ಎರಡು ದಿನ ಕಾವ್ಯ-ಕಥಾ ಕಮ್ಮಟ

By admin


ಶಹಾಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಹಾಪುರ ರದ ವತಿಯಿಂದ ಬುದ್ಧ,,ಬಸವ,ಅಂಬೇಡ್ಕರ್ ಜಯಂತಿ ನಿಮಿತ್ಯ ದಿನಾಂಕ ಮೇ 25 ಹಾಗೂ 26 2024 ರ ಎರಡು ದಿನಗಳ ಕಾವ್ಯ ಮತ್ತು ಕಥಾ ಕಮ್ಮಟವನ್ನು ತಾಲೂಕಿನ ಇಬ್ರಾಹಿಂಪುರ್ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಸಾಯಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಮ್ಮಟದಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ಡಾ ಅರುಣ ಜೋಳದ ಕೂಡ್ಲಿಗಿ, ಡಾ. ವಿಕ್ರಮ್ ವಿಸಾಜಿ, ಮಹಿಪಾಲರಡ್ಡಿ ಮೂನ್ನೂರ, ಪ್ರೊ ಕೃಷ್ಣ ನಾಯಕ ಹಾಗೂ ಡಾ.ಕಾವ್ಯಶ್ರೀ ಮಾಹಾಗಾಂವ್ ಕರ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಲಿದ್ದಾರೆ. ಸದರಿ ಕಮ್ಮಟ ದಲ್ಲಿ ನಮ್ಮ ಭಾಗದ ಯುವಕವಿಗಳು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಕಮ್ಮಟ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಾಗೂ ಭಾಗವಹಿಸಲು ಇಚ್ಚಿಸುವ ಶಿಬಿರಾರ್ಥಿಗಳು ಶಿಬಿರದ ನಿಯಮಗಳಿಗೆ ಬದ್ಧರಾಗಿ ಭಾಗವಹಿಸಿಲು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರವೀಂದ್ರನಾಥ ಹೊಸಮನಿ ರವರು ಮನವಿ ಮಾಡಿದ್ದಾರೆ.
ಶಿಬಿರದ ಹೆಚ್ಚಿನ ಮಾಹಿತಿಗಾಗಿ ಹಾಗೂ ಶಿಬಿರದ ನೊಂದಣಿಗಾಗಿ ಈ ಕೆಳಗಿನ ಶಿಬಿರಾಧಿಕಾರಿಗಳಾದ
1. ರಾಘವೇಂದ್ರ ಹಾರಣಗೇರಾ ಗೌರವ ಕಾರ್ಯದರ್ಶಿಗಳು 9740722431
2.ಸುರೇಶ ಕೆ,ಅರುಣಿ ಗೌರವ ಕಾರ್ಯದರ್ಶಿಗಳು 9901559873. ಸಂಯೋಜನಾಧಿಕಾರಿಗಳಾದ
3. ಶಂಕರ್ ಹುಲಕಲ್ 9743735650
4. ನಿಂಗಣ್ಣ ನಾಟೆಕಾರ್ 96633277700 ಇವರುಗಳನ್ನು ಸಂಪರ್ಕಿಸಲು ವಿನಂತಿ.
ಡಾ. ರವೀಂದ್ರನಾಥ್. ಹೊಸಮನಿ 9902570037
ಅಧ್ಯಕ್ಷರು. ತಾ. ಕ. ಸಾ. ಪ. ಶಹಾಪುರ