ಬೆಳೆಹಾನಿ ಪರಿಹಾರಕ್ಕೆ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ

By admin

ಬೆಳೆಹಾನಿ ಪರಿಹಾರಕ್ಕೆ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ: ಜಿಲ್ಲಾಧಿಕಾರಿ

ಯಾದಗಿರಿ: ಮುಂಗಾರು ಹಂಗಾಮಿನಲ್ಲಿ ಬರಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗೆ ಅರ್ಹತೆಯಂತೆ ಬಾಕಿ ಉಳಿದಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಸರ್ಕಾರದಿಂದ ಡಿ.ಬಿ.ಟಿ ಮೂಲಕ ಹಣ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ತಿಳಿಸಿದ್ದಾರೆ.

ರೈತರು ತಮ್ಮ ಖಾತೆಗೆ ಜಮಾ ಆಗಿರುವ ಹಣದ ಕುರಿತು ಪರಿಶೀಲಿಸಿಕೊಂಡು, ಬೆಳೆಹಾನಿ ಪರಿಹಾರದ ಹಣ ಜಮಾ ಆಗದೇ ಇದ್ದ ಸಂದರ್ಭದಲ್ಲಿ ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ಪರಿಶೀಲಿಸಿಕೊಳ್ಳಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ಸಂಖ್ಯೆ 08473253950, ಯಾದಗಿರಿ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ 08473253611, ಶಹಾಪುರ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ 08479243321, ಸುರಪುರ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ 08443256043, ಗುರುಮಿಠಕಲ್ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ 8708417957 , ವಡಿಗೇರಾ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ 6360077481, ಹುಣಸಗಿ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ 9019132429 ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.