ನಾಯಕನಿಗೆ ಚರಿತ್ರೆಯ ಅರಿವು ಮತ್ತು ಭವಿಷ್ಯದ ಕಲ್ಪನೆ ಇರಬೇಕು

“ಹಿಂದೆ ಗುರವಿರಬೇಕು ಮುಂದೆ ಗುರಿಯಿರಬೇಕು” ಎಂಬ ಮಾತಿನಂತೆ,ನಾಯಕನಾದವನಿಗೆ ಚರಿತ್ರೆಯ ಸಂಪೂರ್ಣ ಅರಿವಿರ ಬೇಕು,ಹಾಗೆಯೇ ಭವಷ್ಯದ ಬಗ್ಗೆ ಸ್ಪಷ್ಟವಾದ ಚಿಂತನೆ ಇರಬೇಕು,ಜೊತೆಗೆ ವಾಸ್ತವವನ್ನು ಸರಿಯಾಗಿ ಗ್ರಹಿಸುವ ಸೂಕ್ಷ್ಮತೆ ಇರಬೇಕು,ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೊತ್ತರದ ಭಾರತದಲ್ಲಿ ಇತಂಹ ಬಹಳಷ್ಟು ಜನ ನಾಯಕರಿದ್ದರು,ಪ್ರಸ್ತುತ ಇಂತ ನಾಯಕರನ್ನು ದೀಪ ಹಚ್ಚಿ ಹುಡಕುವ ಪರಿಸ್ಥಿತಿಯಲ್ಲಿ ನಾವಿದ್ದೆವೆಂದರೆ ತಪ್ಪಾಗಲಿಕ್ಕಿಲ್ಲಾ,
ಅಂದು ರಾಜಕಾರಣವೆನ್ನುವದೊಂದು ಜನಸೇವೆಯಾಗಿತ್ತು,ಸೇವಾ ಮನೋಭಾವದವರು ಮಾತ್ರ ರಾಜಕಾರಣಕ್ಕೆ ಬರುತ್ತಿದ್ದರು ಆದರೆ ಹೀಗ ರಾಜಕಾಣವೆನ್ನುವದು ಜನಸೇವೆಯಾಗಿ ಉಳಿಯದೆ ಅದು ಒಂದು ರೀತಿಯ ವ್ಯಾಪಾರವಾಗಿ ಬಿಟ್ಟಿದೆ, ಇಂದು ರಾಜಕಾರಣಕ್ಕೆ ಬರುವ ಬಹುತೇಕರಿಗೆ ನಮ್ಮ
ಇತಿಹಾಸವು ಗೊತ್ತಿಲ್ಲಾ,ಭವಷ್ಯದ ಚಿಂತನೆಯು ಇಲ್ಲಾ,ವಾಸ್ತವದ ಪರಸ್ಥಿತಿ ಅವಲೋಕನವು ಇಲ್ಲಾ, ಅವರಿಗೆ ಗೊತ್ತಿರೊದೆಂದರೆ ದುಡ್ಡ ಹೇಗ ಮಾಡಬೇಕು ಮತ್ತು
ನಾಯಕರನ್ನು ಹೇಗೆ ಮೆಚ್ಚಿಸಬೇಕೆನ್ನೊದು ಮಾತ್ರ ತುಂಬಾ ಚನ್ನಾಗಿ ಗೊತ್ತಿದೆ ಅದಕ್ಕಾಗಿ ಅವರು ಸ್ವಾಭಿಮಾನವಿಲ್ಲದೆ
ಗುಲಾಮಿಗಿರಿ ಬೇಕಾದರು ಮಾಡುವರು,
ಸ್ವಂತ ಆಲೋಚನೆಗಳಂತು ಇಲ್ಲವೆಯಿಲ್ಲಾ ಮತ್ತು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯು ಇಲ್ಲಾ, ಯಾರದೊ ಕೈಗೊಂಬೆಯಾಗಿ ಕೆಲಸ ಮಾಡುವವರು ಇಂದು ನಾಯಕರುಗಳಾಗಿ ಉದ್ಭವಿಸುತ್ತಿರುವರೆ ಹೊರತು ನೈಜ್ಯವಾದ ಸಾಮಾಜಿಕ ಹೋರಾಟಗಳಿಂದ ದೂರವಿದ್ದುಕೊಂಡು ಅಥವ ಮಾಡಿದರು ಸಹ ಪ್ರಮಾಣಿಕ ಹೋರಾಟಗಳುನ್ನು ಮಾಡದೆ ಹೊಂದಾಣಿಕೆಮಾಡಿಕೊಂಡು ಅಥವಾ ಇನ್ಯಾವುದೊ ಒಂದು ರೀತಿಯಲ್ಲಿ ದೇಶದ ಕಾನೂನನ್ನು ಮುರಿದು ನೈಸರ್ಗಿಕ ಸಂಪತ್ತನ್ನು ಲೂಟಿಮಾಡಿ ಇಲ್ಲವೆ,ಜನ ಸಾಮಾನ್ಯರನ್ನು ಮೊಸಗೊಳಿಸಿ ಗಳಿಸಿ ಸಂಪಾದಿಸಿದ ಬಿಟ್ಟಿ ದುಡ್ಡಿನ ಒಂದಾಣೆಯನ್ನು ಸಾಮಾಜಿಕ ಕೇಲಸ ಕಾರ್ಯಗಳಲ್ಲಿ ತೊಡಗಿಸಿ ಅದರಿಂದ ಜನರ ಮನಸ್ಸನ್ನು ಗೆಲ್ಲುವ ಮಹಾನಾಟಕ ಮಾಡುವ ಮೂಲಕ ಮಾತ್ರದಾರಿಯಾಗಿ ರಾಜಕಾರಣಕ್ಕೆ ಬಂದವರ ಸಂಖ್ಯೆ ಮತ್ತು ಯಾರದೋ ನಾಮ ಬಲದಿಂದ ಇಲ್ಲವೆ ಇನ್ಯಾವುದೊ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ರಾಜಕಾರಣಕ್ಕೆ ಬಂದು, ರಾಜಕೀಯ ಅಧಿಕಾರವನ್ನು ಪಡೆದವರೆ ಇಂದು ರಾಜಕಾರಣದಲ್ಲಿ ಹೆಚ್ಚಾಗಿದ್ದಾರೆ,ಇಂತ ನಾಯಕರಿಂದ ಜನ ಸಾಮಾನ್ಯರ ಅಭಿವೃದ್ಧಿಯನ್ನು ನೀರಕ್ಷಿಸುವದು ಸಾಧ್ಯವೆ? ಇಂತವರು ಜನಪ್ರೀಯ ನಾಯಕರಾದರು ಸಹ ಜನರ ನೋವಿಗೆ ಸ್ಪಂದಿಸುವ ಸಹೃದಯಿ ನಾಯಕನಾಗುವದ ಅಸಾದ್ಯವೆ?
ಸಾವಿರಾರು ವರ್ಷಗಳ ಬಹುತ್ವದ ಪ್ರಭುದ್ಧ ಚರಿತ್ರೆಯನ್ನೊಂದಿರುವ ನಮ್ಮ ದೇಶದ ನೆಲ ಜಲ ಮೂಲದ ತಾಯಿಹೃದಯಿ ಸಂಸ್ಕೃತಿಯ ಜಾತ್ಯಾತೀತ ಪ್ರಜಾತಂತ್ರ ರಾಷ್ಟ್ರವನ್ನು ಸುಭದ್ರವಾಗಿ ಕಾಪಾಡಿಕೊಂಡು ಜಗತ್ತಿಗೆ ಮಾದರಿಯಾದ ನಮ್ಮ ಸುಂದರ ಪ್ರಜಾಪ್ರಭುತ್ವವನ್ನೆಗೆ ಉಳಿಸಿಕೊಳ್ಲುವರೊ ದೇವರೆ ಬಲ್ಲ, “ಯಥಾ ರಾಜ ತತಾಹಾ ಪ್ರಜೇಗಳೆನ್ನುವಂತೆ” ಪ್ರಜಗಳು ಪ್ರಜಾಪ್ರತಿನೀದಿಗಳ ಜಾಡನ್ನಿಡಿದು ಹೋರಿಟಿದ್ದಾರೆ,ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚನುವಾಣೆಗಳಲ್ಲಿ ಬಹುತೇಕ ನಮ್ಮ ಸುಶಿಕ್ಷಿತ ಮತದಾರು ಮತಗಳೆ ಚಲಾಯಿಸುವದಿಲ್ಲಾ,ಒಂದುವೇಳೆ ಚಲಾಯಿಸಿದರು ಜಾತಿ ಧರ್ಮ ಹಣ ಹೆಂಡಗಳಿಲ್ಲದೇ ಸೂಕ್ತ ಅಭ್ಯಾರ್ಥಗಳಿಗೆ
ಚಲಾಯಿಸುವದು ಅಪರೂಪವಾಗಿದೆ,ಹೀಗಾಗಿ ನಮ್ಮ ನಾಯಕರುಗಳು
ಸುಡುವಾಜ್ಞ್ನಿ ಕೊಂಡದಂತೆ
ಉರಿದುರಿದು ಬಿಳುವರು,
ಕೋಮು ದಳ್ಳೂರಿಗಳಲ್ಲಿ
ಭ್ರಷ್ಟಾಚಾರದ ಕೂಪದಲ್ಲಿ,
ಅತ್ಯಚಾರದ ಆಗರದಲ್ಲಿ
ಮೌಡ್ಯ ಕಂದಾಚಾರಗಳಲ್ಲಿ ಮುಳಗಿ,
ಹಣಬಲ ತೊಳಬಲದಲ್ಲಿ
ಪ್ರಜಾಪ್ರಭುತ್ವ ಸೊತು ಸೊರಗುತ್ತಿದೆಂದನು,
ನಮ್ಮ ರಸ್ತಾಪೂರದ ಭೀಮಕವಿಗಳು.
ಜಾತಿ,ಧರ್ಮ, ದೇವರು ,ಮಂದಿರ ,ಮಸಿದಿ,ಗೂಡಿ ಚರ್ಚ್ ಮತ್ತು ಪ್ರತಿಮೆಗಳಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಕೋಮು ಗಲಬೆಯ ಸೃಷ್ಟಿಸಿ ಅಧಿಕಾರ ಪಡೆಯಬೇಕೆನ್ನುವ ನಾಯಕರುಗಳ ಮಧ್ಯ ಇಂದು ಪ್ರಜಾಪ್ರಭುತ್ವದ ಹಬ್ಬ (ಚುನಾವಣೆ) ವನ್ನು ಪ್ರಜಗಳು ಮತ ಚಲಾಯಿಸುವ ಮೂಲಕ ಆಚರಿಸಬೇಕಿದೆ, ಮತ ಚಲಾಯಿಸುವಾಗ ಪ್ರಜಗಳು ಬಹಳ ಎಚ್ಚರವಹಿಸಿ ಮತಚಲಾಯಿಸಬೇಕಾದ ಅನಿವಾರ್ಯತೆ ಇದೆ,ಹೀಗಾಗಿ ದೇಶದ ಮತದಾರ ಬಂದುಗಳು
ನಾಗರಿಕ ಸಾಮಜವನ್ನು ಸುಭದ್ರವಾಗಿ ಕಟ್ಟಲು ಬಸವಾದಿ ಶಿವಶರಣ ಶರಣಿಯರಾಶೆಯಂತೆ,ಬುದ್ಧನ ಬೆಳಕಲ್ಲಿ ಬಾಬಾ ಸಾಹೇಬರ ಸಂವಿಧಾನದ ಮೂಲಕ ಸಮ ಸಮಾಜವನ್ನು
ಕಟ್ಟುವ ಕನಸುಳ್ಳ ನಾಯಕರಿಗೆ ಮತ ಹಾಕಿ ಗೆಲ್ಲಿಸ ಬೇಕಾದ ಸಂದ್ಗಿದ್ದ ಪರಸ್ಥಿತಿ ದೇಶವಾಸಿಗರದಾಗಿದೆ,
ಕಲ್ಯಾಣ ರಾಜ್ಯವನ್ನು ಕಟ್ಟಲು ಪ್ರಜಾಪ್ರಭುತ್ವ
ಗಟ್ಟಿಗೊಳ್ಳಿಸಲು,ದೇಶದ ಭವಷ್ಯವನ್ನು ರೂಪಿಸಲು ಸಂಸತ್ತಿನಲ್ಲಿ ಪ್ರಜಾಪ್ರತಿನೀದಿಗಳು ಸಂವಿಧಾನತ್ಮಕವಾಗಿ ದೇಶದ ಒಳಿತಿಗೆ ಬೇಕಾದ ಕಾಯ್ದೆಕಾನೂನುಗಳನ್ನು ರೂಪಿಸಿ ಕಾರ್ಯಾಂಗದ ಮೂಲಕ ಪ್ರಜಗಳಿಗೆ ತಲುಪಿಸಿ,
ಪ್ರಜಗಳ ಪ್ರಗತಿಯ ಮೂಲಕ ದೇಶದ ಪರ್ಗತಿಗಾಗಿ ಉತ್ತಮ ನಾಯಕರಿಗೆ ಮತ ಹಾಕಿ ಪ್ರತಿನಿಧಿಗಳಾಗಿ ಆಯ್ಕೆಮಾಡಿಕೊಳ್ಳುವ ಮತದಾನದ ಹಕ್ಕು ಮತ್ತು ಚುನಾವಣೆಯ ವ್ಯವಸ್ಥೆಯನ್ನು ಕೊಟ್ಟ ನಮ್ಮ ಸಂವಿಧಾನಕ್ಕೆ ಕೃತಜ್ಞನರಾಗಿ, ಸಂವಿಧಾನವನ್ನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಜಾತ್ಯಾತೀತ ಸುಭದ್ರ, ಸಂಮೃದ್ಧ ಭಾರತವನ್ನು ಮತ್ತಷ್ಟು ಸುಭದ್ರ ಹಾಗೂ ಸಮೃದ್ಧವಾಗಿಸಲು ಕಡ್ಡಾಯವಾಗಿ ಎಲ್ಲರೂ ಮತಗಟ್ಟೆಗೆ ಹೊಗಿ ಸೂಕ್ತ ಅಭ್ಯಾರ್ಥಿಗೆ ಮತಚಲಾಯಿಸುವ ಮೂಲಕ ಸಂವಿಧಾನ ರಕ್ಷಿಸಿ ಭವ್ಯ ಭಾರತವನ್ನು ಕಟ್ಟಬೇಕಿದೆ.
ಆ ಮೂಲಕ ನಮ್ಮ ಸಂವಿಧಾನವನ್ನು ಉಳಿಸಿಕೊಂಡು ಹಲವು ಜಾತಿ ಧರ್ಮಗಳು ಹೊಂದಾಗಿ ಬದುಕಿ ಬಾಳುವ ಬಿಡಾದ ನಮ್ಮ ಜಾತ್ಯಾತೀತ ರಾಷ್ಟವನ್ನು ರಾಷ್ಟ್ರ ಕವಿ ಕುವೆಂಪು ರವರ “ಆ ಮತ ಈ ಮತವೆನ್ನದೆ, ಮನುಜಮತದ ಆದಿಯಿಡಿದು, ವಿಶ್ವಮತದೆಡೆಗೆ” ಸಾಗಿ ದೇಶವನ್ನು ಸರ್ವಜನಾಂಗಗಳ ಶಾಂತಿಯ ತೋಟವಾಗಿ ರೂಪಿಸಬೇಕಿದೆ, ಅದಕ್ಕಾಗಿ ಜಾತಿ ಧರ್ಮ ಹಣ ಹೆಂಡಗಳ ಆಮಿಷ್ಯಕ್ಕೆ ಒಳಗಾಗದೆ ಉತ್ತಮ ಅಭ್ಯಾರ್ಥಿಗೆ ಮತ ಚಲಾಯಿಸೋಣ.
– ಶ್ರೀಶೈಲ ಬಿರಾದಾರ ನಾಗನಟಗಿ 9008659817
