ಡಾ. ಮಹೇಶ್ ಗೌವರ. ಡಾ. ಪ್ರೇಮ್ ಚಂದ್. ಚವ್ಹಾಣ್. ಶರಣಪ್ಪ ಮುಸ್ಥಳಿ.
ಡಾ.V. ದೇವರಮನಿ. ಡಾ. ಜ್ಯೋತಿ ಪ್ರಕಾಶ. ಡಾ. ಸವಿತಾ. ಬೋಧಕ ಸಿಬ್ಬಂದಿ ಮತ್ತು ಬೋಧೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕುಮಾರಿ ಗೌರಿ ಭಾವಿಕಟ್ಟಿ ಎಲ್ಲರನ್ನು ವಂದಿಸಿದರು.
ಕುಮಾರಿ ಸುಮಾ ದಂಡಿನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು.
