
ಒಂದು ರಾಷ್ಟ್ರದ ಸಂಸ್ಕೃತಿ ಜನರ ಹೃದಯ ಮತ್ತು ಆತ್ಮದಲ್ಲಿ ನೆಲೆಸಿದೆ ಎಂಬ ಮಹಾತ್ಮ ಗಾಂಧೀಜಿಯವರ ನುಡಿಯಂತೆ ದೇಶದ ವಿವಿಧ ಸಂಸ್ಕೃತಿಯನ್ನು ಬಿಂಬಿಸಿ ಏಕತೆಯನ್ನು ಕಾಪಿಟ್ಟುಕೊಳ್ಳುವ ವಿಶಿಷ್ಟ ಕಾರ್ಯಕ್ರಮಗಳು ಇಂದು ಸೈದಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವದ ಪ್ರಯುಕ್ತ ಜರುಗಿದವು.
ಸ್ವಾತಂತ್ರ್ಯದ ಉದಯ ರವಿ ಹೊತ್ತು ತಂದ ಗಣತಂತ್ರದ ಬೆಳಕಿನಲ್ಲಿ ಪ್ರಜೆಗಳು ಪ್ರಭುಗಳಾದ ದಿನವನ್ನು ಆಚರಿಸಲು ಸಂಭ್ರಮದಿಂದ ಸೇರಿದ ಶಾಲಾ ಮಕ್ಕಳಿಂದ ಪ್ರಭಾತಪೇರಿ, ಕ್ವಿಜ್ ,ಭಾಷಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂವಿಧಾನದ ಮಹತ್ವ ಅಂಬೇಡ್ಕರ್ ಅವರ ಜೀವನ,ನಾಗರಿಕರ ಹಕ್ಕು ಮತ್ತು ಕರ್ತವ್ಯಗಳು ಅವುಗಳ ಅನು ಪಾಲನೆ ಕುರಿತು ಮಕ್ಕಳು ಮಾತನಾಡಿದರು.
ಒನಕೆ ಓಬವ್ವ ಹಾಡಿಗೆ ವಿಶೇಷವಾಗಿ ಏಳನೇ ತರಗತಿ ವಿದ್ಯಾರ್ಥಿಗಳು ನೃತ್ಯ ಮಾಡಿದ್ದು ಅತ್ಯಂತ ವಿಶೇಷವಾಗಿತ್ತು. ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ 5ನೇ ತರಗತಿ ವಿದ್ಯಾರ್ಥಿ ಪಲ್ಲವಿ ಶರಣಪ್ಪ ಇವಳನ್ನು ಶಾಲಾ ವತಿಯಿಂದ ಹಾಗೂ ಎಸ್ ಡಿ ಎಮ್ ಸಿ ಊರಿನ ಗಣ್ಯರು ಸನ್ಮಾನಿಸಿ ಗೌರವಿಸಿದರು. ಗಣಿತ ಕಲಿಕಾ ಆಂದೋಲನ ವಿಶೇಷ ಪರೀಕ್ಷೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಬಹುಮಾನ ಪಡೆದ ರಂಜಿತಾ1000ರೂ ಈಶ್ವರಿ 600 ರೂ ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ sdmc ನಿಂಗನಗೌಡ ಪೊಲೀಸ್ ಪಾಟೀಲ್ ಸೈಯದ್ ಪಟೇಲ್, ಶಿವು ವಿಶ್ವಕರ್ಮ,ತಿಮ್ಮಯ್ಯ, ಭೀಮರಾಯ ಮೊದಲಾದ ಊರಿನ ಗಣ್ಯರು ಹಾಗೂ ಶಾಲೆಯ ಶಿಕ್ಷಕರಾದ ರಾಜಶೇಖರ, ಸಾವಿತ್ರಿ, ಸುನಿತಾ ನಾಗರತ್ನ,ರಾಜಶ್ರೀ, ಸೋನಾಲಿನಿ, ವೆಂಕಣ್ಣ ಅಯ್ಯಮ್ಮ,ಭಾಗ್ಯ ದೊರೆ ಮತ್ತು ಹಿರಿಯ ವಿದ್ಯಾರ್ಥಿಗಳು ಶಾಲಾ ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಸಾಪ ಬಿಡಿ ವಲಯ ಅಧ್ಯಕ್ಷರಾದ ಶರಣಬಸವ ಪೊಲೀಸ್ ಬಿರಾದಾರ್ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ವಿದ್ಯಾರ್ಥಿ ಬೀರಲಿಂಗ ನಿರ್ವಹಿಸಿದನು.
