ಆಳಂದ ತಹಶೀಲ್ದಾರ ರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ

By admin

ಆಳಂದ:ರಾಷ್ಟ್ರೀಯ ಮತದಾರರ ದಿನ-2024 ರ ಸಂಭಂದವಾಗಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಆಳಂದ ತಾಲೂಕಿನ ದಂಡಾಧಿಕಾರಿಗಳಾದ ಯಲ್ಲಪ್ಪ ಬಿ ಸುಬೇದಾರ್ ಅವರಿಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಟೌನ್ ಹಾಲನಲ್ಲಿ ನಡೆದ ಜನವರಿ 25 ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಕಲಬುರ್ಗಿ ಜಿಲ್ಲೆಯಿಂದ ಅತ್ಯುತ್ತಮ ಸಹಾಯಕ ಮತದಾರ ನೋಂದಾಣಿ ಅಧಿಕಾರಿ ಎಂದು ಆಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್ ಅವರಿಂದ ಪ್ರಶಸ್ತಿ ನೀಡಲಾಯಿತ್ತು.