
ಇಂದು ರಾಷ್ಟ್ರದ್ಯoತ ಗಾಂಧೀಜಿಯವರ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.ಗಾಂಧೀಜಿಯವರು ಒಬ್ಬ ಪ್ರಾಂತಿಯ, ರಾಷ್ಟೀಯ ನಾಯಕ ರಲ್ಲ, ಬದಲಾಗಿ ಅವರೋಬ್ಬ ಜಾಗತಿಕ ನಾಯಕರಾಗಿ ಗುರುತಿಸಲ್ಪಟ್ಟಿದ್ದು, ಜಗತ್ತಿನದ್ಯಂತ ಅವರ ಪುಣ್ಯಸ್ಮರಣೆಯ ಆಚರಣಗೆ ಕಾರಣವಾಗಿದೆ. ಗಾಂಧೀಜಿಯವರನ್ನು ವಿವಿಧ ದೃಷ್ಟಿಕೋನಗಳ ಮೂಲಕ ವಿಮರ್ಶಿಸಿದಾಗ ಅವರು ನೀಡಿದ ಕೊಡುಗೆಗಳು ಅನಾವರಣಗೊಳ್ಳುತ್ತವೆ. ಇಂತಹ ಮಹಾನ್ ಚೇತನವನ್ನು ಸಮಾಜವಾದಿ, ಸಮತಾವಾದಿ, ಆದರ್ಶವಾದಿ ಪ್ರಖರ ಅಹಿಂಸಾವಾದಿ ನಿರೂಪಕ, ವೈಚಾರಿಕವಾದಿ ಎನ್ನುವ ನೆಲೆಗಳಿಂದ ಅವರನ್ನು ಅರ್ಥಮಾಡಿಕೊಳ್ಳಬೇಕಿದೆ. ಹಾಗಾದಾಗ ಮಾತ್ರ ಗಾಂಧೀಜಿಯವರ ಆಂತರ್ಯದ ವಿಚಾರಧಾರೆಗಳು ಸಮಾಜಕ್ಕೆ ದೊರಕಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಮೊಟ್ಟಮೊದಲ ವ್ಯಕ್ತಿಯಾಗಿ ಶಾಂತಿ ಮತ್ತು ಅಹಿಂಸೆಗೆ ವಿಶೇಷವಾದ ಸ್ಥಾನ ಮತ್ತು ಅದಕ್ಕಿರುವ ಮಹತ್ವದ ಬಗ್ಗೆ ಸಾರಿದಾತ. ಹೀಗೆ ಗಾಂಧೀಜಿಯವರಲ್ಲಿರುವ ಅನೇಕ ವಿಚಾರಧಾರೆಗಳು ಮುನ್ನೆಲೆಗೆ ಬರಬೇಕಿದೆ. ಹಾಗಾದಾಗ ಮಾತ್ರ ಸಮಾಜದಲ್ಲಿ ಚಾಲ್ತಿಯಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಬದುಕಿನುದ್ದಕ್ಕೂ, ಆಡಂಬರ, ಹಣ, ಅಂತಸ್ತು, ಐಶ್ವರ್ಯಗಳಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡದೆ, ಸರಳವಾಗಿ, ನೀರಾಳವಾಗಿ, ಆದರ್ಶಪ್ರಾಯಾರಾಗಿ ಬದುಕಿದ ವ್ಯಕ್ತಿಯಾಗಿ ಗಾಂಧೀಜಿಯವರು ಗುರುತಿಸಿಕೊಳ್ಳುತ್ತಾರೆ. ದೀನ ದಲಿತರ, ಅಶಕ್ತರ, ಸಮಾಜದ ಮುಖ್ಯವಾಹಿನಿಯಿಂದ ದುರವುಳಿದ ಅನೇಕ ಸಮುಧಾಯಗಳಿಗೆ ಆಶಾಕಿರಣವಾಗಿ ಗೋಚರಿಸಿದ ಗಾಂಧೀಜಿಯವರು, ಇಂತಹ ಸಮುದಾಯಗಳ ನ್ಯಾಯಯುತ ಹಕ್ಕುಗಳನ್ನು ಪ್ರತಿಪಾದಿಸಿದವರಾಗಿದ್ದಾರೆ. ಹೀಗೆ ಬದುಕಿನ್ನುದ್ದಕ್ಕೂ ಅನೇಕ ಅವಿಸ್ಮರಣೀಯ ಕಾರ್ಯಗಳ ಮೂಲಕ ಇವತ್ತಿಗೂ ಅಚ್ಚಳಿಯದ ಗುರುತಿಸಿಕೊಂಡಂತಹ ವ್ಯಕ್ತಿಯಾಗಿದ್ದಾರೆ.
ಜಾಗತಿಕರಣವು ಇಂದು ಎಲ್ಲಾ ವಲಯಗಳನ್ನು ಆವರಿಸಿದೆ. ಪರಿಣಾಮವಾಗಿ ಇಂದು ಸಾಮಾಜಿಕ ಚಿಂತಕರ ಕೊಡುಗೆಗಳು ಬಹುಮುಖಿಯಾಗಿ ಚರ್ಚೆಗೋಳಪಡುತ್ತಿಲ್ಲ, ಹಾಗಾಗಿ ಅನೇಕ ಚಿಂತಕರ ಕೊಡುಗೆಗಳು ಮುನ್ನೆಲೆಗೆ ಬಂದು ಅರ್ಥಪೂರ್ಣ ಸಂವಾದಗಳು ನಡೆಯುತ್ತಿಲ್ಲ. ಈ ರೀತಿಯ ಸನ್ನಿವೇಶಗಳು ಮೌಲಿಕವಾಗಿ ರಾಷ್ಟ್ರವನ್ನು ಕಟ್ಟುವ ಪ್ರಕ್ರೀಯೆಗಳಿಗೆ ಅಡೆತಡೆಯನ್ನು ಉಂಟುಮಾಡುತ್ತವೆ. ಒಂದು ರಾಷ್ಟ್ರವು ವೈಚಾರಿಕವಾಗಿ ಗಟ್ಟಿಯಾದಾಗ ಮಾತ್ರ ಅದು ಬದಲಾವಣೆಗಳಿಗೆ ಒಡ್ಡಿಕೊಂಡು ಅಭಿವೃದ್ಧಿಯ ಕಡೆ ಮುಖ ಮಾಡಲು ಸಾಧ್ಯವಾಗುತ್ತದೆ. ಈ ದೆಸೆಯಲ್ಲಿ ಗಾಂಧೀಜಿಯವರ ಕೊಡುಗೆಗಳು ಹೆಚ್ಚು ಹೆಚ್ಚು ಪ್ರಸ್ತುತವಾಗುತ್ತವೆ. ಗಾಂಧೀಜಿಯವರನ್ನು ಇಂದಿನ ಯುವ ಸಮುದಾಯ ಬಹುವಾಗಿ ಅರ್ಥಮಾಡಿಕೊಳ್ಳಬೇಕಿದೆ. ಗಾಂಧೀಜಿಯವರನ್ನು ಕೇವಲ ಸ್ವತಂತ್ರ ಹೋರಾಟದ ಮುಂದಾಳು ಎಂದು ಗ್ರಹಿಸದೆ, ರಾಷ್ಟವನ್ನು ರಚನಾತ್ಮಕವಾಗಿ ಕಟ್ಟಲು ಶ್ರಮಿಸಿದ ಒಬ್ಬ ದೂರಗಾಮಿ ಚಿಂತಕ ಎಂದು ಅರ್ಥಮಾಡಿಕೊಳ್ಳಬೇಕಿದೆ. ಅವರ ಅನೇಕ ಚಿಂತನೆಗಳು, ಹೋರಾಟಗಳು ಇಂದಿನ ಯುವಸಮುದಾಯಕ್ಕೆ ಮಾದರಿಯಾಗಬೇಕಿದೆ. ಅವರ ಗ್ರಾಮೀಣ ಸಮಾಜದ ಕುರಿತಾದ ಚಿಂತನೆ, ಸಮಗ್ರ ಸಮಾಜದ ಅಭಿವೃದ್ಧಿಯ ಮಾದರಿಯಾಗಿದೆ, ಒಂದು ರಾಷ್ಟ್ರವು ಸಶಕ್ತವಾಗಿ ನಿರ್ಮಾಣವಾಗಲು ಗ್ರಾಮಗಳ ಸ್ವಾವಲಂಬನೆಯು ಅತ್ಯಂತ ಮಹತ್ವದ್ದು ಎನ್ನುವ ಅವರ ಚಿಂತನೆ ಗ್ರಾಮಗಳ ವೀಕಾಸಕ್ಕೆ ಕಾರಣವದದ್ದನ್ನು ಅಲ್ಲಗೆಳೆಯುವಂತಿಲ್ಲ.ಗಾಂಧೀಜಿಯವರು ಸಮಾಜದ ಹಿತವನ್ನು ಚಿಂತಿಸುವದರ ಮೂಲಕ ಸಾಮಾಜಿಕ ಸ್ವಾಸ್ತ್ಯವನ್ನು ನೆಲೆಯೂರಲು ಶ್ರಮಿಸಿದ್ದಾರೆ. ಅವರು ಸತ್ಯಕ್ಕೆ ನೀಡುತ್ತಿದ್ದ ಪ್ರಾಶಾಸ್ತ್ಯ ಅನುಕರಣಿವಾದದ್ದು, ಇವರ ಅಹಿಂಸಾ ನೀತಿ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದೆ. ಇವರ ಗ್ರಾಮಸ್ವರಾಜ್ಯದ ನೀಲುವು ಗ್ರಾಮೀಣ ಪುನರಚನೆಗೆ ಕಾರಣಿಭೂತವಾಗಿದೆ, ಸರ್ವೋದಯ ಎನ್ನುವ ಕಲ್ಪನೆ ಸರ್ವರ ಹಿತವನ್ನು ಬಯಸಿ ಸಮಾಜದಲ್ಲಿ ಹರದಿದ್ದ ತಾರತಮ್ಯವನು ಹೋಗಲಾಡಿಸಲು ನೇರವಾಗಿದೆ
–ಡಾ ಸಾಯಿಬಣ್ಣ ಮೂಡಬೂಳ, ಸಹಾಯಕ ಪ್ರಾಧ್ಯಪಕರು ಶ್ರೀ ಪ್ರಭು ಮಹಾವಿದ್ಯಾಲಯ ಸುರಪುರ
